ಜಾತ್ರೆಗೆಂದು ತೆರಳಿದ ವಿದ್ಯಾರ್ಥಿನಿ ನಾಪತ್ತೆ

ಶೇರ್ ಮಾಡಿ

 

ಕೊಣಾಜೆ : ಉಳ್ಳಾಲ ತಾಲೂಕಿನ ಪಜೀರು ಗ್ರಾಮದ ಅಡ್ಕ ನಿವಾಸಿ ಮನೆಯಿಂದ ಗೆಳೆಯರೊಂದಿಗೆ ಜಾತ್ರೆಗೆಂದು ತೆರಳಿದ್ದ ಅಪ್ರಾಪ್ತ ಬಾಲಕಿ ನಾಪತ್ತೆಯಾಗಿದ್ದು ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಲುಕ್ ಔಟ್ ನೋಟಿಸ್‌ ಜಾರಿ ಮಾಡಿದ್ದಾರೆ.

ಪಜೀರು ಅಡ್ಕದ ಜಗದೀಶ್ ಎಂಬವರ ಪುತ್ರಿ ಚೈತನ್ಯ (16) ನಾಪತ್ತೆಯಾದ ಬಾಲಕಿ. ಈಕೆ ಹರೇಕಳ ರಾಮಕೃಷ್ಣ ಪ್ರೌಡಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದು, ಪರೀಕ್ಷೆ ಮುಗಿಸಿ ಮನೆಯಲ್ಲಿ ಇದ್ದವಳು. ಎ.12ರಂದು ಬೆಳಗ್ಗೆ ಮನೆಯಲ್ಲಿ ಗೆಳೆಯರೊಂದಿಗೆ ಪೊಳಲಿ ಜಾತ್ರೆಗೆಂದು ತೆರಳಿದ್ದು ಬಳಿಕ ರಾತ್ರಿಯ ವರೆಗೂ ಮನೆಗೆ ವಾಪಸ್ಸಾಗದೇ ಇದ್ದುದರಿಂದ ಮನೆಯವರು ಆತಂಕಗೊಂಡು ಗೆಳೆಯರು ಹಾಗೂ ಸಂಬಂಧಿಕರ ಮನೆಯಲ್ಲಿ ಹುಡುಕಾಡಿದರೂ ಬಾಲಕಿ ಪತ್ತೆಯಾಗಿರಲಿಲ್ಲ.

ಬಳಿಕ ಮನೆಯವರು ಕೊಣಾಜೆ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

 

Leave a Reply

error: Content is protected !!