ಮೇ.30; ಪಟ್ಲಡ್ಕ ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿಯ ಪ್ರಥಮ ವಾರ್ಷಿಕೋತ್ಸವ: ಕುಣಿತ ಭಜನೆ, ಉಚಿತ ನೋಟ್ ಪುಸ್ತಕ ವಿತರಣೆ

ಶೇರ್ ಮಾಡಿ

 

ಮೇ.30; ಪಟ್ಲಡ್ಕ ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿಯ ಪ್ರಥಮ ವಾರ್ಷಿಕೋತ್ಸವ: ಕುಣಿತ ಭಜನೆ, ಉಚಿತ ನೋಟ್ ಪುಸ್ತಕ ವಿತರಣೆ

ಕೊಕ್ಕಡ: ಕಡಬ ತಾಲೂಕಿನ ಪಟ್ಲಡ್ಕ-ಕೌಕ್ರಾಡಿಯಲ್ಲಿರುವ ಶ್ರೀ ಗಡಿಯಾಡಿ ಅದಿಮೊಗೇರ್ಕಳ ಸ್ವಾಮಿ ಕೊರಗಜ್ಜ ಹಾಗೂ ಪರಿವಾರ ದೈವಗಳ ದೈವಸ್ಥಾನದ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿಯ ಪ್ರಥಮ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವು ಮೇ 30ರಂದು ಶನಿವಾರ ಸಂಜೆ 5 ಗಂಟೆಯಿಂದ ದೈವಸ್ಥಾನದ ವಠಾರದಲ್ಲಿ ನಡೆಯಲಿದೆ.

ಕಾರ್ಯಕ್ರಮದ ಅಂಗವಾಗಿ ಸಭಾ ಕಾರ್ಯಕ್ರಮ, ವಿವಿಧ ಭಜನಾ ಮಂಡಳಿಗಳಿಂದ ಕುಣಿತ ಭಜನೆ ಹಾಗೂ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆಯನ್ನು ಹಮ್ಮಿಕೊಳ್ಳಲಾಗಿದೆ.

ಸಭಾ ಕಾರ್ಯಕ್ರಮದ ಗೌರವಾಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಆಡಳಿತ ಮಂಡಳಿಯ ಅಧ್ಯಕ್ಷ ತುಕ್ರಪ್ಪ ಶೆಟ್ಟಿ ನೂಜೆ ವಹಿಸಲಿದ್ದು, ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿಯ ಅಧ್ಯಕ್ಷೆ ಗೀತಾ ನೆಲ್ಯಡ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಪುರುಷೋತ್ತಮ ಉಪ್ಪಿನಂಗಡಿ ದೀಪ ಪ್ರಜ್ವಲನೆ ನೆರವೇರಿಸಲಿದ್ದು, ಶ್ರೀಧಾಮ ಮಾಣಿಲದ ಪರಮಹಂಸ ಶ್ರೀ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಕಡಬ ತಾಲೂಕು ಅಧ್ಯಕ್ಷ ಸುಂದರ ಗೌಡ ಒಗ್ಗು, ಕೃ.ಪ.ಸ. ಸಂಘ ನೆಲ್ಯಾಡಿಯ ಕಾರ್ಯನಿರ್ವಹಣಾಧಿಕಾರಿ ದಯಾಕರ ರೈ, ಹರೀಶ್ ನೆರಿಯ, ಕೊಕ್ಕಡ ಭಜನಾ ಮಂಡಳಿಯ ಹಿರಿಯ ಭಜಕ ಪುರುಷೋತ್ತಮ ಗೌಡ ಮಡ್ಯಲಗುಂಡಿ ಹಾಗೂ ಶ್ರೀ ಕ್ಷೇತ್ರ ಆಡಳಿತ ಮಂಡಳಿಯ ಉಪಾಧ್ಯಕ್ಷ ಹರೀಶ್ ಪಿ. ಭಾಗವಹಿಸಲಿದ್ದಾರೆ.

ಸಂಜೆ 6 ಗಂಟೆಯಿಂದ ವಿವಿಧ ಆಹ್ವಾನಿತ ಭಜನಾ ತಂಡಗಳಿಂದ ಕುಣಿತ ಭಜನಾ ಕಾರ್ಯಕ್ರಮ ನಡೆಯಲಿದ್ದು, ಕೊಕ್ಕಡ, ಕೌಕ್ರಾಡಿ, ನೆಲ್ಯಾಡಿ, ಬಿಳಿನೆಲೆ, ಇಚಿಲಂಪಾಡಿ, ಪಾಳೆಂಜ, ಪಟ್ರಮೆ, ತಿರ್ಲೆ, ಗೋಳಿತ್ತೊಟ್ಟು, ಮಾದೇರಿ, ಪೇರುಮಜಲು, ಕಳಪ್ಪಾರು ಸೇರಿದಂತೆ ವಿವಿಧ ಭಾಗಗಳ ಭಜನಾ ಮಂಡಳಿಗಳು ಭಾಗವಹಿಸಲಿವೆ. ಬೆಳ್ತಂಗಡಿಯ ಭಜೋರೇ ಮಾರುತಿ ಭಜನಾ ತರಬೇತುದಾರರ ತಂಡವೂ ವಿಶೇಷವಾಗಿ ಪಾಲ್ಗೊಳ್ಳಲಿದೆ.

ಕಾರ್ಯಕ್ರಮಕ್ಕೆ ಭಕ್ತಾದಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮಂಡಳಿಯ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಯದರ್ಶಿ ಮನವಿ ಮಾಡಿದ್ದಾರೆ.

 

Leave a Reply

error: Content is protected !!