ಕರ್ನಾಟಕ ನಾಯರ್ ಸರ್ವೀಸ್ ಸೊಸೈಟಿಗೆ ಮುರಳಿ ಹೊಸಮಜಲು ಅಧ್ಯಕ್ಷರಾಗಿ ಪುನರಾಯ್ಕೆ

ಶೇರ್ ಮಾಡಿ

 

ಮಂಗಳೂರು: ಕರ್ನಾಟಕ ನಾಯರ್ ಸರ್ವೀಸ್ ಸೊಸೈಟಿ, ಮಂಗಳೂರು ಘಟಕದ ವಾರ್ಷಿಕ ಸಾಮಾನ್ಯ ಸಭೆಯು ನಗರದ ಕೆ.ಪಿ.ಟಿ ಸಮೀಪದ ಎಸ್. ಕ್ಯೂಬ್ ಸೆಂಟರ್ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು. ಸಭೆಯ ಬಳಿಕ ನಡೆದ ಚುನಾವಣೆಯಲ್ಲಿ 2026–28ನೇ ಅವಧಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

murali_hosamajalu

ಸಂಘದ ಅಧ್ಯಕ್ಷರಾಗಿ ಮುರಳಿ ಹೊಸಮಜಲು ಅವರು ಮತ್ತೊಮ್ಮೆ ಅವಿರೋಧವಾಗಿ ಆಯ್ಕೆಯಾಗಿದ್ದು, ಕಾರ್ಯದರ್ಶಿಯಾಗಿ ವಿ.ಎಂ. ಸತೀಶನ್ ಅವರು ಪುನರಾಯ್ಕೆಯಾಗಿದ್ದಾರೆ. ಖಜಾಂಚಿಯಾಗಿ ಅಜಯಕುಮಾರ್ ನೇಮಕಗೊಂಡಿದ್ದಾರೆ.

murali_h_hosamajalu


ಉಪಾಧ್ಯಕ್ಷರಾಗಿ ವಾಸಂತಿ ನಾಯರ್, ಜಂಟಿ ಕಾರ್ಯದರ್ಶಿಯಾಗಿ ಮಂಜು ಅಜಿತ್ ಹಾಗೂ ಜಂಟಿ ಖಜಾಂಚಿಯಾಗಿ ರವೀಂದ್ರನಾಥ್ ಆಯ್ಕೆಯಾಗಿದ್ದಾರೆ. ಬೋರ್ಡ್ ಸದಸ್ಯರಾಗಿ ವಿಜಯಕುಮಾರ್, ಎಂ.ವಿ. ರಾಜನ್ ಮತ್ತು ಎ.ಎಸ್. ಮೋಹನ್ ಅವರನ್ನು ಆಯ್ಕೆ ಮಾಡಲಾಗಿದೆ.

ಕರ್ನಾಟಕ ನಾಯರ್ ಸರ್ವೀಸ್ ಸೊಸೈಟಿಗೆ ಮುರಳಿ ಹೊಸಮಜಲು ಅಧ್ಯಕ್ಷರಾಗಿ ಪುನರಾಯ್ಕೆ


ಸಮಿತಿಯ ಸದಸ್ಯರಾಗಿ ಜ್ಯೋತಿಷ್ ಕುಮಾರ್, ಜಯಲಕ್ಷ್ಮೀ ಚಂದ್ರಮೋಹನ್, ಮಣಿಕಂಠನ್, ವಿನೋದ್ ರಾಜ್, ಹರೀಶ್ ಗೋವಿಂದ್, ದೇವರಾಜ್, ವಿನಯನ್ ನಾಯರ್ ಸೇರಿದಂತೆ ಹಲವು ಸದಸ್ಯರು ಆಯ್ಕೆಯಾಗಿದ್ದಾರೆ.

murali_h_hosamajalu


ಮಹಿಳಾ ವಿಭಾಗದ ಅಧ್ಯಕ್ಷರಾಗಿ ಸುಜಾತಾ ನಾಯರ್, ಕಾರ್ಯದರ್ಶಿಯಾಗಿ ಶ್ರೀಜಾ ನಂಬಿಯಾರ್ ಹಾಗೂ ಖಜಾಂಚಿಯಾಗಿ ಗೋಪಿಕಾ ರಾಣಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಪ್ರಭಾ ವಿಜಯಕುಮಾರ್ ಮತ್ತು ಜಂಟಿ ಕಾರ್ಯದರ್ಶಿಯಾಗಿ ಅನಿತಾ ಜಯಚಂದ್ರನ್ ಅಧಿಕಾರ ಸ್ವೀಕರಿಸಲಿದ್ದಾರೆ.

murali_h_hosamajalu


ಚುನಾವಣಾ ಪ್ರಕ್ರಿಯೆಯನ್ನು ಉಡುಪಿ ಘಟಕದ ಸಜಿ ಪಿಳ್ಳೈ ಅವರು ಚುನಾವಣಾಧಿಕಾರಿಯಾಗಿ ನಿರ್ವಹಿಸಿದ್ದು, ಉಡುಪಿ ಘಟಕದ ಮೋಹನ್ ದಾಸ್ ಅವರು ವೀಕ್ಷಕರಾಗಿ ಭಾಗವಹಿಸಿ ಚುನಾವಣೆಯನ್ನು ಸುಗಮವಾಗಿ ನಡೆಸಿಕೊಟ್ಟರು.

 

Leave a Reply

error: Content is protected !!