ಇಂಡಿಯನ್ ಏವಿಯೇಷನ್ ಅಕಾಡೆಮಿ ಮಂಗಳೂರು :ವಿಮಾನಯಾನ ಕ್ಷೇತ್ರದ ಜನಪ್ರಿಯ ಕೋರ್ಸುಗಳು ಹಾಗೂ ವೃತ್ತಿಪರ ಅವಕಾಶಗಳ ಬಗ್ಗೆ ಕರಿಯರ್ ಗೈಡೆನ್ಸ್ ಸೆಮಿನಾರ್

ಶೇರ್ ಮಾಡಿ

ಮಂಗಳೂರಿನ ಪ್ರಮುಖ ಏವಿಯೇಷನ್ ಅಕಾಡೆಮಿಗಳಲ್ಲೊಂದಾದ ಇಂಡಿಯನ್ ಏವಿಯೇಷನ್ ಅಕಾಡೆಮಿಯಲ್ಲಿ 2024-25 ನೇ ಸಾಲಿನ ಪ್ರವೇಶಗಳು ಪ್ರಾರಂಭವಾಗಿದ್ದು, ಕೆಲವೇ ಸೀಟುಗಳು ಲಭ್ಯವಿವೆ . ದ್ವಿತೀಯ ಪಿ ಯು ಸಿ ಯಲ್ಲಿ ಉತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಇದೊಂದು ಸುವರ್ಣ ಅವಕಾಶ…!ವಿಮಾನಯಾನ ಕ್ಷೇತ್ರದ ಜನಪ್ರಿಯ ಕೋರ್ಸುಗಳು ಹಾಗೂ ವೃತ್ತಿಪರ ಅವಕಾಶಗಳ ಬಗ್ಗೆ ಕೆರಿಯರ್ ಗೈಡೆನ್ಸ್ ಸೆಮಿನಾರ್ ಆಯೋಜಿಸಲಾಗುವುದು.

ವಿಮಾನಯಾನ ಕ್ಷೇತ್ರಕ್ಕೆ ಸಂಬಂಧಪಟ್ಟ ಕೋರ್ಸುಗಳಾದ ಕ್ಯಾಬಿನ್ ಕ್ರೂ ಅಥವಾ ಗಗನ ಸಖಿ ತರಬೇತಿ ,ಏರ್‌ಪೋರ್ಟ್ ಗ್ರೌಂಡ್ ಸ್ಟಾಫ್ ಕೋರ್ಸ್ ,ಏರ್ ಟಿಕೆಟಿಂಗ್ ಅಂಡ್ ಟ್ರಾವೆಲ್ ಮ್ಯಾನೇಜ್ ಮೆಂಟ್ ,ಪೈಲಟ್ ಟ್ರೈನಿಂಗ್, ಬಿ ಬಿ ಎ ವಿದ್ ಏವಿಯೇಷನ್ ಅಂಡ್ ಹಾಸ್ಪಿಟಾಲಿಟಿ ಮ್ಯಾನೇಜ್ ಮೆಂಟ್ ಹಾಗೂ ವಿಮಾನಯಾನ ಕ್ಷೇತ್ರಲ್ಲಿ ಇರುವ ಉದ್ಯೋಗಾವಕಾಶಗಳ ಬಗ್ಗೆ ಸಮಗ್ರವಾದ ಮಾಹಿತಿಯನ್ನು ನೀಡಲಾಗುವುದೆಂದು ಆಡಳಿತ ಮಂಡಳಿ ತಿಳಿಸಿದೆ .

ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಈ ಕೆಳಗಿನ ನಂಬರಿಗೆ ಸಂಪರ್ಕಿಸಿರಿ.

Register by WhatsApp or call : 7848820414

ಕರಿಯರ್‌ ಗೈಡೆನ್ಸ್‌ ಎಂಬುದು ಪ್ರತಿ ವಿದ್ಯಾರ್ಥಿಗೆ ಅತಿಮುಖ್ಯ. ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಕರಿಯರ್‌ ಗೈಡೆನ್ಸ್‌ (ವೃತ್ತಿ ಮಾರ್ಗದರ್ಶಿ / ಶಿಕ್ಷಣ ಮಾರ್ಗದರ್ಶಿ) ಕುರಿತು ವಿಶೇಷ ತರಗತಿಗಳೇನು ಇಲ್ಲ. ಇದಕ್ಕೆ ಪಠ್ಯಕ್ರಮವು ಇಲ್ಲ. ತಮ್ಮ ಮಕ್ಕಳನ್ನು ಬಾಲ್ಯದಿಂದಲೇ / ಪ್ರಾಥಮಿಕ ಶಾಲಾ ಹಂತದಿಂದಲೇ ಟ್ಯೂಷನ್‌ಗೆ ಕಳುಹಿಸುವ ಬಹುಸಂಖ್ಯಾತ ಪೋಷಕರಿಗೆ ಕರಿಯರ್‌ ಗೈಡೆನ್ಸ್‌ ಪ್ರಾಮುಖ್ಯತೆಯು ಅಷ್ಟಾಗಿ ತಿಳಿದಿಲ್ಲ.ಪ್ರತಿ ವಿದ್ಯಾರ್ಥಿಯ ಕರಿಯರ್ / ಪ್ರೊಫೇಶನಲ್ ಜರ್ನಿ ಯಾವುದಾಗಿರಬೇಕು, ಹೇಗಿರಬೇಕು ಎಂದು ಮೊದಲೇ ಯೋಜನೆ ರೂಪಿಸಿಕೊಳ್ಳುವುದು. ಅಷ್ಟು ಮಾತ್ರವಲ್ಲ ನಾನು ಎಷ್ಟನೇ ವಯಸ್ಸಿಗೆ ಉದ್ಯೋಗ ಆರಂಭಿಸಬೇಕು. ಆ ಕ್ಷೇತ್ರದ ಹುದ್ದೆಗಳಲ್ಲಿ ಎಷ್ಟು ವರ್ಷಕ್ಕೆ ಎಷ್ಟನೇ ಹಂತದಲ್ಲಿ ಇರಬೇಕು, ಅಥವಾ ಆಸಕ್ತ ಉದ್ಯೋಗಕ್ಕೆ ಹೇಗೆಲ್ಲಾ ಸಿದ್ಧತೆ ಮಾಡಿಕೊಂಡು, ಯಾವೆಲ್ಲ ಕೋರ್ಸ್‌ ಓದಿಕೊಂಡು ರೆಡಿ ಆಗಬೇಕು. ಯಾವ ಕೋರ್ಸ್‌ ಓದಿದರೆ ಯಾವ ಕೆಲಸಕ್ಕೆ ಅನುಕೂಲ, ಯಾವ ಹುದ್ದೆಗೆ ಏನು ಓದಬೇಕು ಇದೆಲ್ಲವನ್ನು ತಿಳಿಸುವುದೇ ಕರಿಯರ್‌ ಗೈಡೆನ್ಸ್‌ .ಚಿಕ್ಕವಯಸ್ಸಿನಿಂದಲೇ ಕರಿಯರ್ ಗೈಡೆನ್ಸ್‌ ಆರಂಭಿಸುವುದರಿಂದ ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಸಮಗ್ರವಾಗಿ ತಿಳಿದುಕೊಳ್ಳಲು ಸಹಾಯವಾಗುತ್ತದೆ. ಈ ಕುರಿತ ಆಳವಾದ ಮೌಲ್ಯಾಂಶಗಳು ವಿದ್ಯಾರ್ಥಿಗಳಿಗೆ ತಮ್ಮ ಮುಂದಿನ ವಿಧ್ಯಾಭ್ಯಾಸ ಮತ್ತು ಪ್ರೊಫೇಶನಲ್ ಮಾರ್ಗಗಳ ಆಯ್ಕೆಗೆ ಸಹಾಯವಾಗುತ್ತದೆ. ವಿದ್ಯಾರ್ಥಿ ತನ್ನ ಆಪ್ಟಿಟ್ಯೂಡ್ ಮತ್ತು ಆಸಕ್ತಿಗಳನ್ನು ಗುರುತಿಸಿಕೊಂಡು ಉನ್ನತ ಶಿಕ್ಷಣಕ್ಕೆ, ಹಾಗೆಯೇ ವೃತ್ತಿಗೆ ಹೇಗೆ ಸನ್ನದ್ಧರಾಗಬೇಕು ಎಂದು ತಿಳಿಯಲು ಸುಲಭ ಮಾರ್ಗಗಳನ್ನು ಇದು ಒದಗಿಸುತ್ತದೆ.ಎಲ್ಲದಕ್ಕೂ ಹೆಚ್ಚಾಗಿ ಆರಂಭಿಕ ಕರಿಯರ್ ಗೈಡೆನ್ಸ್‌ ವಿದ್ಯಾರ್ಥಿಯ ಸಮಗ್ರ ಬೆಳವಣಿಗೆಯಲ್ಲಿ ಸಹಾಯವಾಗುತ್ತದೆ. ಇದು ಕೇವಲ ಶೈಕ್ಷಣಿಕ ಆಯ್ಕೆಗಳಿಗೆ ಸಹಾಯ ಮಾಡುವುದಲ್ಲದೇ, ಸ್ವಯಂ ಪ್ರಜ್ಞೆ ಮೂಡಿಸುತ್ತದೆ, ಉದ್ದೇಶ ಚಾಲಿತ ವೃತ್ತಿಜೀವನಕ್ಕೆ ಅಡಿಪಾಯ ಹಾಕಿಕೊಡುತ್ತದೆ. ವಿದ್ಯಾರ್ಥಿಗಳು ವಿವಿಧ ಬಗೆಯ ವೃತ್ತಿ ಆಯ್ಕೆಗಳನ್ನು ತಿಳಿಯಬಹುದು, ಬೇಕಾದ ಕೌಶಲಗಳ ಕುರಿತು ತಿಳಿಯಬಹುದು, ತಮ್ಮ ಗುರಿಗೆ ಬೇಕಾದ ದೀರ್ಘಕಾಲದವರೆಗಿನ ಶಿಕ್ಷಣ ಪ್ರಯಾಣವನ್ನು ರೂಪಿಸಿಕೊಳ್ಳಲು ಸಹಾಯ ಮಾಡುತ್ತದೆ ಕರಿಯರ್ ಗೈಡೆನ್ಸ್‌.

Leave a Reply

error: Content is protected !!