ನೆಲ್ಯಾಡಿ: ವಾಲಿಬಾಲ್ ತರಬೇತಿ ಶಿಬಿರ

ಶೇರ್ ಮಾಡಿ

ನೆಲ್ಯಾಡಿ ಜೆಸಿಐ ಸಹಯೋಗದಲ್ಲಿ ಪ್ರಾಥಮಿಕ ಶಾಲೆ ನೆಲ್ಯಾಡಿಯಲ್ಲಿ ಏಳು ದಿನಗಳ ವಾಲಿಬಾಲ್ ತರಬೇತಿ ಶಿಬಿರದ ಉದ್ಘಾಟನೆಯು ಸೋಮವಾರ ನೆರವೇರಿತು.

ನೆಲ್ಯಾಡಿ ಜೆಸಿಐ ಅಧ್ಯಕ್ಷೆ ಸುಚಿತ್ರ.ಜೆ ಬಂಟ್ರಿಯಾಲ್ ಉದ್ಘಾಟಿಸಿ ವಿದ್ಯಾರ್ಥಿಗಳಾದ ತಾವುಗಳು ಈ ಶಿಬಿರವನ್ನು ಸದುಪಯೋಗಪಡಿಸಿಕೊಂಡು, ಉತ್ತಮ ಕ್ರೀಡಾಪಟುಗಳಾಗಿ ಮುಂದಿನ ಕ್ರೀಡಾಕೂಟದಲ್ಲಿ ತಮ್ಮ ಕ್ರೀಡಾ ಸಾಮರ್ಥ್ಯವನ್ನು ತೋರಿಸಬೇಕೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ಹೇಳಿದರು.

ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕಿ ವೀಣಾ ಮಸ್ಕರೇನಸ್ ವಹಿಸಿದ್ದರು. ವೇದಿಕೆಯಲ್ಲಿ ಕ್ರೀಡಾ ತರಬೇತಿದಾರ ನಿವೃತ್ತ ದೈಹಿಕ ಶಿಕ್ಷಕ ಜನಾರ್ದನ.ಟಿ, ಹಿರಿಯ ಸಹಶಿಕ್ಷಕಿ ಜಯಂತಿ, ಮೇರಿ ಜಾನ್ ಉಪಸ್ಥಿತರಿದ್ದರು.

ವಿದ್ಯಾರ್ಥಿ ದೃತಿ ವಂದಿಸಿದರು. ಶಿಕ್ಷಕ ವಿಮಲ್ ನಿರೂಪಿಸಿದರು.

Leave a Reply

error: Content is protected !!