ಯಕ್ಷಧ್ರುವ ಪಟ್ಲ ಸಂಭ್ರಮ 2022ರ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡ ಫೌಂಡೇಶನಿಗೆ ಆಧಾರಸ್ತಂಭವಾದ ಟ್ರಸ್ಟ್ ಗೌರವಾಧ್ಯಕ್ಷರಾದ ಶ್ರೀ ಸದಾಶಿವ ಶೆಟ್ಟಿ ಕುಳೂರು ಕನ್ಯಾನ

ಶೇರ್ ಮಾಡಿ

ನೇಸರ ಮೇ‌.9:ಯಕ್ಷಗಾನ ಕಲಾವಿದರಿಗೆ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದು ಸಮಾಜದಲ್ಲಿ ಎಲ್ಲಾ ವರ್ಗದ ಕಲಾವಿದರಿಗೆ ನೆರವಾಗುತ್ತಿರುವ ಪಟ್ಲ ಸತೀಶ್ ಶೆಟ್ಟಿಯವರ ನೇತೃತ್ವದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಐದನೇ ವರ್ಷದ ಯಕ್ಷಧ್ರುವ ಪಟ್ಲ ಸಂಭ್ರಮ 2022 ಮೇ 29ರ ಆದಿತ್ಯವಾರದಂದು ಜರಗಲಿದ್ದು, ಆ ದಿನ ಸತ್ಪಾತ್ರ ಯಕ್ಷಗಾನ ಕಲಾವಿದರಿಗಾಗಿ ನೀಡಲಾಗುವ ಅನುದಾನ ಹಾಗೂ ಸಂಭ್ರಮದ ಒಟ್ಟು ಖರ್ಚು ಅಂದಾಜು ರೂ, 75.00 ಲಕ್ಷವನ್ನು ದೇಣಿಗೆಯ ರೂಪದಲ್ಲಿ ನೀಡಲಾಗುವುದೆಂದು ಫೌಂಡೇಶನಿನ ಪಾಲಿಗೆ ದೇವತಾರೂಪದಲ್ಲಿ ಪಾದಾರ್ಪಣೆ ಮಾಡಿದ ಹೇರಂಭ ಕೆಮಿಕಲ್ಸ್ ಸಂಸ್ಥೆಯ ಚೇರ್ಮನ್ ಹಾಗೂ ಪಟ್ಲ ಟ್ರಸ್ಟ್ ಗೌರವಾಧ್ಯಕ್ಷರಾದ ಶ್ರೀ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಇಂದು ಜನತಾ ಡಿಲಕ್ಸ್ ಹೋಟೆಲ್ ಸಭಾಂಗಣದಲ್ಲಿ ನಡೆದ ಆಮಂತ್ರಣ ಪತ್ರಿಕೆ ಬಿಡುಗಡೆ ಸಂದರ್ಭದಲ್ಲಿ ಘೋಷಿಸಿದರು.
ವೇದಿಕೆಯಲ್ಲಿ ಭವಾನಿ ಶಿಷ್ಷಿಂಗ್ ಕಂಪೆನಿಯ ಚೇರ್ಮೇನ್ ಕೆ.ಡಿ ಶೆಟ್ಟಿ, ಶ್ರೀ ಗೋಪಾಲಕೃಷ್ಣ ದೇವಸ್ಥಾನ ಉಳಿ ಬಂಟ್ವಾಳದ ರೂವಾರಿ ಹಾಗೂ ಅಮೇರಿಕಾದ ಪಟ್ಲ ಫೌಂಡೇಶನ್ ಟ್ರಸ್ಟ್ ಘಟಕದ ಮುಖ್ಯಸ್ಥರಾದ ಯೋಗೇಂದ್ರ ಭಟ್ ಉಳಿ, ಬೆಳ್ತಂಗಡಿ ಘಟಕದ ಭುಜಬಲಿ ಧರ್ಮಸ್ಥಳ, ಸಹಕಾರಿ ಧುರೀಣ ಹಾಗೂ ಸಮಾಜ ಸೇವಕರಾದ ರಾಜಾರಾಮ್ ಭಟ್ ಕೈರಂಗಳ, ಕರ್ನಾಟಕ ಸರ್ಕಾರದ ಅಲೆಮಾರಿ ನಿಗಮದ ಅಧ್ಯಕ್ಷರಾದ ರವೀಂದ್ರ ಶೆಟ್ಟಿ ಉಳಿದೊಟ್ಟು, ಕೆಪಿಟಿಸಿಎಲ್ ನಿಗಮದ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಬೋಳಿಯಾರ್, ದಾಖಲೆ ಪ್ರದರ್ಶನ ಕಂಡ ಶಿವದೂತೆ ಗುಳಿಗೆ ತುಳು ನಾಟಕದ ರೂವಾರಿ ವಿಜಯಕುಮಾರ್ ಕೊಡಿಯಾಲ್ ಬೈಲ್, ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿ, ಕೋಶಾಧಿಕಾರಿ ಸಿಎ ಸುದೇಶ್ ಕುಮಾರ್ ರೈ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ಜತೆ ಕಾರ್ಯದರ್ಶಿ ರವಿ ಶೆಟ್ಟಿ ಅಶೋಕನಗರ ವಂದಿಸಿದರು.

ವೀಕ್ಷಿಸಿ SUBSCRIBERS ಮಾಡಿ

🌸 ಜಾಹೀರಾತು 🌸

Leave a Reply

error: Content is protected !!