ನೇಸರ ಮೇ.9: ಬೆಳ್ತಂಗಡಿ ತಾಲೂಕಿನ ನಿಡ್ಲೆ ಗ್ರಾಮದ ಕರುಂಬಿತ್ತಿಲಿನಲ್ಲಿ ಸಂಗೀತ ಶಿಬಿರ ಆರಂಭಗೊಂಡಿದೆ. ಭಾನುವಾರ ಉದ್ಘಾಟನೆಗೊಂಡ ಶಿಬಿರದಲ್ಲಿ ಸೋಮವಾರದಿಂದ ಪಾಠಗಳನ್ನು ಹೇಳಿಕೊಡಲಾಗುತ್ತಿದೆ.
ಮಂಗಳವಾರ ಸಂಜೆ ಎಡನೀರು ಮಠದ ಶ್ರೀ ಸಚ್ಚಿದಾನಂದಭಾರತೀ ಸ್ವಾಮೀಜಿಗಳು ಕಾರ್ಯಕ್ರಮಕ್ಕೆ ಆಗಮಿಸಿ ಆಶೀರ್ವಚನ ನೀಡಲಿದ್ದು, 5 ಗಂಟೆಗೆ ಹೊಸಹಳ್ಳಿ ವಿ ಕೆ ವೆಂಕಟ್ರಾಮ್ ತಂಡದವರಿಂದ ಪಿಟೀಲುವಾದನ ಕಛೇರಿ ನಡೆಯಲಿದೆ. ವಾದನದಲ್ಲಿ ಕೆ. ಸುಬ್ಬರಾವ್, ಹೊಸಹಳ್ಳಿ ವಿ ವಿ. ರಘುರಾಮ್, ವಿ ವಿಶ್ವಜಿತ್ ಮತ್ತೂರು, ವಿ ಎಸ್ ಆರ್ ಕಾರ್ತಿಕೇಯನ್, ವಿ ಕೆ ಯು ಜಯಚಂದ್ರ ರಾವ್ ಭಾಗವಹಿಸಲಿದ್ದಾರೆ.
ಮೇ 11ರಂದು ಸಂಜೆ 3 ಗಂಟೆಗೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕಲಾವಿದೆ ವಿ ಬಾಂಬೆ ಜಯಶ್ರೀ ಅವರಿಗೆ ಗುರುವಂದನಾ ಕಾರ್ಯಕ್ರಮ ನಡೆಯಲಿದೆ. ಬಳಿಕ 3.30ಕ್ಕೆ ವಿ ಕೃತಿ ಭಟ್ ಅವರಿಂದ ಶಾಸ್ತ್ರೀಯ ಸಂಗೀತ ಗಾಯನ ನಡೆಯಲಿದ್ದು, ಪಕ್ಕವಾದ್ಯದಲ್ಲಿ ವಿ ವಿಠ್ಠಲ್ ರಂಗಂ ಹಾಗೂ ವಿ ಬಿ.ಸಿ ಮಂಜುನಾಥ್ ಸಹಕರಿಸಲಿದ್ದಾರೆ.
ಮೇ 12 ಶಿಬಿರದ ಅಂತಿಮ ದಿನವಾಗಿದ್ದು, ಬೆಳಗ್ಗೆ 11.30ಕ್ಕೆ ಖ್ಯಾತ ಭಾಗವತ ಪಟ್ಲ ಸತೀಶ್ ಶೆಟ್ಟಿ ಅವರಿಂದ ಯಕ್ಷಗಾನ ವೈಭವ ನಡೆಯಲಿದೆ. ಬಿ ಸೀತಾರಾಮ ತೋಳ್ಪಡಿತ್ತಾಯ ಹಾಗೂ ಬಿ ಜನಾರ್ದನ ತೋಳ್ಪಡಿತ್ತಾಯ ಪಕ್ಕವಾದ್ಯದಲ್ಲಿ ಸಾಥ್ ನೀಡಲಿದ್ದಾರೆ.
ಸಂಜೆ 3.30 ಕ್ಕೆ ಶಿಬಿರಾರ್ಥಿಗಳಿಂದ ಸಮೂಹ ಗಾಯನ ನಡೆಯಲಿದ್ದು ಬಳಿಕ ಸಂಗೀತ ದಿಗ್ಗಜರಾದ ಡಾ. ರಾಜಕುಮಾರ್ ಭಾರತೀ, ಉಡುಪಿ ವಿ ಗೋಪಾಲಕೃಷ್ಣ, ಪುವಳರ್ ವಿ ಶ್ರೀಜಿ, ಮತ್ತು ವಿ ಅಭಿಷೇಕ್ ಜಯರಾಮ್ ರವರಿಗೆ ಗುರುವಂದನಾ ಕಾರ್ಯಕ್ರಮ ನಡೆಯಲಿದೆ. ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕಾರ್ಯಕ್ರಮ ಆಯೋಜಕರಾದ ವಿ ವಿಠಲ ರಾಮಮೂರ್ತಿ ಮನೆಯವರು ವಿನಂತಿಸಿದ್ದಾರೆ. ಎಲ್ಲಾ ಕಾರ್ಯಕ್ರಮಗಳು ನಿಡ್ಲೆಯ ಕರಂಬಿತ್ತಿಲು ಮನೆಯ ವಠಾರದಲ್ಲಿ ನಡೆಯಲಿದೆ.
🌸 ಜಾಹೀರಾತು 🌸