ಮುಂಡಾಜೆ ಪ್ರಸಾದ್ ಶೆಟ್ಟಿಯವರಿಗೆ-“ಕರ್ನಾಟಕ ಪದ್ಮವಿಭೂಷಣ” ಪ್ರಶಸ್ತಿ

ಶೇರ್ ಮಾಡಿ

ನೇಸರ ನ 7: ದಕ್ಷಿಣ ಕನ್ನಡದ ತುಳು ಯುವ ಪ್ರತಿಭೆ ದೈಹಿಕ ಶಿಕ್ಷಕ, ಗಾಯಕ, ನಟ, ಮಿಮಿಕ್ರಿ ಕಲಾವಿದ, ಕ್ರೀಡಾಪಟು ಮುಂಡಾಜೆ ಪ್ರಸಾದ್ ಶೆಟ್ಟಿಯವರಿಗೆ. ಚೈತನ್ಯ ಇಂಟರ್ ನ್ಯಾಷನಲ್ ಆಟ್ರ್ಸ್ ಅಕಾಡೆಮಿ ಟ್ರಸ್ಟ್(ರಿ) ಬೆಂಗಳೂರು ಇವರು ರಾಜ್ಯೋತ್ಸವದ ಅಂಗವಾಗಿ ನಡೆಸಿದ ಕಾರ್ಯಕ್ರಮದಲ್ಲಿ “ಕರ್ನಾಟಕ ಪದ್ಮವಿಭೂಷಣ” ಪ್ರಶಸ್ತಿ ಪುರಸ್ಕøತರಾದರು.

“ಪ್ರಸಾದ್ ಶೆಟ್ಟಿಯವರುಬಾಲ್ಯದಲ್ಲಿ ಭಜನೆಯಿಂದ ಆರಂಭ. ಪ್ರಾಥಮಿಕ ಹಂತದಲ್ಲಿ ಯಕ್ಷಗಾನದಲ್ಲಿ ಬಹುಮಾನ. ಪ್ರೌಢ ಶಿಕ್ಷಣ ಶಾಲೆಯಲ್ಲಿ ಹಾಡು ಮಿಮಿಕ್ರಿ ನೃತ್ಯದಲ್ಲು ಮೆಚ್ಚುಗೆ. ಅಲ್ಲದೆ ಕಬಡ್ಡಿ ಅಥ್ಲೆಟಿಕ್ಸ್ ನಲ್ಲಿ ಹಲವಾರು ಪ್ರಶಸ್ತಿ. ನಂತರ ಅಂತರ್ ಜಿಲ್ಲಾಮಟ್ಟದ 55 ಕೆಜಿ ವಿಭಾಗದ ಕಬಡ್ಡಿಯಲ್ಲಿ ಚಿನ್ನದ ಪದಕ. ಜೆಸಿಐ ಬೆಳ್ತಂಗಡಿ ಇವರು ಆಯೋಜಿಸಿದ ಮುಕ್ತ ಕೇರಂ ಸ್ಪರ್ಧೆಯಲ್ಲಿ ಸತತ 3 ವರ್ಷ ಪ್ರಥಮ. ನಂತರ ನಮ್ಮ ಟಿವಿ ಆಯೋಜಿಸಿದ ಬಲೇ ತೆಲಿಪಾಲೆ ಕಾಮಿಡಿ ಕಾರ್ಯಕ್ರಮದಲ್ಲಿ 5ರ ಹಂತಕ್ಕೆ ಆಯ್ಕೆಯಾಗಿರುತ್ತಾರೆ ಯುವಜನ ಮೇಳದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ. ರಾಜ್ಯ ಮಟ್ಟದ ಕಬಡ್ಡಿ ತೀರ್ಪುಗಾರರಾಗಿ ಆಯ್ಕೆ. ಇದೀಗ ಸಪ್ತಸ್ವರ ಗಾನ ಯಾನ ಫೇಸ್ ಬುಕ್ ಲೈವ್ ನಲ್ಲಿ ಹಾಡು,ಮಿಮಿಕ್ರಿ ಹಾಸ್ಯ ದೊಂದಿಗೆ ಪ್ರೇಕ್ಷಕರ ಮನ ಗೆದ್ದು ಕಲಾ ಅಭಿಮಾನಿಗಳಿಂದ ನವರಸ ರಾಜೆ ಎಂಬ ಬಿರುದು. ಕೀರ್ತನಾ ಕಲಾ ತಂಡ ಮುಂಡಾಜೆ ಇದರ ಕಲಾವಿದರು ಆಗಿರುವ ಇವರು ಸಪ್ತ ಸ್ವರ ಗಾನ ಯಾನ ತಂಡದ ಹಾಡುಗಾರರು. ಕೊರಗ ಅಜ್ಜನ ತುಳು ಭಕ್ತಿ ಸುಗಿಪು ಹಾಗೂ ಶ್ರೀ ದುರ್ಗಾ ಪರಮೇಶ್ವರಿ ಅಮ್ಮನ ಭಕ್ತಿಗಾನ ಹಾಡುಗಳ ಧ್ವನಿ ಸುರುಳಿ ಇವರ ಕಂಠದಿಂದ ಮೂಡಿ ಬಂದಿರುತ್ತದೆ.ಯಂಗ್ ಚಾಲೆಂಜರ್ಸ್ ಸ್ಪೋರ್ಟ್ಸ್ ಕ್ಲಬ್ ಮುಂಡಾಜೆ ಇದರ ಉತ್ತಮ ಕ್ರೀಡಾಪಟು. ಇದೀಗ ಕುಂಭಶ್ರೀ ರೆಸಿಡೆನ್ಸಿಯಲ್ ಸ್ಕೂಲ್ ನಿಟ್ಟಡೆ ವೇಣೂರು ಇಲ್ಲಿ ದೈಹಿಕ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಂತರ್ ಜಿಲ್ಲಾ ಮಟ್ಟದ ದೈಹಿಕ ಶಿಕ್ಷಕರ ಕ್ರೀಡಾ ಕೂಟದಲ್ಲಿ ಉದ್ದ ಜಿಗಿತ ಸ್ಪರ್ದೆಯಲ್ಲಿ ಚಿನ್ನದ ಪದಕ ಹಾಗೂ ಅತೀ ವೇಗದ ಓಟದ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ ಗಳಿಸಿರುತ್ತಾರೆ”

ಸಂಸ್ಥೆಯು ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಿದ್ದ ಆನ್‍ಲೈನ್ ಗಾಯನ ಮತ್ತು ನೃತ್ಯ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮತ್ತು ನಾಡಿನ ಗಣ್ಯ ವ್ಯಕ್ತಿಗಳಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಡಾ.ಸೌಜನ್ಯ ಶರತ್‍ಚಂದ್ರ ಮ್ಯಾನೇಜಿಂಗ್ ಡೈರೆಕ್ಟರ್ ಸ್ಯಾನೋವಿಸ್ ಲೈಪ್ ಸೈನ್ಸನ್ ಉದ್ಘಾಟಿಸಿದರು. ಚಲನಚಿತ್ರ ನಿರ್ಮಾಪಕ ಹಾಗೂ ನಟ ಮಹೇಂದ್ರ ಮುನ್ನೋತ್ರ ಅಧ್ಯಕ್ಷತೆ ವಹಿಸಿದ್ದರು, ಸಂಸ್ಥೆಯ ಸಂಸ್ಥಾಪನಾ ಅಧ್ಯಕ್ಷರು ಡಾ| ವಸುಧಾ ಶ್ರೀನಿವಾಸ್ ಮತ್ತಿತರು ಗಣ್ಯರು ಭಾಗವಹಿಸಿದ್ದರು.ಸಂಸ್ಥೆಯು ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಿದ್ದ ಆನ್‍ಲೈನ್ ಗಾಯನ ಮತ್ತು ನೃತ್ಯ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮತ್ತು ನಾಡಿನ ಗಣ್ಯ ವ್ಯಕ್ತಿಗಳಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಡಾ.ಸೌಜನ್ಯ ಶರತ್‍ಚಂದ್ರ ಮ್ಯಾನೇಜಿಂಗ್ ಡೈರೆಕ್ಟರ್ ಸ್ಯಾನೋವಿಸ್ ಲೈಪ್ ಸೈನ್ಸನ್ ಉದ್ಘಾಟಿಸಿದರು. ಚಲನಚಿತ್ರ ನಿರ್ಮಾಪಕ ಹಾಗೂ ನಟ ಮಹೇಂದ್ರ ಮುನ್ನೋತ್ರ ಅಧ್ಯಕ್ಷತೆ ವಹಿಸಿದ್ದರು, ಸಂಸ್ಥೆಯ ಸಂಸ್ಥಾಪನಾ ಅಧ್ಯಕ್ಷರು ಡಾ| ವಸುಧಾ ಶ್ರೀನಿವಾಸ್ ಮತ್ತಿತರು ಗಣ್ಯರು ಭಾಗವಹಿಸಿದ್ದರು.

Leave a Reply

error: Content is protected !!