ನೇಸರ ಮೇ.14: ಕಾಯೇನ ವಾಚಾ ಮನಸಾ ಕಾರ್ಯೋನ್ಮುಖರಾದರೆ ಯಶಸ್ಸು ಖಂಡಿತ. ಪ್ರತಿಯೊಬ್ಬರಿಗೂ ಸಮಸ್ಯೆಗಳು ಬಂದಾಗಲೇ ದೇವರ ನೆನಪಾಗೋದು. ಭಕ್ತಿ, ಶ್ರದ್ದೆ, ನಂಬಿಕೆ, ಶುದ್ಧ ಭಾವನೆಗಳಿದ್ದಾಗ ಸುಂದರವಾದ ದೇವಾಲಯ ನಿರ್ಮಾಣವಾಗಲು ಸಾಧ್ಯ ಎಂದು ಆದಿಚುಂಚನಗಿರಿ ಶಾಖಾಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಹೇಳಿದರು. ಅವರು ಕೊಕ್ಕಡ ಸೀಮೆಯ ಮಾಯಿಲಕೋಟೆ ದೈವ ಸನ್ನಿಧಿಯಲ್ಲಿ ಪ್ರತಿಷ್ಠ ಮಹೋತ್ಸವ ಪ್ರಯುಕ್ತ ನಡೆದ ಧಾರ್ಮಿಕ ಸಭೆಯನ್ನು ಉದ್ದೇಶಿಸಿ ಆಶೀರ್ವಚನವಿತ್ತರು. ಆಂತರ್ಯ ಶೋಧನೆ ಮಾಡಿಕೊಂಡು ಆತ್ಮಸಾಕ್ಷಿಗೆ ವಿರುದ್ದವಾಗಿ ಯಾವ ಮನುಷ್ಯನು ಜಗತ್ತಿನಲ್ಲಿ ಬದುಕಲು ಸಾಧ್ಯವಿಲ್ಲ. ತರ್ಕಕ್ಕಿಂತ ಅಚಲವಾದ ಭಕ್ತಿಯಿಂದ ದೇವರನ್ನು ಪೂಜಿಸಬೇಕು. ವರ್ಷಕ್ಕೊಮ್ಮೆ ದೇವರುಗಳನ್ನು ನೆನೆದುಕೊಂಡು ಹರಕೆ ಒಪ್ಪಿಸಿದರೆ ಸಾಲದು, ನಿತ್ಯ ಪೂಜೆಯ ಮೂಲಕ ದೇವರನ್ನು ಪೂಜಿಸಬೇಕು ಎಂದವರು ಹೇಳಿದರು.
ಪ್ರತಿಷ್ಠಾ ಮಹೋತ್ಸವ ಸಮಿತಿ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಶಾಸಕ ಪ್ರತಾಪ್ಸಿಂಹ ನಾಯಕ್, ಭಾಸ್ಕರ ಗೌಡ ದೇವಸ್ಯ, ಬೆಸ್ಟ್ ಫೌಂಡೇಷನ್ ಅಧ್ಯಕ್ಷ ರಕ್ಷಿತ್ ಶಿವರಾಂ, ಮಾಜಿ ಜಿ.ಪಂ. ಅಧ್ಯಕ್ಷ ಕೊರಗಪ್ಪ ನಾಯ್ಕ, ಶ್ರೀ ಕ್ಷೇತ್ರ ಸೌತಡ್ಕದ ವ್ಯವಸ್ಥಾಪನಾ ಆಡಳಿತ ಮಂಡಳಿ ಅಧ್ಯಕ್ಷ ಹರೀಶ್ ರಾವ್ ಮುಂಡ್ರುಪ್ಪಾಡಿ, ಪಂಚಾಯತ್ ಅಧ್ಯಕ್ಷ ಯೋಗೀಶ್ ಆಲಂಬಿಲ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ರಾಮಕೃಷ್ಣ ದೇವಾಡಿಗ, ಕೋಟೆ ಮಾಯಿಲ ಸಮುದಾಯ ಸಂಘದ ಅಧ್ಯಕ್ಷ ಕುಮಾರ್ ಬಳ್ಳಕ್ಕ ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಶಿಲ್ಪಿಗಳಾದ ಶ್ರೀನಿವಾಸ್ ಮಿಯಾರ್ ಹಾಗೂ ಸುಬ್ರಹ್ಮಣ್ಯ ಆಚಾರಿ ಅವರನ್ನು ಸನ್ಮಾನಿಸಲಾಯಿತು.
ಪಂಚಾಯತ್ ಅಧ್ಯಕ್ಷ ಯೋಗೀಶ್ ಆಲಂಬಿಲ ಸ್ವಾಗತಿಸಿದ ಕಾರ್ಯಕ್ರಮದಲ್ಲಿ ಸ್ವಾಗತ ಸಮಿತಿ ಸಂಚಾಲಕ ಲಕ್ಷೀನಾರಾಯಣ ಟಿ.ಎಂ. ಧನ್ಯವಾದವಿತ್ತರು. ವಿಶ್ವನಾಥ ರೈ, ದಾಮೋದರ ಅಜ್ಜಾವರ, ಸುರೇಶ್ ಪಡಿಪಂಡ ಕಾರ್ಯಕ್ರಮ ನಿರೂಪಿಸಿದರು.
💐 ಜಾಹೀರಾತು 💐