ದೇಶದ ಜನಸಂಖ್ಯೆ ಸಂಖ್ಯೆ ಆಗದೆ, ಸಂಪತ್ತಾಗಿರಬೇಕು: ಸೀತಾರಾಮ ಕೆದಿಲಾಯ

ಶೇರ್ ಮಾಡಿ

ನೇಸರ ಮೇ‌.11: ಇಂದು ಹಳ್ಳಿಯಲ್ಲಿ ಜನಸಂಖ್ಯೆ ಕಡಿಮೆಯಾಗುತ್ತಿದೆ. ಮಕ್ಕಳಿಲ್ಲದ ಮನೆ ಹೆಚ್ಚಾಗುತ್ತಿದೆ. ಕಟ್ತಿದ ಮನೆಯಲ್ಲಿ ಮಕ್ಕಳಿಲ್ಲದೆ ನಮ್ಮ‌ಮುಂದಿನ ಸಂಪತ್ತು ಇನ್ನೊಬ್ಬರಿಗೆ ಪಾಲಾಗುತ್ತದೆ. ಮುಂದೆ ಹಿಂದೂ ಸಮಾಜ ಅಪಾಯದ ಸ್ಥಿತಿ ತಲುಪಬಹುದು. ಹಿಂದೂಗಳು ಅಲ್ಪ ಸಂಖ್ಯಾತರಾದರೆ ಎಲ್ಲರಿಗೂ ಅಪಾಯ. ಆದುದರಿಂದ ಜನಸಂಖ್ಯೆ ಸಂಖ್ಯೆ ಆಗದೆ ಸಂಪತ್ತಾಗಿರಬೆಕು ಎಂದು ಅಖಿಲ ಭಾರತೀಯ ಸೇವಾ ಪ್ರಮುಖರಾಗಿದ್ದು,ಭಾರತ ಪರಿಕ್ರಮ ಮಾಡಿದ್ದ ಶ್ರೀ ಸೀತಾರಾಮ ಕೆದಿಲಾಯ ನುಡಿದರು.
ಅವರು ನೆಲ್ಲಿತ್ತಾಯರ ಶಿಶಿಲ ಶಿವಕೀರ್ತಿ ನಿಲಯದಲ್ಲಿ ನಡೆದ ಕಾರ್ಯಕರ್ತರೊಂದಿಗಿನ ಸಂವಾದದಲ್ಲಿ ಮಾತನಾಡಿದ್ದರು.

ಗೊಹತ್ಯೆ ಕಾನೂನು ಆಯಾ ರಾಜ್ಯಗಳಿಗೆ ಸಂಭಂದಿಸಿದ್ದು. ಅದನ್ನು ಸರಿಯಾಗಿ ಪಾಲಿಸಿ. ಗೋವು ಪ್ರಾಣಿಯಲ್ಲ.ಅದನ್ನು ರಾಷ್ತ್ರೀಯ “ದರೊಹರ” ಎಂದು ಘ್ಹೊಷಿಸಿ. ಅದು ಮಾನವನಿದಲೂ ಎತ್ತರದಲ್ಲಿರುವ ದೇವತೆ ಎಂದರು. ಭಾರತ ದೇಶಕ್ಕೆ ಇನ್ನು ಉತ್ತಮ ಭವಿಷ್ಯ ಇದೆ. ಇದರ ಕೀರ್ತಿ ಆಕಾಶದೆತ್ತರಕ್ಕೆ ಚಿಮ್ಮಲಿದೆ.ಅದು ದೀರ್ಘ್ಹಕಾಲದವರೆಗೆ ಇರುತ್ತದೆ.ಆದರೆ ನಮ್ಮ ಪ್ರಯತ್ನ ದುಡಿಮೆ ಇನ್ನೂ ಬೇಕು ಎಂದು ಕಾರ್ಯಕರ್ತರಿಗೆ ಸೂಚನೆ ನೀಡಿದ್ದರು. ರಾ.ಸ್ವ.ಸಂಘದ ಶತಮಾನ ವರ್ಷ ಆಚರಣೆ ಸಮೀಪದಲ್ಲಿದೆ. ಪ್ರತೀ ಮನೆಯು ರಾ.ಸ್ವ.ಸಂಘದ ಮನೆಯಾಗಿರುವಂತೆ ಕೆಲಸ ಮಾಡಿ. ಪ್ರತೀ ಗ್ರಾಮದಲ್ಲಿ ರಾ.ಸ್ವ.ಸಂಘದ ಶಾಖೆಯಿರುವಂತೆ ಕರ್ತವ್ಯ ನಿರ್ವಹಿಸಿ. ಇನ್ನು ಮುಂದಿನ ದಿನಗಳಲ್ಲಿ ನಮೆಗೆಲ್ಲಾ ವಿಶ್ರಾಂತಿ ಇಲ್ಲ ಎಂದು ನುಡಿದರು.
ಪರಿಸರ ಬಗ್ಗೆ ಜಾಗ್ರತಿ ಮೂಡಿಸಿ, ಪ್ರಕ್ರಿತಿ ನಾಶ ಸರಿಯಲ್ಲ, ಜನಸಂಖ್ಯೆ ನಿಯಂತ್ರಣದಂತೆ ವಾಹನ ನಿಯಂತ್ರಣ ಮಾಡಿ. ಮನೆಗೊಂದು ವಾಹನ ಯೋಚಿಸಿ, ಅಮೆರಿಕದಂತೆ ನಾವು ಯಾಕಾಗಬಾರದು ಎಂದು ಯೋಚಿಸುವ ಬದಲು ನಾವು ಭಾರತದಂತೆ ಇರಲು ಯೋಚಿಸಿ ಎಂದು ಹಿತವಚನ ನೀಡಿದರು.
ಕಾರ್ಯಕ್ರಮ ಕೊನೆಯಲ್ಲಿ ರಾ.ಸ್ವ.ಸಂಘದ ಸಮೂಹಗೀತೆಯೊಂದಿಗೆ ಸಂವಾದಕೊನೆಗೊಡಿತ್ತು.ಸಂವಾದ ಕಾರ್ಯಕ್ರಮ ಕೊನೆಯಲ್ಲಿ ನೆರೆದ‌ ಮಕ್ಕಳಿಗೆ ಹಾರ ಹಾಕಿ ಅಭಿನಂದನೆ ನೀಡಿದ್ದರು.

🔆 ಜಾಹೀರಾತು 🔆

Leave a Reply

error: Content is protected !!