ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಶೇರ್ ಮಾಡಿ

ನೇಸರ ಮೇ‌11: ಕರ್ನಾಟಕ ಸರಕಾರ ದ.ಕ ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ದ.ಕ. ಮಂಗಳೂರು, ರೋಟರಿ ಕ್ಲಬ್ ಪುತ್ತೂರು, ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆ ಪುತ್ತೂರು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ನೆಲ್ಯಾಡಿ ಇದರ ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವು ಮೇ 11ರಂದು ಬೆಳಗ್ಗೆ 9ಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ ನೆಲ್ಯಾಡಿಯಲ್ಲಿ ನೇರವೇರಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೆಲ್ಯಾಡಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ನ ಅಧ್ಯಕ್ಷ ವೆಂಕಟ್ರಮಣ ಆರ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭವನ್ನು ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಕಿಶೋರ್ ಕುಮಾರ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಮಂಗಳೂರು ವಹಿಸಿದ್ದರು. ನೆಲ್ಯಾಡಿ ಗ್ರಾಮ ಪಂಚಾಯತಿನ ಉಪಾಧ್ಯಕ್ಷರಾದ ಅಬ್ದುಲ್ ಜಬ್ಬಾರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಗದೀಶ್, ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ರೋಟರಿ ಕ್ಲಬ್ ಪುತ್ತೂರಿನ ಅಧ್ಯಕ್ಷರಾದ ಮಧು ನರಿಯೂರು, ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಿಶಿರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಡಾ.ಶಾಂತರಾಜ್ ನೇತ್ರ ತಜ್ಞರು, ಡಾ.ಜೈದೀಪ್ ದಂತ ಚಿಕಿತ್ಸಕರು, ಡಾ.ಅಭಿಷ್ ವರ್ಮ ಹೆಗ್ಡೆ ನ್ಯೂರೋಲಜಿಸ್ಟ್, ಡಾ. ಸ್ಮಿತಾ ರಾವ್ ಕ್ಯಾನ್ಸರ್,ಸ್ತನ ಹಾಗೂ ಥೈರಾಯ್ಡ್ ಗ್ರಂಥಿ ಶಸ್ತ್ರ ಚಿಕಿತ್ಸಕರು, ಡಾ.ಶ್ರೀಲತಾ ಭಟ್ ಸ್ತ್ರೀರೋಗ ತಜ್ಞರು, ಡಾ.ಕೃಷ್ಣಾನಂದ ಮಕ್ಕಳ ತಜ್ಞರು ವೈದ್ಯರಾಗಿ ಸಹಕರಿಸಿದರು. ಎ ಬಿ ಶೆಟ್ಟಿ ಮೆಮೊರಿಯಲ್ ಮಂಗಳೂರು, ಪ್ರಗತಿ ಮಲ್ಟಿಸ್ಪೆಷಲಿಟಿ ಆಸ್ಪತ್ರೆಯ ಸಿಬ್ಬಂದಿಗಳು, ನೆಲ್ಯಾಡಿ ಜೇಸಿಐ ಅಧ್ಯಕ್ಷೆ ಜಯಂತಿ ಬಿ.ಎಮ್, ನೆಲ್ಯಾಡಿ ಗ್ರಾಮ ಪಂಚಾಯಿತಿನ ಮಾಜಿ ಅಧ್ಯಕ್ಷರಾದ ಜಯಾನಂದ ಬಂಟ್ರಿಯಾಲ್, ನೆಲ್ಯಾಡಿ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗದವರು ಮೊದಲಾದವರು ಉಪಸ್ಥಿತರಿದ್ದರು. ಲೀಲಾ ಸ್ವಾಗತಿಸಿದರು, ಡಾ. ಶಿಶಿರ ವೈದ್ಯಾಧಿಕಾರಿಗಳು ಧನ್ಯವಾದ ಸಮರ್ಪಿಸಿದರು.

💢 ಜಾಹೀರಾತು 💢

Leave a Reply

error: Content is protected !!