ಕೊಕ್ಕಡ ಮಾಯಿಲಕೋಟೆಗೆ ಹಸಿರುಹೊರೆಕಾಣಿಕೆ, ದೈವಗಳ ನೂತನ ಆಭರಣಗಳು ಮತ್ತು ಪರಿಕರಗಳ ಮೆರವಣಿಗೆ

ಶೇರ್ ಮಾಡಿ

ನೇಸರ ಮೇ.11: ಕೊಕ್ಕಡ ಸೀಮೆ ಮಾಯಿಲಕೋಟೆ ದೈವ ಸನ್ನಿಧಿಯಲ್ಲಿ ಮೇ.11 ರಿಂದ 13 ರವರೆಗೆ ನಡೆಯಲಿರುವ ದೈವಗಳ ಪ್ರತಿಷ್ಠಾ ಮಹೋತ್ಸವ ಮತ್ತು ನೇಮೋತ್ಸವದ ಪ್ರಯುಕ್ತ

ಮೇ.11ರಂದು ಕೊಕ್ಕಡ, ಪಟ್ರಮೆ, ಶಿಬಾಜೆ, ನಿಡ್ಲೆ, ಹತ್ಯಡ್ಕ, ಕಳಂಜ ಗ್ರಾಮಸ್ಥರಿಂದ ಹಸಿರು ಹೊರೆಕಾಣಿಕೆ ಸಮರ್ಪಣೆ ಹಾಗೂ ದೈವಗಳ ನೂತನ ಆಭರಣಗಳು ಮತ್ತು ಪರಿಕರಗಳ ಮೆರವಣಿಗೆಯು ಕೊಕ್ಕಡ ಜಂಕ್ಷನ್ ನಿಂದ ಮಾಯಿಲಕೋಟೆ ದೈವಸನ್ನಿಧಿಗೆ ಮೆರವಣಿಗೆ ನಡೆಯಿತು.

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಪ್ರಾರ್ಥಿಸಿ ನಂತರ ಚೆಂಡೆ ವಾದ್ಯಗಳ ಮೂಲಕ ಮೆರವಣಿಗೆ ಪ್ರಾರಂಭಗೊಂಡಿತು. ಈ ಸಂದರ್ಭದಲ್ಲಿ ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ರಾಮಕೃಷ್ಣ ದೇವಾಡಿಗ ಮತ್ತು ಸದಸ್ಯರು, ಪ್ರತಿಷ್ಟಾ ಮಹೋತ್ಸವ ಸಮಿತಿ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ ಮತ್ತು ಪದಾಧಿಕಾರಿಗಳು, ವಿವಿಧ ಸಮಿತಿಗಳ ಸಂಚಾಲಕರುಗಳು ಹಾಗೂ ಸದಸ್ಯರು ಊರ ಪರವೂರ ಭಕ್ತರು ಭಾಗಿಯಾಗಿದ್ದರು.

ನಂತರ ಮಾಯಿಲಕೋಟೆ ದೈವ ಸನ್ನಿಧಿಯಲ್ಲಿ ವಿವಿಧ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ಜರುಗಿತು.

ವೀಕ್ಷಿಸಿ SUBSCRIBERS ಮಾಡಿ

💐 ಜಾಹೀರಾತು 💐

Leave a Reply

error: Content is protected !!