ನೇಸರ ಮೇ.10: ದಶಕಗಳ ಕಾಲದ ಬಹುಜನರ ಬೇಡಿಕೆಯಾಗಿದ್ದ ಕೊಕ್ಕಡದಿಂದ ನೆಲ್ಯಾಡಿಗೆ ಹೋಗುವ ಪುತ್ಯೆ ಮಾರ್ಗದ ಕಾಂಕ್ರೀಟೀಕರಣದ ಕಾಮಗಾರಿಗೆ ಮೇ 10ರಂದು ಚಾಲನೆ ನೀಡಲಾಯಿತು.
ಸ್ಥಳೀಯ ಮಾಯಿಲಕೋಟೆ ಎಂಬಲ್ಲಿ ದೈವಗಳ ಪ್ರತಿಷ್ಟ ಕಾರ್ಯ ನಡೆಯುತ್ತಿದ್ದು, ಭಕ್ತಾದಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಂಚಾರಯೋಗ್ಯ ರಸ್ತೆಯನ್ನು ಮಾಡಲೇಬೇಕೆಂದು ನೆಲ್ಯಾಡಿ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಭಾಸ್ಕರ ಗೌಡ ಇಚಿಲಂಪಾಡಿ ಸಚಿವರಿಗೆ ವಿನಂತಿಸಿದ್ದರು, ಮನವಿಗೆ ಸ್ಪಂದಿಸಿ ಮಂಗಳೂರಿನ ಪವಿತ್ರ ಕನ್ಷ್ಟ್ರಕ್ಷನ್ ಮೂಲಕ ಕಾಮಗಾರಿ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಹಂತಹಂತವಾಗಿ ಕಾಮಗಾರಿಗಳು ನಡೆಯಲಿದೆ ಎಂದು ತಿಳಿಸಿದರು.
🔔 ಜಾಹೀರಾತು 🔔