ನೇಸರ ಮೇ.16: ಕೊಕ್ಕಡದಲ್ಲಿ ಬಾಡಿಗೆ ಮಾಡುವ ವಿಚಾರವಾಗಿ ರಿಕ್ಷಾ ಚಾಲಕನ ಮೇಲೆ ಹಲ್ಲೆ ನಡೆಸಿ ಜಾತಿನಿಂದನೆ ಮಾಡಿರುವ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕೊಕ್ಕಡದ ರಿಕ್ಷಾ ಪಾರ್ಕಿನಲ್ಲಿ ಚಾಲಕನಾಗಿರುವ ರಮೇಶ್ ಅವರು ತನ್ನ ರಿಕ್ಷಾದಲ್ಲಿ ಪ್ರಯಾಣಿಕರೊಂದಿಗೆ ಬಾಡಿಗೆ ಹೊರಟಾಗ ರಿಕ್ಷಾ ಚಾಲಕ ದಿನೇಶ್ ಎಂಬಾತ ತನ್ನ ಆಟೋ ರಿಕ್ಷಾವನ್ನು ಈತನ ರಿಕ್ಷಾಕ್ಕೆ ಅಡ್ಡವಾಗಿ ನಿಲ್ಲಿಸಿ ರಮೇಶ್ ಅವರನ್ನು ರಿಕ್ಷಾದಿಂದ ಹೊರಗೆಳೆದು ಜಾತಿನಿಂದನೆ ಮಾಡಿ ಹಲ್ಲೆ ನಡೆಸಿ ರಿಕ್ಷಾದಲ್ಲಿದ್ದ ಪ್ರಯಾಣಿಕರನ್ನು ಅದರಿಂದ ಇಳಿಸಿ ತನ್ನ ರಿಕ್ಷಾದಲ್ಲಿ ಕರೊದೊಯ್ದಿರುವುದಾಗಿ ಆರೋಪಿಸಿ ಪೊಲೀಸ್ ರಿಗೆ ದೂರು ನೀಡಲಾಗಿದೆ. ಗಾಯಗೊಂಡಿರುವ ರಮೇಶ್ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ಬಗ್ಗೆ ಧರ್ಮಸ್ಥಳ ಪೊಲೋಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
🔆 ಜಾಹೀರಾತು 🔆