ನೇಸರ ಜೂ.11: ಬಳಂಜ ಗ್ರಾಮದ ಪರಾರಿ ನಿವಾಸಿ ರಾಮಣ್ಣ ಪೂಜಾರಿ ಎಂಬುವರ ಮನೆಯ ಅಂಗಳದಲ್ಲಿ ರಾತ್ರಿ ಚಿರತೆಯೊಂದು ಅಲೆದಾಡುತ್ತಿದ್ದ ದೃಶ್ಯ ಅವರ ಮನೆಯ ಸಿಸಿ ಕ್ಯಾಮರಾದಲ್ಲಿ ಜೂ.10 ರಂದು ಸೆರೆಯಾಗಿದೆ.
ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು ಅರಣ್ಯ ಇಲಾಖೆಯವರು ಇದರ ಸೆರೆಗಾಗಿ ಬೋನ್ ಕಾರ್ಯಾಚರಣೆ ನಡೆಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈ ಗ್ರಾಮದಲ್ಲಿ ನಾಯಿ, ಬೆಕ್ಕುಗಳು ಕಾಣೆಯಾಗುತ್ತಿದ್ದು ಜನ ಆತಂಕದಲ್ಲಿದ್ದರು. ಇದೀಗ ಮನೆಯಂಗಳಕ್ಕೆ ಚಿರತೆಗಳು ಬರುವುದರಿಂದ ಜನ ಮತ್ತೆ ಆತಂಕಕ್ಕೆ ಒಳಗಾಗಿದ್ದಾರೆ.
ಇದೇ ಜೂನ್ 2 ರಂದು ಸುಲ್ಕೇರಿ ಸಮೀಪ ನಾವರ ಗ್ರಾಮದಲ್ಲಿ ವಸಂತ ಕೋಟ್ಯಾನ್ ಎಂಬುವರ ಮನೆಯ ಹಿಂಬದಿ ಬಾಯಿಗೆ ಚಿರತೆ ಬಿದ್ದತ್ತು. ಬಳಿಕ ಕಾರ್ಕಳ ಅರಣ್ಯ ಇಲಾಖೆ ತಂಡ ರಕ್ಷಿಸಿದ್ದರು. ಈ ಪ್ರದೇಶದಲ್ಲಿ ಆಗಾಗ ಚಿರತೆಗಳು ಪ್ರತ್ಯಕ್ಷವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಜಾಹೀರಾತು