ನೇಸರ ಜೂ.11: ಕರ್ನಾಟಕ ಅರಣ್ಯ ಇಲಾಖೆ ಮಂಗಳೂರು ವಿಭಾಗ, ಪುತ್ತೂರು ಉಪ ವಿಭಾಗ, ಉಪ್ಪಿನಂಗಡಿ ವಲಯದ ಪೋರ್ಕಳ ಶಾಖೆಯ ವತಿಯಿಂದ ಗೋಳಿತಟ್ಟು ಸ.ಹಿ.ಪ್ರಾ ಶಾಲೆ ಯಲ್ಲಿ ಪರಿಸರ ದಿನಾಚರಣೆ ಮತ್ತು ಬೀಜ ಬಿತ್ತನೆ ಕಾರ್ಯಕ್ರಮ ನೆರವೇರಿತು.
ಕಾರ್ಯಕ್ರಮದ ಅಂಗವಾಗಿ ಗೋಳಿತಟ್ಟು ಅರಣ್ಯದೊಳಗೆ ಗಿಡ ನೆಡುವ ಹಾಗೂ ಬೀಜ ಬಿತ್ತನೆ ಕಾರ್ಯ ನಡೆಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ರಾಜೇಶ್ ರವರು ಪರಿಸರ ಸಂರಕ್ಷಣೆ, ಬೀಜ ಸಂರಕ್ಷಣೆ, ತ್ಯಾಜ್ಯ ವಸ್ತುಗಳ ವಿಲೇವಾರಿಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಪೋರ್ಕಳ ಶಾಖೆಯ ಉಪ ವಲಯಅರಣ್ಯಾಧಿಕಾರಿ ಸಂದೀಪ್, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜನಾರ್ಧನ ಗೌಡ, ಸದಸ್ಯರಾದ ಶ್ರೀಮತಿ ಜೀವಿತ, ಬಾಬು ಪೂಜಾರಿ, ಶಾಲಾ ಮುಖ್ಯ ಶಿಕ್ಷಕಿ ಜಯಂತಿ ಬಿ ಎಂ ಉಪಸ್ಥಿತರಿದ್ದರು. ಶಾಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಜಯಂತಿ ಬಿ.ಎಂ ಸ್ವಾಗತಿಸಿ. ಎಸ್ ಡಿ ಎಂ ಸಿ ಅಧ್ಯಕ್ಷ ಗೋಪಾಲ ಗೌಡ ವಂದಿಸಿದರು.
ಜಾಹೀರಾತು