ಶ್ರೀ ಧ.ಮಂ.ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಬಿ.ಯಶೋವರ್ಮ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ

ಶೇರ್ ಮಾಡಿ

ನೇಸರ ಜೂ.11: ಇತ್ತೀಚೆಗೆ ಅಗಲಿದ ಶಿಕ್ಷಣತಜ್ಞ, ಶ್ರೀ ಧ.ಮಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ನಿವೃತ್ತ ಪ್ರಿನ್ಸಿಪಾಲ್ ಯಶೋವರ್ಮ ಅವರಿಗೆ ನುಡಿ ನಮನ ಸಲ್ಲಿಸುವ ಶ್ರದ್ಧಾಂಜಲಿ ಕಾರ್ಯಕ್ರಮ ಉಜಿರೆಯ ಶ್ರೀ ಕೃಷ್ಣಾನುಗ್ರಹ ಸಭಾ ಭವನದಲ್ಲಿ ಶನಿವಾರ ಜರಗಿತು.
ಧರ್ಮಸ್ಥಳದ ಹೇಮಾವತಿ ಹೆಗ್ಗಡೆ, ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.
ಯಶೋವರ್ಮ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದ ಶಾಸಕ ಹರೀಶ್ ಪೂಂಜ, ಸಮಾಜಮುಖಿ ಕೆಲಸಗಳಿಗೆ ಪ್ರೇರಣೆಯಾಗಿದ್ದ ಅವರು ಉಜಿರೆಯ ಹಲವು ಅಭಿವೃದ್ಧಿ ಕೆಲಸಗಳಿಗೆ ಮಾರ್ಗದರ್ಶಕರಾಗಿದ್ದರು. ಅವರ ಅಪಾರಜ್ಞಾನ, ಆಸಕ್ತಿ ವಿಶಿಷ್ಟವಾದುದು. ಅವರು ತಮ್ಮ ಕಲ್ಪನೆ, ಯೋಜನೆಗಳನ್ನು ಸರಳವಾಗಿ ಅನುಷ್ಠಾನಗೊಳಿಸಲು ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದರು. ಇನ್ನೊಬ್ಬರಿಗೆ ನೋವು ನೀಡದ ಪ್ರೀತಿಯ ವ್ಯಕ್ತಿತ್ವ ಹೊಂದಿದ್ದ ಅವರ ಅಗಲಿಕೆ ತುಂಬಲಾರದ ನಷ್ಟ ಎಂದು ನುಡಿನಮನ ಸಲ್ಲಿಸಿದರು.

ಧರ್ಮಸ್ಥಳದ ಶ್ರದ್ಧಾ ಅಮಿತ್ ಮಾತನಾಡಿ ಕಷ್ಟ-ಸುಖ, ಹೊಂದಾಣಿಕೆಯ ಪಾಠ ಹೇಳಿಕೊಡುತ್ತಿದ್ದ ಅವರು ಸ್ಥಿತಪ್ರಜ್ಞರಾಗಿದ್ದರು. ಇತರರಿಗೂ ಅವಕಾಶ ಕೊಡುವ ಅವರ ವ್ಯಕ್ತಿತ್ವ ಕಾರ್ಯಕ್ಷೇತ್ರಕ್ಕೆ ಮಾತ್ರ ಸೀಮಿತವಾಗದೇ ಭವಿಷ್ಯದ ಯೋಜನೆಗಳಿಗೆ ಪೂರಕವಾಗಿತ್ತು ಎಂದು ಹೇಳಿದರು.
ಪುತ್ರ ಪೂರನ್ ವರ್ಮ, ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಶರತ್ ಕೃಷ್ಣ ಪಡುವೆಟ್ನಾಯ ನುಡಿನಮನ ಸಲ್ಲಿಸಿದರು.
ಪುತ್ರ ಕೆಯ್ಯೂರ್ ವರ್ಮ,ಮೂಡುಬಿದ್ರೆ 18 ಬಸ್ತಿ ಮೊಕ್ತೇಸರ ದಿನೇಶ್ ಆನಡ್ಕ, ಸಹೋದರಿ
ಪ್ರಿಯದರ್ಶಿನಿ, ಸಹೋದರ ಸುಧೀಶ್, ವೈಶಾಲಿ, ಸಹೋದರ ಪ್ರೇಮಚಂದ್ರ, ಶ್ರೇಯಾಂಸ್ ಕುಮಾರ್, ಡಾ.ಸಾತ್ವಿಕ್, ನಿಯತಿ, ರೇಶ್ಮಾ ಹಂಸರಾಜ್, ಮಾಜಿ ಸಚಿವ ರಮಾನಾಥ ರೈ, ಕ.ಸಾ.ಪ.ಅಧ್ಯಕ್ಷ ಡಾ.ಶ್ರೀನಾಥ್ ಎಂ.ಪಿ., ಜಿಲ್ಲಾ ಕಾರ್ಯದರ್ಶಿ ರಾಜೇಶ್ವರಿ ಚೇತನ್, ಪ್ರಿನ್ಸಿಪಾಲರಾದ ದಿನೇಶ್ ಚೌಟ, ಪ್ರೊ.ಪಿ.ಎನ್.ಉದಯಚಂದ್ರ, ಕ.ಸ.ಪಾ. ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಎಸ್.ಕೆ.ಡಿ.ಆರ್.ಡಿ.ಪಿ. ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್, ಎಸ್.ಡಿ.ಎಂ. ಪಿ.ಜಿ.ಸೆಂಟರ್ ಡೀನ್ ಡಾ.ಪಿ.ವಿಶ್ವನಾಥ್, ಜನಜಾಗೃತಿ ವೇದಿಕೆ ಸ್ಥಾಪಕಾಧ್ಯಕ್ಷ ವಸಂತ್ ಸಾಲ್ಯಾನ್, ಮಾಜಿ ಶಾಸಕ ಪ್ರಭಾಕರ ಬಂಗೇರ, ವಿ.ಪ.ಸದಸ್ಯ ಪ್ರತಾಪ ಸಿಂಹ ನಾಯಕ್, ಎಸ್.ಡಿ.ಎಂ.ಶಿಕ್ಷಣ ಸಂಸ್ಥೆಗಳ ಉಪಕಾರ್ಯದರ್ಶಿ ಡಾ.ಸತೀಶ್ಚಂದ್ರ, ಉಜಿರೆ ಅಶೋಕ್ ಭಟ್, ಬದುಕು ಕಟ್ಟೋಣ ಬನ್ನಿ ತಂಡದ ಮೋಹನ್ ಕುಮಾರ್, ರಾಜೇಶ್ ಪೈ, ನೆಲ್ಯಾಡಿ ಸಂತ ಜಾರ್ಜ್ ವಿದ್ಯಾಸಂಸ್ಥೆಯ ಸಂಚಾಲಕ ಅಬ್ರಹಾಂ ವರ್ಗೀಸ್
, ಸೇವಾಭಾರತಿಯ ಪುರಂದರ್ ರಾವ್, ಎಂ.ಬಿ.ಪುರಾಣಿಕ್, ಎಸ್.ಡಿ.ಎಂ.ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಿದ್ದರು.
ಅಲಂಕಾರ ಪೂಜೆ
ಮೃತರ ಆತ್ಮಶಾಂತಿಗಾಗಿ ಶ್ರೀ ಜನಾರ್ದನ ಸ್ವಾಮಿ ಸನ್ನಿಧಿಯಲ್ಲಿ ವಿಶೇಷ ಅಲಂಕಾರ ಪೂಜೆ ನಡೆಯಿತು. ಬಳಿಕ ಸಾರ್ವಜನಿಕ ಸಮಾರಾಧನೆ ಜರಗಿತ್ತು. ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ ವಿದ್ಯಾರ್ಥಿಗಳು, ಬದುಕು ಕಟ್ಟೋಣ ಬನ್ನಿ ತಂಡದ ಸದಸ್ಯರು, ಸ್ಥಳೀಯ ಸಂಘ ಸಂಸ್ಥೆಗಳ ಸದಸ್ಯರು, ಉಜಿರೆಯ ವರ್ತಕರು ಹಾಗೂ ನಾಗರಿಕರು ಸಹಕರಿಸಿದರು.

ವೀಕ್ಷಿಸಿ SUBSCRIBERS ಮಾಡಿ🙏🏻

ಜಾಹೀರಾತು

Leave a Reply

error: Content is protected !!