ಕೊಕ್ಕಡ: ಕೌಕ್ರಾಡಿ ಶಾಲೆ ಹಾಗೂ ಚರ್ಚಿನಲ್ಲಿ ಕಳ್ಳತನ

ಶೇರ್ ಮಾಡಿ

ನೇಸರ ಜೂ.11: ಕೊಕ್ಕಡ – ಕೌಕ್ರಾಡಿ ಸಂತ ಜೋನರ ಹಿರಿಯ ಪ್ರಾಥಮಿಕ ಶಾಲೆ, ಹೈಸ್ಕೂಲ್ ಹಾಗೂ ಸೈಂಟ್ ಜೋನ್ ಬ್ಯಾಪ್ಟಿಸ್ಟ್ ಚರ್ಚಿನಲ್ಲಿ ಕಳ್ಳತನ.

ಜೂ.10ರ ತಡರಾತ್ರಿ ಕೊಕ್ಕಡ ಸಮೀಪದ ಕೌಕ್ರಾಡಿ ಯಲ್ಲಿರುವ ಪ್ರಾಥಮಿಕ ಶಾಲೆ, ಹೈಸ್ಕೂಲ್ ನ 5 ಕೊಠಡಿಗಳ ಬೀಗ ಮುರಿದು ಒಳನುಗ್ಗಿದ ಕಳ್ಳರು ಒಳಗಿದ್ದ ಕಪಾಟುಗಳನ್ನು ಒಡೆದು ಹುಡುಕಾಡಿ ಎಲ್ಲಾ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ ಶಾಲೆಯ ಯಾವುದೇ ವಸ್ತು ಕಳ್ಳತನ ವಾಗಿರುವುದಿಲ್ಲ.
ಚರ್ಚಿನ ಮುಂಭಾಗದಲ್ಲಿರುವ ಮೇರಿಮಾತೆಯ ಗ್ರೊಟ್ಟೋ ದ ಗೇಟಿನ ಬೀಗ ಮುರಿದು ಅಲ್ಲಿ ಇರಿಸಲಾದ ಕಾಣಿಕೆ ಡಬ್ಬಿಯನ್ನು ಹೊಡೆದು ಅದರಲ್ಲಿದ್ದ ಹಣವನ್ನು ಕೊಂಡೊಯ್ದಿದ್ದಾರೆ. ಸುದ್ದಿ ತಿಳಿದ ತಕ್ಷಣ ನೆಲ್ಯಾಡಿ ಹೊರ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ.

ವೀಕ್ಷಿಸಿ SUBSCRIBERS ಮಾಡಿ🙏🏻

ಜಾಹೀರಾತು

Leave a Reply

error: Content is protected !!