ಮೋದಿಯವರ ಮನ್ ಕಿ ಬಾತ್ ಕಾರ್ಯಕ್ರಮವನ್ನು ಆಲಿಸಲು ವಿಶೇಷ ವ್ಯವಸ್ಥೆ ಮಾಡಲಾಗಿತ್ತು.
ಮಾಚಾರು ಮಾಪಲದ ಸದಸ್ಯರ ಸಾಂಪ್ರದಾಯಿಕ ಗುಮ್ಟೆ ವಾದನ ಗಮನ ಸೆಳೆಯಿತು.
ನೇಸರ ಜೂ.26: ವಾಲ್ಮೀಕಿ ಮಹರ್ಷಿ, ವೀರ ಮದಕರಿ, ಛತ್ರಪತಿ ಶಿವಾಜಿ, ಒನಕೆ ಓಬವ್ವರಂತಹ ಖ್ಯಾತ ರನ್ನು ನೀಡಿದ ಎಸ್.ಟಿ.ಸಮಾಜ, ದೇಶದ ಅಭಿವೃದ್ಧಿಗೆ ನೀಡಿದ ಕೊಡುಗೆಯ ಜತೆ ಐತಿಹಾಸಿಕವಾಗಿಯೂ ಗುರುತಿಸಲ್ಪಡುತ್ತದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರ 8ನೇ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ಬಿಜೆಪಿ ಬೆಳ್ತಂಗಡಿ ಮಂಡಲದ ವತಿಯಿಂದ ಉಜಿರೆ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ಜೂ.26 ರಂದು ನಡೆದ ಪರಿಶಿಷ್ಟ ಪಂಗಡದ ಬಂಧುಗಳ ಸಮಾವೇಶ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗೌರವಿಸಿ ಮಾತನಾಡಿದರು.
ಬುಡಕಟ್ಟು ಸಮುದಾಯದ ಶಕ್ತಿಯಾಗಿರುವ ವಾಲ್ಮೀಕಿ ಜಯಂತಿಯನ್ನು ಆಚರಿಸುವ ಮೂಲಕ, 384 ದೇಶದಲ್ಲಿ ಏಕಲವ್ಯ ಶಾಲೆಗಳನ್ನು ಬುಡಕಟ್ಟು ಸಮುದಾಯ ಸ್ಥಾಪನೆ ಮುಂದಾಗಿದ್ದು, ಮುಂಡಾಜೆಯಲ್ಲೂ ಏಕಲವ್ಯ ಕ್ರೀಡಾ ವಸತಿ ಶಾಲೆಯನ್ನು ನಿರ್ಮಿಸುವ ಕೆಲಸವಾಗಿದೆ.
ಜಾತಿ ಆಧಾರಿತವಾಗಿ ನೀಡುತ್ತಿದ್ದ ಸವಲತ್ತನ್ನು ಮೋದಿ ಸರಕಾರ ಜಾತಿ ಧರ್ಮವಿಲ್ಲದೆ ಕೇಂದ್ರ ಸರಕಾರ ಪ್ರತಿಯೊಬ್ಬ ಭಾರತೀಯನಿಗೂ ನೀಡುತ್ತಿದೆ. ಚುನಾವಣೆಯ ಪ್ರಣಾಳಿಕೆಯನ್ನು ನಾಲ್ಕೇ ವರ್ಷದಲ್ಲಿ ಈಡೇರಿಸಲಾಗಿದೆ. ಈ ಮೂಲಕ ನವ ಬೆಳ್ತಂಗಡಿ ನಿರ್ಮಾಣದ ಚಿಂತನೆ ಸಾಕಾರಗೊಳಿಸಲಿದ್ದೇವೆ ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಎಂ.ಎಲ್.ಸಿ ಪ್ರತಾಪಸಿಂಹ ನಾಯಕ್ ಮಾತನಾಡಿ, ತಾಲೂಕಿನಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳಸಲು ಎಸ್.ಟಿ. ಸಮುದಾಯದ ಹಿರಿಯಕಾರ್ಯಕರ್ತರು ಭಜನೆಯ ಮೂಲಕ ಮನೆ ಮನೆಯ ಮೂಲಕ ಸಂಘಟನೆ ಮಾಡಲು ಶ್ರಮಿಸಿದ್ದಾರೆ, ಇಂದಿನ ಯುವ ಜನತೆಯು ಪಕ್ಷದ ಮೇಲೆ ಇಟ್ಟಿರುವ ವಿಶ್ವಾಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಎಸ್.ಟಿ. ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಬೆಳ್ತಂಗಡಿ ಬಿಜೆಪಿ ಮಂಡಲ ಉಸ್ತುವಾರಿ ಸುಧೀರ್ ಶೆಟ್ಟಿ ಕಣ್ಣೂರು, ಎಸ್.ಟಿ. ಮೋರ್ಚಾ ರಾಜ್ಯ ಉಪಾಧ್ಯಕ್ಷ ಮಂಜುನಥ್ ನಾಯ್ಕ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೊರಗಪ್ಪ ನಾಯ್ಕ್, ಮಾಜಿ ಶಾಸಕ ಕೆ.ಪ್ರಭಾಕರ ಬಂಗೇರ, ಎಸ್.ಟಿ. ಮೋರ್ಚಾ ಬೆಳ್ತಂಗಡಿ ಮಂಡಲ ಅಧ್ಯಕ್ಷ ಹರೀಶ್ ಎಳನೀರು, ಉಜಿರೆ ಗ್ರಾ.ಪಂ. ಅಧ್ಯಕ್ಷೆ ಪುಷ್ಪಾವತಿ ಆರ್.ಶೆಟ್ಟಿ, ಎಸ್.ಟಿ. ಮೋರ್ಚಾ ಜಿಲ್ಲಾ ಪ್ರಭಾರಿ ಜಯಶ್ರೀ ಕರ್ಕೇರ, ಬಿಜೆಪಿ ಎಸ್.ಟಿ. ಮೋರ್ಚಾ ಜಿಲ್ಲಾ ಪ್ರ.ಕಾರ್ಯದರ್ಶಿ ಹರೀಶ್ ಬಜಕ್ಕರೆ, ಬಿಜೆಪಿ ಮಂಡಲ ಪ್ರ.ಕಾರ್ಯದರ್ಶಿಗಳಾದ ಶ್ರೀನಿವಾಸ್ ರಾವ್, ಗಣೇಶ್ ಗೌಡ, ಎಸ್.ಟಿ. ಮೋರ್ಚಾ ಕಾರ್ಯದರ್ಶಿ ಸುಮಿತ್ರಾ ಉಪಸ್ಥಿತರಿದ್ದರು.
ಗುರಿಕಾರರು, ದೈವ ಚಾಕರಿ, ನಿವೃತ್ತ ನೌಕರರು, ಜಾನಪದ ಕ್ಷೇತ್ರ, ಶಿಕ್ಷಣ, ಕ್ರೀಡೆ, ನಾಟಿ ವೈದ್ಯರು, ಹೈ ನುಗಾರಿಕೆ, ನಿವೃತ್ತ ಹೋಧರು ಸೇರಿದಂತೆ ಒಟ್ಟು 450 ಮಂದಿಯನ್ನು ಸಮ್ಮಾನಿಸಲಾಯಿತು. 55 ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಬಿಜೆಪಿ ಎಸ್.ಟಿ. ಮೋರ್ಚಾ ಜಿಲ್ಲಾಧ್ಯಕ್ಷ ಚೆನ್ನಕೇಶವ ನಾಯ್ಕ್ ಪ್ರಾಸ್ತಾವಿಸಿದರು. ಉಜಿರೆ ಮಹಾಶಕ್ತಿ ಕೇಂದ್ರ ಅಧ್ಯಕ್ಷೆ ಬಾಬು ಗೌಡ ಸ್ವಾಗತಿಸಿದರು. ಎಸ್.ಟಿ.ಮೋರ್ಚಾ ತಾಲೂಕು ಪ್ರ.ಕಾರ್ಯದರ್ಶಿ ಶಾಂತಪ್ಪ ಕಲ್ಮಂಜ, ಡಾ.ಲವೀನಾ ಕೆ.ಬಿ. ನಿರೂಪಿಸಿದರು, ಲ್ಯಾಂಪ್ಸ್ ಸೊಸೈಟಿ ಅಧ್ಯಕ್ಷ, ಕಾರ್ಯಕ್ರಮ ಪ್ರಭಾರಿ ಲಿಂಗಪ್ಪ ನಾಯ್ಕ್ ವಂದಿಸಿದರು.