ಅಗ್ನಿಪಥ್- ಸೇನಾನೇಮಕಾತಿ ಯೋಜನೆಯ ಕುರಿತು ಮಾಹಿತಿ ಕಾರ್ಯಗಾರ

ಶೇರ್ ಮಾಡಿ

ನೇಸರ ಜೂ.26: ಕುಂಟಾಲಪಳಿಕೆ ಕಪಿಲಕೇಸರಿ ಯುವಕ ಮಂಡಲ, ಇದರ ವತಿಯಿಂತ ದಿನಾಂಕ 26.06.2022 ರಂದು ಸ.ಹಿ.ಪ್ರಾ.ಶಾಲೆ ಕುಂಟಾಲಪಳಿಕೆಯ ಸಭಾಂಗಣದಲ್ಲಿ, ಕೇಂದ್ರ ಸರಕಾರದ ಮಹತ್ವದ ಯೋಜನೆ ಅಗ್ನಿಪಥ್ ಇದರ ಕುರಿತಾಗಿ ಮಾಹಿತಿ ಕಾರ್ಯಗಾರ ನಡೆಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ, ನಿವೃತ್ತ ಸೇನಾನಿ ಮೋಹನ ಶೆಟ್ಟಿ, ಮುದ್ದಿಗೆ ಇವರು ಸೇನಾ ನೇಮಕಾತಿ ಪ್ರಕ್ರಿಯೆ, ಆಯ್ಕೆ ಪ್ರಕ್ರಿಯೆ, ತರಬೇತಿ, ಅಲ್ಲಿ ದೊರಕುವ ಸೌಲಭ್ಯಗಳು, ಅಲ್ಲಿನ ಶ್ರಮ ಮುಂತಾದುವುಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಜೊತೆಗೆ, ಈ ಯೋಜನೆಯಲ್ಲಿನ ಗೊಂದಲ, ಅಪಪ್ರಚಾರಗಳಿಗೆ ಕಿವಿಗೊಡದೆ ಆಸಕ್ತಿಯಿಂದ ಪ್ರತಿಯೊಬ್ಬ ಅರ್ಹ ವ್ಯಕ್ತಿಯೂ ಈ ನೇಮಕಾತಿಯಲ್ಲಿ ಪಾಲ್ಗೊಳ್ಳಲು ಕರೆಕೊಟ್ಟರು. ಅಂತೆಯೇ ಸೇನೆಗೆ ಸೇರಲಿಚ್ಛಿಸುವವರಿಗೆ ತಮ್ಮ ಅನುಭವಗಳನ್ನು ತಿಳಿಸಿ ಸ್ಫೂರ್ತಿ ತುಂಬಿದರು.
ಕಾರ್ಯಕ್ರಮದಲ್ಲಿ ಕಪಿಲ ಕೇಸರಿ ಯುವಕ ಮಂಡಲದ ಅಧ್ಯಕ್ಷರಾದ ರಾಜೇಶ್ ಗೌಡ ಬೊಳ್ಳೋಡಿ ಅಧ್ಯಕ್ಷತೆಯನ್ನು ವಹಿಸಿದರು. ಕಪಿಲ ಕೇಸರಿ ಯುವಕ ಮಂಡಲದ ಸದಸ್ಯರು ಉಪಸ್ಥಿತರಿದ್ದರು. ಸದಸ್ಯರಾದ ವೃಕ್ಷವರ್ಧನ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು.

ವೀಕ್ಷಿಸಿ SUBSCRIBERS ಮಾಡಿ🙏🏻

Leave a Reply

error: Content is protected !!