ನೇಸರ ಜೂ.27: ಜೆಸಿಐ ಉಪ್ಪಿನಂಗಡಿ ಘಟಕದ ನೇತೃತ್ವದಲ್ಲಿ ಬಜತ್ತೂರು ಗ್ರಾಮದ ಕಾಂಚನ ಸಮೀಪದ ಬಿದರಾಡಿ ಕಾಲೋನಿಯಲ್ಲಿ ಪರಿಸರ ದಿನಾಚರಣೆ ಮತ್ತು ಶಾಶ್ವತ ಯೋಜನೆಯ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ನಿಕಟಪೂರ್ವ ತಾಲೂಕು ಪಂಚಾಯತ್ ಸದಸ್ಯ ರಾದ ಮುಕುಂದ ಬಜತ್ತೂರು ಭಾಗವಹಿಸಿ, 50 ಕ್ಕೂ ಮಿಕ್ಕಿ ಸಾಗುವಾನಿ, ರಕ್ತಚಂದನ ಗಿಡಗಳನ್ನು ಕಾಲೋನಿನ ಜನರಿಗೆ ವಿತರಿಸಿ,ಈ ಗಿಡಗಳನ್ನು ಚೆನ್ನಾಗಿ ಬೆಳೆಸಿದಾಗ ಭವಿಷ್ಯದ ಪರಿಸರ, ನಮ್ಮ ಬದುಕಿಗೆ ಪ್ರಯೋಜನವಾಗುತ್ತದೆ. ಇಂತಹ ಶಾಶ್ವತ ಯೋಜನೆಯ ಕಾರ್ಯಕ್ಕೆ ಉಪ್ಪಿನಂಗಡಿ ಜೇಸಿ ಸಂಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ನಿರ್ದೇಶಕ ಜೇಸಿ ಮಹೇಶ್ ಖಂಡಿಗ, ಜೇಸಿ ನಾಗೇಶ್ ಬಿದಿರಾಡಿ, ಪ್ರಶಾಂತ್ ಬಿದಿರಾಡಿ ಉಪಸ್ಥಿತರಿದ್ದರು.
ಕಾಲೋನಿಯ ಆನಂದ, ಪೆರ್ನ, ದಿವಾಕರ, ಜಗದೀಶ್,ನೋಣಯ್ಯ ಸೇರಿದಂತೆ 25 ಮಿಕ್ಕಿ ಜನರು ಭಾಗವಹಿಸಿದ್ದರು. ಘಟಕದ ಅಧ್ಯಕ್ಷರಾದ ಜೇಸಿ.ಮೋಹನ್ ಚಂದ್ರ ತೋಟದ ಮನೆ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು.