||ಮಕ್ಕಳ ದಿನಾಚರಣೆ||-ಜ್ಞಾನೋದಯ ವಿದ್ಯಾಸಂಸ್ಥೆಯಲ್ಲಿ

ಶೇರ್ ಮಾಡಿ

ನೇಸರ ನ13: ಮಕ್ಕಳ ದಿನಾಚರಣೆಯ ಪ್ರಯುಕ್ತ ಜ್ಞಾನೋದಯ ವಿದ್ಯಾಸಂಸ್ಥೆಯಲ್ಲಿ ಇಂದು ವಿಜೃಂಭಣೆಯಿಂದ ಆಚರಿಸಲಾಯಿತು. 1 ರಿಂದ 4ನೇ ತರಗತಿಯ ಮಕ್ಕಳ ವರ್ಣರಂಜಿತ ಮೆರವಣಿಗೆ ಶಿಕ್ಷಕರ ನೇತೃತ್ವದಲ್ಲಿ ನಡೆಯಿತು.
1 ರಿಂದ ಪ್ರಥಮ ಪಿಯುಸಿ ವರೆಗಿನ ತರಗತಿಗಳಿಗೆ ಪಾಠವನ್ನು ಇಂದು ದ್ವಿತೀಯ ಪಿಯುಸಿಯ ವಿದ್ಯಾರ್ಥಿಗಳು ಭೋದಿಸಿದರು. ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿ ಶಮಂತ್ ಕೃಷ್ಣ ಶಾಲಾ ಪ್ರಾಂಶುಪಾಲರಾಗಿ ಎಲ್ಲರ ಗಮನ ಸೆಳೆದರು. ವಿದ್ಯಾರ್ಥಿಗಳು ಶಿಕ್ಷಕರಾಗಿ ಲವಲವಿಕೆಯಿಂದ ಪಾಠವನ್ನು ಮಾಡುವುದರ ಜೊತೆಗೆ ಹೂಗುಚ್ಚ ಸ್ವರ್ಧೆಯಲ್ಲಿ ಭಾಗವಹಿಸಿ ಕಲಾತ್ಮಕವಾಗಿ ಹೂಗುಚ್ಚಗಳನ್ನು ತಯಾರಿಸಿ ಸಂಸ್ಥೆಯ ಪ್ರಾಂಶುಪಾಲಕರಿಗೆ, ಶಿಕ್ಷಕರಿಗೆ ನೀಡಿದುದು ಕಾರ್ಯಕ್ರಮದ ಆಕರ್ಷಣೆಯಾಗಿಯಿತು.
ಕಾಲೇಜಿನ ಪ್ರಾಂಶುಪಾಲ ರೆ.ಫಾ. ತೋಮಸ್ ಬಿಜಿಲಿ ಶಿಕ್ಷಕರಿಗೆ ಹಲವು ಮನೋರಂಜನಾ ಆಟಗಳನ್ನು ಹಾಗೂ ಸ್ಪರ್ಧೆಗಳನ್ನು ನಡೆಸಿದರು. ಕಾರ್ಯಕ್ರಮದಲ್ಲಿ ಬೆಥನಿ ಸಮೂಹ ವಿದ್ಯಾಸಂಸ್ಥೆಗಳ ಕೌನ್ಸಿಲರ್ ರೆ.ಫಾ. ವರ್ಗೀಸ್ ಕೈಪನಡ್ಕ ಮಾತನಾಡಿ ಮಕ್ಕಳು ಸಮಾಜದ ಆಸ್ತಿ, ದೇಶದ ಭವಿಷ್ಯ ಮಕ್ಕಳ ಕೈಯಲ್ಲಿದೆ, ಮಕ್ಕಳು ತಮಗಾಗಿ ಕಷ್ಟ ಪಡುವ ತಂದೆ ತಾಯಿಗಳನ್ನು ಪ್ರೀತಿಸಬೇಕೆಂದು ಕಿವಿಮಾತು ಹೇಳಿದರು. ಸಂಸ್ಥೆಯ ಸಂಚಾಲಕ ರೆ.ಫಾ.ಸತ್ಯನ್ ತೋಮಸ್ ಒ ಐ ಸಿ ಹಾಗೂ ಉಪಪ್ರಾಂಶುಪಾಲ ಜೋಸ್.ಎಮ್.ಜೆ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಗಂಗಾಧರ ಶೆಟ್ಟಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಿಕ್ಷಕರ ವರ್ಗ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು.

Leave a Reply

error: Content is protected !!