ನೇಸರ ಜೂ.27: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಡಬ ವಲಯದ ವತಿಯಿಂದ ಕಡಬ ಹಿ.ಪ್ರಾ.ಶಾಲೆ ಯಲ್ಲಿ ನಡೆದ ಹಸಿರು ಇಂದನ ಬಳಕೆ ಕಾರ್ಯಕ್ರಮವನ್ನು ಉಧ್ಘಾಟಿಸಿದ ಕಡಬ ತಾಲೂಕು ಯೋಜನಾಧಿಕಾರಿ ಮೇದಪ್ಪ ಗೌಡ ನಾವೂರು ಮಾತನಾಡಿ ಸೌರ ಶಕ್ತಿಯ ಬಳಕೆಯಿಂದ ಕಾಡುಸಂಪತ್ತನ್ನು ಉಳಿಸುವುದರೊಂದಿಗೆ ಪರಿಸರದ ತಾಪಮಾನವನ್ನು ಸಮತೋಲನ ಮಾಡಲು ಸಹಕಾರಿ ಯಾಗುತ್ತದೆ. ಮುಗಿಯದ ಸಂಪತ್ತು ಸೌರಶಕ್ತಿ ಇದರ ಬಳಕೆ ಪ್ರಕೃತಿಗೆ ನಾವು ನೀಡುವ ಕೊಡುಗೆಯಾಗಿದೆ ಇದರ ಪ್ರಯೋಜನ ಎಲ್ಲರೂ ಪಡೆದುಕೊಳ್ಳುವಂತೆ ಶುಭಹಾರೈಸಿದರು
ಕಾರ್ಯಕ್ರಮದಲ್ಲಿ ಸೆಲ್ಕೋಸೋಲಾರ್ ಸಂಸ್ಥೆಯ ಮಾರ್ಕೇಟಿಂಗ್ ಮ್ಶಾನೇಜರ್ ಚಿದಾನಂದ ಗೌಡ ಹಾಗೂ ಪದ್ಮಸೋಲಾರ್ ಸಂಸ್ಥೆಯ ಮಾರ್ಕೇಟಿಂಗ್ ಮ್ಶಾನೇಜರ್ ಈಶ್ವರ ಯಮ್ ಯಸ್., ಸೋಲಾರ್ ಘಟಕಗಳಾದ ಸೋಲಾರ್ ವಾಟರ್ ಹೀಟರ್, ಸೋಲಾರ್ ಲೈಟ್ ˌ ಹಾಗೂ ಸೋಲಾರ್ ಇನ್ವಾರ್ಟರ್ ಗಳು ಹಾಗೂ ಅವುಗಳ ಧರಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಶಕ್ಷತೆಯನ್ನು ಮಾಲೇಶ್ವರ ಒಕ್ಕೂಟದ ಅಧ್ಶಕ್ಷರಾದ ರಮೇಶ್ ರೈಯವರು ವಹಿಸಿದ್ದರು. ಅಡ್ಡಗದ್ದೆ ಸೇವಾಪ್ರತಿನಿಧಿ ನಳಿನಿ ಸ್ವಾಗತಿಸಿ. ಕಡಬ ಸೇವಾಪ್ರತಿನಿಧಿ ಪುಪ್ಪಲತಾ ಧನ್ಶವಾದವಿತ್ತರು. ಕಡಬ ವಲಯ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ ಯೋಜನೆಯಿಂದ ಬ್ಶಾಂಕ್ ಮೂಲಕ ಸೋಲಾರ್ ಅಳವಡಿಕೆ ಮಾಡುವ ಫಲಾನುಭವಿಗಳಿಗೆ ಸಿಗುವ ಆರ್ಥಿಕ ನೆರವಿನ ಬಗ್ಗೆ ಮಾಹಿತಿ ನೀಡಿ ಕಾರ್ಯಕ್ರಮ ನಿರ್ವಹಿಸಿದರು.
ವಲಯದ ಸೇವಾಪ್ರತಿನಿಧಿಗಳಾದ ದುರ್ಗಾವತಿˌ ಸವಿತಾˌ ಅಪರ್ಣˌ ಸುಗುಣˌ ಸಂದ್ಶಾ ಹಾಗೂ ಐವತ್ತು ಜನ ಆಯ್ದ ಫಲಾನುಭವಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.