ನೇಸರ ಜೂ.27: ನಿತ್ಯಾನಂದ ನಗರ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯ ವ್ರತಾಚರಣೆಯ ಬಗ್ಗೆ ಭಕ್ತರ ಸಮಾಲೋಚನಾ ಸಭೆ ಜೂ.27 ರಂದು ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದಲ್ಲಿ ಚತುರ್ಮಾಸ್ಯ ಸಮಿತಿ ಅಧ್ಯಕ್ಷ ಶಾಸಕ ಹರೀಶ್ ಪೂಂಜಾರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಸ್ವಾಮೀಜಿ ಆಶೀರ್ವಚನ ನೀಡುತ್ತಾ ಲೋಕಕಲ್ಯಾಣಕ್ಕಾಗಿ ಯುಗ ಯುಗಾoತರದಿಂದ ಬಂದಿರುವ ಚತುರ್ಮಾಸ್ಯ ವೃತದ ಮೂಲಕ ಆಧ್ಯಾತ್ಮಿಕ ಕ್ರೋಡಿಕರಣವಾಗಲಿ ಶ್ರದ್ಧಾ ಭಕ್ತಿಯಿಂದ ಮಾಡುವ ಈ ವೃತ ಸರಳ ಮತ್ತು ಸಮಾನತೆಗೆ ಪ್ರೇರಣೆಯಾಗಲಿ. ಹರಿದ್ವಾರದಲ್ಲಿ ಶಿಷ್ಯವರ್ಗಕ್ಕಾಗಿ ನಾಲ್ಕು ಎಕ್ರೆ ಜಾಗ ಭಕ್ತರ ಸಹಕಾರದಿಂದ ಗುರುತಿಸಲಾಗಿದೆ ಎಂದರು.
ಶಾಸಕ ಹರೀಶ್ ಪೂಂಜಾ ಮಾತನಾಡುತ್ತಾ ಜುಲೈ 13 ರಿಂದ ಅಗೋಸ್ಟ್ 29ರ ವರೆಗೆ 48 ದಿನಗಳಲ್ಲಿ ನಡೆಯಲಿರುವ ಈ ವರ್ಷದ ಚತುರ್ಮಾಸ್ಯ ವೃತ 5 ಜಿಲ್ಲೆಗಳ ಗುರುಗಳ ಶಿಷ್ಯರಿಂದ ಶ್ರದ್ಧಾ ಭಕ್ತಿಯಿಂದ ನಡೆಯಲಿದ್ದು ಜಿಲ್ಲೆಯ ಮಂತ್ರಿಗಳ ಮತ್ತು ಶಾಸಕರ ಮತ್ತು ಭಕ್ತರ ಸಹಕಾರದಿಂದ ನಡೆಯಲಿದೆ. ಗುರುದೇವ ಮಠದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಶಾಶ್ವತ ಚಪ್ಪಾರ ನಿರ್ಮಾಣ ಕಾರ್ಯ ಪ್ರಾರಂಭವಾಗಿದೆ. ಜುಲೈ 12 ರ ಒಳಗೆ ಕಾಮಗಾರಿ ಮುಗಿಯಲಿದೆ. ಎಲ್ಲರು ಯಶಸ್ವಿವಿಗೆ ಸಹಕಾರ ನೀಡಬೇಕು ಎಂದರು.
ಶ್ರೀ ರಾಮ ಕ್ಷೇತ್ರ ಸೇವಾ ಸಮಿತಿ ಸಂಚಾಲಕ ಜಯಂತ್ ಕೋಟ್ಯಾನ್ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶ್ರೀರಾಮ ಕ್ಷೇತ್ರ ಸೇವಾ ಸಮಿತಿ ತಾಲೂಕು ಅಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು, ಚತುರ್ಮಾಸ್ಯ ಸಮಿತಿ ಕಾರ್ಯದರ್ಶಿ ಗಣೇಶ್ ಗೌಡ, ತಾಲೂಕು ಶ್ರೀ ರಾಮ ಕ್ಷೇತ್ರ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಶಿಷ್ಯವರ್ಗದವರು ಉಪಸ್ಥಿತರಿದ್ದರು. ಶ್ರೀ ರಾಮ ಕ್ಷೇತ್ರ ಸಮಿತಿಯ ಜಿಲ್ಲಾ ಸಂಚಾಲಕ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ನಿರೂಪಿಸಿ ವಂದಿಸಿದರು.