ನೇಸರ ಜೂ.27: ಕೊಕ್ಕಡ ಅಮೃತ ಗ್ರಾಮಪಂಚಾಯತ್ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆ(ರಿ ) ಕೊಕ್ಕಡ ವಿಭಾಗದ ಸಂಯೋಜನೆಯಲ್ಲಿ ರೈತ ಹಿತ ಕಾರ್ಯಕ್ರಮ ಕೊಕ್ಕಡ ಹಲ್ಲಿಂಗೇರಿಯ ಧರ್ಮಸ್ಥಳ ಸಭಾ ಭವನದಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಕೊಕ್ಕಡ ಗ್ರಾಮ ಪಂಚಾಯತ್ ಅಧ್ಯಕ್ಷರು ಯೋಗೀಶ್ ಆಲಂಬಿಲ ಪ್ರಾಸ್ತಾವಿಕ ಮಾತನಾಡಿ ಪ್ರದಾನಮಂತ್ರಿ ಕೃಷಿ ಸಮ್ಮಾನ್ ನಿಧಿ ಯೋಜನಾ ekyc ಮಾಡದೇ ಫಲನುಭವಿ ರೈತರು ಯೋಜನೆ ಸೌಲಭ್ಯ ಮತ್ತು ಸಹಕಾರಿ ಬ್ಯಾಂಕ್ ನಲ್ಲಿ ಸಾಲ ಸೌಲಭ್ಯ ಪಡೆಯಲು ಫಾರ್ಮರ್ ಐಡಿ ಮಾಡದೇ ಸೌಲಭ್ಯ ವಂಚಿತರಾಗಬಾರದಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಇದೇ 30 ರಂದು PM ಕಿಸಾನ್ ಸಮ್ಮಾನ್ ಯೋಜನೆ ekyc ಮಾಡಲು ಅಂತಿಮವಾಗಿದೆ ಈ ಕಾರ್ಯಕ್ರಮದ ಪ್ರಯೋಜನ ಪಡೆಯಲು ತಿಳಿಸಿದರು.
ಮುಖ್ಯಅತಿಥಿಯಾಗಿ ಕೊಕ್ಕಡ ಸಿ ಎ ಬ್ಯಾಂಕ್ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಶ್ರೀ ಕ್ಷೇತ್ರ ದ.ಗ್ರಾ. ಯೋಜನೆ ಸಿ ಎಸ್ ಸಿ ಕೇಂದ್ರ ಮೇಲ್ವಿಚಾರಕ ಪ್ರಶಾಂತ್ ಮಾತನಾಡಿ ರೈತರು ಮತ್ತು ಕಾರ್ಮಿಕರಿಗೆ ತಳಮಟ್ಟತದ ಶ್ರಮ ಜೀವಿಗಳಿಗೆ ಸರಕಾರದ ಸೌಲಭ್ಯ ಮುಟ್ಟಿಸುವ ಸಲುವಾಗಿ ಪೂಜ್ಯ ವೀರೇಂದ್ರ ಹೆಗಡೆಯವರ ಆಶಾಯದಂತೆ ಸಿ ಎಸ್ ಸಿ ಕೇಂದ್ರ ಕಾರ್ಯಾಚರಿಸುತ್ತಿದೆ. ಕಾರ್ಯಕ್ರಮಗಳ ಕುರಿತಾಗಿ ಸವಿಸ್ತಾರ ಮಾಹಿತಿ ನೀಡಿದರು.
ಕೊಕ್ಕಡ ಸಿ ಎ ಬ್ಯಾಂಕ್ ಮ್ಯಾನೇಜರ್ ಬ್ಯಾಂಕ್ ಸೌಲಭ್ಯ ಪಡೆಯಲು ರೈತರು ಒದಗಿಸಬೇಕಾದ ದಾಖಲೆ ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಧರ್ಮಸ್ಥಳ ಯೋಜನಾ ವಲಯ ಒಕ್ಕೂಟ ಅಧ್ಯಕ್ಷ ಸೇಸಪ್ಪ ಮೂಲ್ಯ. ತಾಲೂಕು ಜನಜಾಗೃತಿ ಸಮಿತಿ ಸದಸ್ಯರು ಕುಶಾಲಪ್ಪ. ಹಿರಿಯ ವೈದ್ಯರು ಮೋಹನ್ ದಾಸ್ ಕೊಕ್ಕಡ. ಕೊಕ್ಕಡ ಪಂಚಾಯತ್ ಅಭಿವೃದ್ದಿ ಅಧಿಕಾರಿ ದೀಪಕ ರಾಜ್. ಪಂಚಾಯತ್ ಉಪಾಧ್ಯಕ್ಷರು ಶ್ರೀಮತಿ ಪವಿತ್ರ. ಸದಸ್ಯರು. ಯೋಜನೆ ಸೇವಾ ಪ್ರತಿನಿದಿಗಳು. ವಿಪತ್ತು ನಿರ್ವಹಣೆ ಘಟಕದ ಪ್ರೇರಕಿ ಶ್ರೀಮತಿ ಗಿರಿಜಾ ಶಿಶಿಲ. ರೈತರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕೇಶವ ಹಲ್ಲಿಂಗೇರಿ ನಿರೂಪಿಸಿ.. ಶ್ರೀ ಕ್ಷೇ.ದ ಗ್ರಾ.ಯೋಜನೆ ಮೇಲ್ವಿಚಾರಕಿ ಶ್ರೀಮತಿ ಮಮತಾ ಸ್ವಾಗತಿಸಿದರು.