ಸಂತ ಜಾರ್ಜ್ ಪದವಿಪೂರ್ವ ಕಾಲೇಜು ನೆಲ್ಯಾಡಿಗೆ ಒಂದು ಕಿರೀಟವಿದ್ದಂತೆ – ಡಾ.ಜಯರಾಜ್ ಎನ್.

ಶೇರ್ ಮಾಡಿ

ನೇಸರ ಜೂ.30: ಸಂತ ಜಾರ್ಜ್ ಪದವಿಪೂರ್ವ ಕಾಲೇಜು ನೆಲ್ಯಾಡಿಗೆ ಒಂದು ಕಿರೀಟವಿದ್ದಂತೆ. ಇಂದಿನ ದಿನಗಳಲ್ಲಿ ಶಿಕ್ಷಣವೆಂಬುವುದು ವ್ಯಾಪಾರೀಕರಣವಾಗುತ್ತಿದೆ. ಜೀವನದಲ್ಲಿ ಮೇಲೆ ಬರಲು ಪ್ರೋತ್ಸಾಹ ಬೇಕು. ಇಂದಿನ ಆಧುನಿಕ ಜಾಗೃತಿಯಲ್ಲಿ ನಾವು ಯಂತ್ರದಂತೆ ಆಗಿದ್ದೇವೆ ಇದರಿಂದ ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆಯನ್ನು ಹಾಳು ಮಾಡಿದೆ. ಓದು ಮತ್ತು ಬರೆಯುವುದನ್ನು ಮಾಡಿದರೆ ಮಾತ್ರ ಜೀವನದಲ್ಲಿ ಮೇಲೆ ಬರಲು ಸಾಧ್ಯ. ಕಷ್ಟಪಡದೆ ಎಂದಿಗೂ ಜಯ ಸಿಗುವುದಿಲ್ಲ. ಜ್ಞಾನ ಸಂಪಾದನೆಗೆ ಉತ್ತಮವಾದ ಮಾಧ್ಯಮ ಗ್ರಂಥವಾಗಿದೆ, ಒಳ್ಳೊಳ್ಳೆ ಗ್ರಂಥಗಳನ್ನು ನಾವು ಓದಬೇಕು. ನಿರಂತರವಾದ ಕಠಿಣ ಅಧ್ಯಯನ ಅಗತ್ಯವಿದೆ. ಪಠ್ಯದ ಜೊತೆ ಸಾಮಾನ್ಯ ಜ್ಞಾನ ಅತಿ ಅಗತ್ಯ. ನಾವೆಲ್ಲರೂ ಈಗ ಸ್ಪರ್ಧಾತ್ಮಕ ಜಗತ್ತಿನಲ್ಲಿ ಬದುಕುತ್ತಿದ್ದೇವೆ ಎಂಬುದಾಗಿ ಡಾ.ಜಯರಾಜ್ ಎನ್., ಸಂಯೋಜಕರು ಮಂಗಳೂರು ಘಟಕ ಕಾಲೇಜು ನೆಲ್ಯಾಡಿ ನುಡಿದರು.

ಅವರು ನೆಲ್ಯಾಡಿ ಸಂತ ಜಾರ್ಜ್ ಪದವಿಪೂರ್ವ ಕಾಲೇಜಿನ ಸ್ಥಾಪನ ದಿನಾಚರಣೆ, ಕಾಲೇಜು ಸಂಸತ್ತಿನ ಸಹಪಠ್ಯ ಚಟುವಟಿಕೆಗಳ ಉದ್ಘಾಟನೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲಿಸುವ ಮೂಲಕ ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿದರು.

ಕಾಲೇಜಿನಲ್ಲಿ ಬೆಳಗ್ಗೆ ನಡೆದ ದಿವ್ಯ ಕೃತಜ್ಞತಾ ಬಲಿಪೂಜೆ ಹಾಗೂ ಬಿಷಪರ ಪುತ್ತಳಿಗೆ ಹಾರರ್ಪಣೆ ನೆರವೇರಿಸಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ರೇ.ಫಾ.ವರ್ಗೀಸ್ ಕಾವನಾಟಿಲ್ ವಿಕಾರ್ ಸೈಂಟ್ ತೋಮಸ್ ಚರ್ಚ್ ಕೊಣಾಲು ರವರು ಮಾತನಾಡಿ ಎಲ್ಲರೂ ಪ್ರೀತಿಯಿಂದ ಬೆಳೆಯಿರಿ, ಸ್ವಾರ್ಥ ರಹಿತರಾಗಿ, ವಿದ್ಯೆ ಕಲಿತವರೆಲ್ಲರೂ ಎಲ್ಲರನ್ನು ಪ್ರೀತಿಸಬೇಕು. ಬದುಕುವ ನಾಲ್ಕು ದಿನದ ಜೀವನವನ್ನು ಸಂತೋಷದಿಂದ ಕಾಣಬೇಕು. ಪವಿತ್ರಗ್ರಂಥಗಳನ್ನು ಪುಸ್ತಕದಲ್ಲಿ ಓದಬೇಕು. ಶಿಕ್ಷಣವೆಂಬುದು ಕೇವಲ ಉದ್ಯೋಗಕ್ಕೆ ಮಾತ್ರ ಸೀಮಿತವಾಗಿರಬಾರದು ಎಂದರು ಹಾಗೂ ವಿದ್ಯಾ ಸಂಸ್ಥೆಗೂ, ವಿದ್ಯಾರ್ಥಿಗಳಿಗೂ ಶುಭವನ್ನು ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೆಲ್ಯಾಡಿ ಸಂತ ಜಾರ್ಜ್ ಪದವಿ ಪೂರ್ವ ಕಾಲೇಜಿನ ಸಂಚಾಲಕರಾದ ಅಬ್ರಾಹಂ ವರ್ಗೀಸ್ ವಹಿಸಿ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಎಲಿಯಾಸ್ ಎಂ ಕೆ., ಆಂಗ್ಲ ವಿಭಾಗದ ಮುಖ್ಯ ಶಿಕ್ಷಕರಾದ ಹರಿಪ್ರಸಾದ್, ಕನ್ನಡ ಮಾಧ್ಯಮ ವಿಭಾಗದ ಮುಖ್ಯ ಶಿಕ್ಷಕರಾದ ಎಂ. ವೈ .ತೊಮಸ್ ಹಾಗೂ ವಿದ್ಯಾರ್ಥಿ ನಾಯಕರುಗಳು ಉಪಸ್ಥಿತರಿದ್ದರು.

ಸನ್ಮಾನ :
2022-23ನೇ ಸಾಲಿನ ನೂತನ ವಿದ್ಯಾರ್ಥಿ ನಾಯಕರುಗಳಾಗಿ ಆಯ್ಕೆ ವಿದ್ಯಾರ್ಥಿಗಳಿಗೆ ಶಾಲು ಹೊಂದಿಸಿ, ಹೂವನ್ನು ನೀಡಿ ಗೌರವಿಸಲಾಯಿತು.
2021- 22 ನೇ ಎಸ್ ಎಸ್ ಎಲ್ ಸಿ, ಪಿಯುಸಿ ಯಲ್ಲಿ ಅತ್ಯಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಶಾಲು ಹೊದಿಸಿ, ಸ್ಮರಣಿಕೆ ಯನ್ನು ನೀಡಿ, ಹಳೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ನೀಡಿದ ನಗದು ಹಣವನ್ನು ವಿದ್ಯಾರ್ಥಿಗಳಿಗೆ ನಗದು ಬಹುಮಾನವಾಗಿ ನೀಡಲಾಯಿತು.

ವಿಶೇಷ ಆಕರ್ಷಣೆ :
ವಿದ್ಯಾರ್ಥಿಗಳಿಂದ ಸರ್ವಧರ್ಮ ಪ್ರಾರ್ಥನೆ ಎಲ್ಲರ ಆಕರ್ಷಣೆಯಾಗಿತ್ತು.
ರೇ.ಫಾ.ವರ್ಗೀಸ್ ಕಾವನಾಟಿಲ್ “ಫಾದರ್” ದೀಕ್ಷೆ ಪಡೆದ 13ನೇ ವರ್ಷದ ವಾರ್ಷಿಕೋತ್ಸವವನ್ನು ಕೇಕ್ ಕತ್ತರಿಸುವ ಮೂಲಕ ವೇದಿಕೆಯಲ್ಲಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಕಾಲೇಜಿನ ನಿವೃತ್ತಿ ಶಿಕ್ಷಕರುಗಳಾದ ಆರ್ ವೆಂಕಟರಮಣ, ರವೀಂದ್ರ ಟಿ, ಉಲಹ್ನನ್, ನಿವೃತ್ತ ಕಚೇರಿ ಸಿಬ್ಬಂದಿಗಳಾದ ಜೋಸೆಫ್, ಬೆಳಿಯಪ್ಪ, ಮಾದವ ಹಾಗೂ ಹಿರಿಯ ವಿದ್ಯಾರ್ಥಿಗಳು, ಪೋಷಕರು, ವಿದ್ಯಾರ್ಥಿಗಳು, ಉಪನ್ಯಾಸಕರುಗಳು ಉಪಸ್ಥಿತರಿದ್ದರು.
ಎಂ.ವೈ ತೋಮತ್ ಸ್ವಾಗತಿಸಿ. ಪ್ರಾಂಶುಪಾಲರಾದ ಎಲಿಯಾಸ್ ಎಂ ಕೆ ರವರು ವಿದ್ಯಾರ್ಥಿ ನಾಯಕರುಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಸಾಧಕ ವಿದ್ಯಾರ್ಥಿಗಳ ಪಟ್ಟಿಯನ್ನು ಶಿಕ್ಷಕರಾದ ಶ್ರೀಮತಿ ಭವ್ಯ, ಕರುಣಾಕರ, ಶ್ರೀಮತಿ ಜೆಸಿಂತಾ, ಶ್ರೀಮತಿ ಗೀತಾ ವಾಚಿಸಿದರು. ಉಪನ್ಯಾಸಕರಾದ ವಿಶ್ವನಾಥ್ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು. ಹರಿಪ್ರಸಾದ್ ಕೆ. ವಂದಿಸಿದರು.

Leave a Reply

error: Content is protected !!