ನೇಸರ ಜು.05: ಕಾರು ಮತ್ತು ಬಸ್ಸು ಡಿಕ್ಕಿಯಾಗಿ ಕಾರಿನಲ್ಲಿದ್ದ ಚಾಲಕ ಹಾಗೂ ಮಗುವಿಗೆ ಗಾಯಗಳಾದ ಘಟನೆ ರಾ ಹೆ. 75ರ ಗುಂಡ್ಯ ಸಮೀಪದ ಬರ್ಚಿನ ಹಳ್ಳ ಎಂಬಲ್ಲಿ ಜುಲೈ 5ರ ಸಂಜೆ ಅತಿಯಾದ ಮಳೆಯಿಂದ ಅಪಘಾತ ಸಂಭವಿಸಿದೆ.
ಧರ್ಮಸ್ಥಳದಿಂದ ಶಿವಮೊಗ್ಗಕ್ಕೆ ಹೋಗುತ್ತಿದ್ದ ಬಸ್ಸಿಗೆ ಹಾಸನದಿಂದ ಮಂಗಳೂರಿಗೆ ಹೋಗುವ ಸ್ವಿಫ್ಟ್ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ನಜ್ಜುಗುಜ್ಜಾಗಿದ್ದು, ಚಾಲಕ ಇಕ್ಬಾಲ್ ಹಾಗೂ ನಿಹಾಲ್ ಕಾಲಿಗೆ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಕಾರಿನಲ್ಲಿ ಒಟ್ಟು ಐದು ಪ್ರಯಾಣಿಕರಿದ್ದು ಉಳಿದವರು ಸುರಕ್ಷಿತವಾಗಿದ್ದಾರೆ.
ಸ್ಥಳಕ್ಕೆ ನೆಲ್ಯಾಡಿ ಹೊರಠಾಣೆಯ ಹೆಡ್ ಕಾನ್‍ಸ್ಟೇಬಲ್ ಬಾಲಕೃಷ್ಣ, ಕಾನ್‍ಸ್ಟೇಬಲ್ ಗಳಾದ ಯೋಗರಾಜ್ ಹಾಗೂ ಪ್ರತಾಪ್ ಭೇಟಿ ನೀಡಿ ಸಂಚಾರ ಸುಗಮಗೊಳಿಸಿದ್ದಾರೆ.