“ಅರಿಷಡ್ವರ್ಗಗಳನ್ನು ನಿಯಂತ್ರಿಸಿ ಆಧ್ಯಾತ್ಮದ ಸಾಧನೆ ಮಾಡುವುದರಿಂದ ಶಕ್ತಿಯು ಜಾಗೃತಗೊಂಡು ಲೋಕಕ್ಕೆ ಅನುಕೂಲ ಸ್ಥಿತಿ ನಿರ್ಮಿಸುತ್ತದೆ. ಸಾತ್ವಿಕತೆಯ ಜೀವನದ ಮೂಲಕ ಶಾಂತಿ, ಸುಖ, ನೆಮ್ಮದಿ ಸಿಗುತ್ತದೆ. ಅಧಿಕಾರದಿಂದ ಸಿಗುವ ಸಂಪತ್ತು ಶಾಶ್ವತವಲ್ಲ. ಆಧ್ಯಾತ್ಮಿಕ ಸುಧೆಯ ಅರಿವು, ಭಕ್ತಿಯ ಭಾವ ಜಾಗೃತಗೊಳಿಸುವ ಚಾತುರ್ಮಾಸ್ಯದ ಮುಖ್ಯ ಉದ್ದೇಶ ಆತ್ಮ ಕಲ್ಯಾಣ ಹಾಗೂ ಲೋಕ ಕಲ್ಯಾಣ”
➽ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ
ನೇಸರ ಜು.13: ಆಧ್ಯಾತ್ಮದ ಚಿಂತನೆಯೊಂದಿಗೆ ಪೂಜೆ ಮಾಡುವ ಶ್ರೇಷ್ಠ ಗುರುವರ್ಯವರ ಆದರ್ಶ, ಚಿಂತನೆಗಳು, ಸಂಸ್ಕಾರ ಹಾಗೂ ವಿಚಾರಧಾರೆಗಳು ನಮ್ಮಲ್ಲಿ ಅರಿವು ಮೂಡಿಸಲು ಮಾರ್ಗದರ್ಶನ ನೀಡುತ್ತವೆ. ಗುರುವಿನ ಆರಾಧನೆ ಮೂಲಕ ಸಂಕಲ್ಪ ನೆರವೇರುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ,ಸಂಸದ ನಳೀನ್ ಕುಮಾರ್ ಕಟೀಲ್ ಹೇಳಿದರು.
ಕನ್ಯಾಡಿ ಶ್ರೀ ರಾಮ ಕ್ಷೇತ್ರ ಮಹಾ ಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯದ ಪ್ರಥಮ ದಿನವಾದ ಬುಧವಾರ ಅವರು ಪಾದ ಪೂಜೆ ನೆರವೇರಿಸಿ ಮಾತನಾಡಿದರು.
ಭಾರತದಲ್ಲಿ ಗುರು ಪೀಠವೇ ಶ್ರೇಷ್ಠ, ರಾಜ ಪೀಠಕ್ಕು ಗುರು ಪೀಠವೇ ಬಲ ನೀಡುತ್ತದೆ. ಜನ ಸಾಮಾನ್ಯರಿಗೆ ಜ್ಞಾನದ ಸಿಂಚನ ನೀಡುವ ಗುರು ಪರಂಪರೆ ವರ್ತಮಾನದ ಕೊಂಡಿ.
ಶಾಸಕ ಹರೀಶ್ ಪೂಂಜ ವಯಸ್ಸಿನಲ್ಲಿ ಕಿರಿಯರಾದರು ಗುರುಗಳ ಆಶೀರ್ವಾದ ಮಾರ್ಗದರ್ಶನದಿಂದ ಹಿರಿಯವಮಟ್ಟದ ಕೆಲಸಗಳನ್ನು ಮಾಡುತ್ತಿದ್ದು ಜನಾನುರಾಗಿ ಯಾಗಿದ್ದಾರೆ ಎಂದರು.
ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಹರೀಶ್ ಪೂಂಜ ಸ್ವಾಗತಿಸಿ, ಜಿಲ್ಲೆಯ 8 ವಿಧಾನ ಸಭೆ ಹಾಗೂ ರಾಜ್ಯದ ಜಿಲ್ಲೆಗಳು ಸೇರಿ ನಡೆಯುತ್ತಿರುವ ಗುರುಗಳ ಚಾತುರ್ಮಾಸ್ಯ ಸಮಾಜದ ಯಶಸ್ವಿ ಸಂಕಲ್ಪಗಳಿಗೆ ದಾರಿದೀಪ, ಶಾಶ್ವತ ಯೋಜನೆ ರೂಪಿಸಿ ಸಂಸದ, ಸಚಿವರ ಮಾರ್ಗದರ್ಶನದಲ್ಲಿ ಮಠವು ಅಭಿವೃದ್ಧಿ ಹೊಂದಿರುವುದು ಭಕ್ತ ವೃಂದದ ಸಂತಸಕ್ಕೆ ಕಾರಣವಾಗಿದೆ ಎಂದರು.
ಮಾಜಿ ಶಾಸಕ ಕೆ.ಪ್ರಭಾಕರ ಬಂಗೇರ ಹಾಗೂ ಮಾಂಕಾಳ್ ವೈದ್ಯ ಭಟ್ಕಳ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಗುರುದೇವ ಮಠದ ಟ್ರಸ್ಟಿಗಳಾದ ಚಿತ್ತರಂಜನ್ ಗರೋಡಿ, ತುಕಾರಾಮ ಸಾಲಿಯಾನ್, ಮಂಗಳೂರು ಮ.ನಾ.ಪ.ಸದಸ್ಯ ಕಿರಣ್ ಕುಮಾರ್ ಕೋಡಿಕಲ್, ಜಿ.ಪಂ.ಮಾಜಿ ಸದಸ್ಯ ತುಂಗಪ್ಪ ಬಂಗೇರ, ಚಾತುರ್ಮಾಸ್ಯ ಸಮಿತಿ ಪ್ರಧಾನ ಸಂಚಾಲಕ ಜಯಂತ ಕೋಟ್ಯಾನ್, ಭಟ್ಕಳ ವೆಂಕಟರಮಣ ದೇವಸ್ಥಾನ ಅಧ್ಯಕ್ಷ ಕೃಷ್ಣ ನಾಯ್ಕ್, ಶಿರಾಲಿ ಹನುಮಾನ್ ದೇವಸ್ಥಾನ ಅಧ್ಯಕ್ಷ ಕೃಷ್ಣ, ಶ್ರೀ ರಾಮ ಕ್ಷೇತ್ರ ಸಮಿತಿಯ ವಿವಿಧ ಜಿಲ್ಲೆಗಳ ಅಧ್ಯಕ್ಷರಾದ ಶ್ರೀಧರ್ ನಾಯ್ಕ್, ವಾಮನ ನಾಯ್ಕ್, ಗೋವಿಂದ ನಾಯ್ಕ್, ಆರ್.ಜಿ. ನಾಯ್ಕ್, ಈಶ್ವರ ನಾಯ್ಕ್, ಉದ್ಯಮಿ ಪಾರ್ವತಿ ರಂಗಾರೆಡ್ಡಿ, ಬೆಂಗಳೂರು ಆರ್ಯ-ಈಡಿಗ ಅಟೋ ಚಾಲಕ ಸಂಘದ ಅಧ್ಯಕ್ಷ ಗಂಗಾಧರ್, ಕಲ್ಮಂಜ ದೇವಸ್ಥಾನದ ಅರ್ಚಕ ರವಿ ಭಟ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿಹಿಂಪ ಪುತ್ತೂರು ಜಿಲ್ಲಾ ಕಾರ್ಯಾಧ್ಯಕ್ಷ ಭಾಸ್ಕರ್ ಧರ್ಮಸ್ಥಳ, ಚಾತುರ್ಮಾಸ ಸಮಿತಿಯ ಪದಾಧಿಕಾರಿಗಳಾದ ಪ್ರಶಾಂತ್ ಪಾರೆಂಕಿ, ರತ್ನಾಕರ ಬುಣ್ಣನ್, ಅನಿಲ್ ಕುಮಾರ್, ರವಿ ಬರಮೇಲು, ಕೃಷ್ಣಪ್ಪ ಗುಡಿಗಾರ್, ಸಂತೋಷ್ ಕುಮಾರ್ ಕಾಪಿನಡ್ಕ, ರಾಜೇಶ್ ಮೂಡುಕೋಡಿ, ಸುಂದರ ಹೆಗ್ಡೆ ವೇಣೂರು, ಶಶಿಧರ್ ಕಲ್ಮಂಜ, ರಾಘವ ಕಲ್ಮಂಜ, ಮಂಜುನಾಥ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಕುದ್ರೋಳಿ ನಾರಾಯಣಗುರು ಕಾಲೇಜಿನ ಉಪನ್ಯಾಸಕ ಕೇಶವ ಬಂಗೇರ ಪ್ರಾಸ್ತಾವಿಸಿ ಮಾತನಾಡಿದರು. ಸಮಿತಿಯ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಮತ್ತು ಸೀತಾರಾಮ ಬೆಳಾಲು ಕಾರ್ಯಕ್ರಮ ನಿರ್ವಹಿಸಿದರು.