ಕೆಸರುಮಯವಾದ ರಸ್ತೆ ➽ ಕಣ್ಣು ಮುಚ್ಚಿ ಕುಳಿತ ಪಂಚಾಯತ್ ➽ ಸಾರ್ವಜನಿಕರಿಂದ ಶ್ರಮದಾನ

ಶೇರ್ ಮಾಡಿ

ನೇಸರ ಜು.14: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಬೀಕರ ಮಳೆಯಿಂದಾಗಿ ಪಟ್ರಮೆ ಗ್ರಾಮದಲ್ಲೂ ಬಹುತೇಕ ಒಳ ರಸ್ತೆಗಳ ಸ್ಥಿತಿ ಶೋಚನೀಯವಾಗಿದೆ. ರಸ್ತೆಗಳು ಅಲ್ಲಲ್ಲಿ ಕೆಸರುಮಯವಾಗಿ ವಾಹನಗಳ ಸಂಚಾರ ಕಷ್ಟವಾಗಿ ಜನರು ಒದ್ದಾಟ ಪಡುವಂತಾಗಿದೆ.

ಗ್ರಾಮದ ಶಾಂತಿಕಾಯ ಓಟೆಕಜೆ ಪ.ಪಂಗಡ ಕಾಲೊನಿ ರಸ್ತೆಯೂ ಅಪ್ರೋಡಿ, ಕಲ್ಲರಿಗೆ ಮೊದಲಾದ ಕಡೆಗಳಲ್ಲಿ ನೀರಿನ ವಸರು ರಸ್ತೆಯಲ್ಲೇ ಎದ್ದು ವಾಹನ ಸಂಚಾರಕ್ಕೆ ಕಷ್ಟವಾಗಿತ್ತು. ಈ ರಸ್ತೆಯ ಕಲ್ಲರಿಗೆ ಆಸುಪಾಸಿನ ಸುಮಾರು 15 ಜನ ಇಂದು ಒಟ್ಟಾಗಿ ಶ್ರಮದಾನದ ಮೂಲಕ ಕೆಸರಾದ ಸ್ಥಳಗಳಿಗೆ ಕಲ್ಲುಗಳನ್ನು ಹಾಸಿ, ಅದರ ಮೇಲೆ ಚರಳು ಹಾಕಿ ಸಂಚಾರಯೋಗ್ಯಗೊಳಿಸಿದರು. ರಸ್ತೆ ಹಾಳಾದ ತಕ್ಷಣ ಪಂಚಾಯತ್ ಸರಿಮಾಡಿಸಲಿ ಅಂತ ಕಾಯುತ್ತಾ ಕೂರದೆ ತಾವೇ ಶ್ರಮವಹಿಸಿ ದುರಸ್ತಿ ಮಾಡಿರುವುದು ಶ್ಲಾಘನೀಯವಾಗಿದೆ.

ಶ್ರಮದಾನಿಗಳನ್ನು ಈ ಬಗ್ಗೆ ಸಂಪರ್ಕಿಸಿದಾಗ:
ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆಗಳ ಚರಂಡಿಯ ನಿರ್ವಹಣೆ ಸರಿಯಾಗಿಲ್ಲದಿರುವುದೂ ರಸ್ತೆಗಳ ಈ ದುಸ್ಥಿತಿಗೆ ಕಾರಣವಾಗಿದೆ. ಮಳೆಗಾಲ ಪ್ರಾರಂಭದಲ್ಲಿಯೇ ಸ್ಥಳೀಯ ಪಂಚಾಯತುಗಳು ತಮ್ಮ ರಸ್ತೆಗಳ ಚರಂಡಿ ಸುಸ್ಥಿತಿಗೆ ಅಗತ್ಯ ಕ್ರಮ ಕೈಗೊಳ್ಳುವಂತಾದರೆ ಬಹುತೇಕ ಸಮಸ್ಯೆ ಬಗೆಹರಿಯುತ್ತದೆ. ಆದರೆ ಇದಕ್ಕೆ ಅನುದಾನಗಳ ಕೊರತೆ ಒಂದೆಡೆಯಾದರೆ, ಮತ್ತೊಂದೆಡೆ ಅನುದಾನ ಇದ್ದರೂ ಈ ರೀತಿಯ ಕಾಮಗಾರಿಗಳಿಗೆ ಹಣ ವಿನಿಯೋಗಿಸಲು ಕಾನೂನಾತ್ಮಕ ಅಡಚಣೆ ಇರುವುದು ಇನ್ನೊಂದು ಸಮಸ್ಯೆ. ಬಹಳ ಮುಖ್ಯವಾಗಿ ಪಂಚಾಯತು ಇಂತಹ ನಿರಂತರ ಸಮಸ್ಯೆಗಳನ್ನು ಬಗೆಹರಿಸುವ ಇಚ್ಚಾಶಕ್ತಿ ಹೊಂದಿರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಶ್ರಮದಾನದಲ್ಲಿ ಪುರುಷದಾಸ್, ಬಾಸ್ಕರ ದಾಸ್, ಶಮೀರ್, ಹುಸೇನ್, ಶಿಬಿ, ಹರೀಶ್, ತಿಮ್ಮಪ್ಪ,nನೋಣಯ ಯಂ ಕೆ, ಶ್ಯಾಮರಾಜ್, ಮಹಿಳೆಯರಾದ ಲಲಿತ ನಾಯ್ಕ್ , ರೇವತಿ, ಶಶಿಕಲಾ, ಸುನಂದ ಮತ್ತು ನೀಲಮ್ಮ ಭಾಗವಹಿಸಿದ್ದರು. ಆರೀಶ್ ಕಜೆ ತಮ್ಮ ಪಿಕಪ್ ನಲ್ಲಿ ಉಚಿತವಾಗಿ ಚರಳು ಸಾಗಿಸಿಕೊಟ್ಟರು.
ನೀರಿನ ವಸರು ರಸ್ತೆಯಲ್ಲಿ ಏಳುತ್ತಿರುವುದರಿಂದ, ಇದೀಗ ತತ್ಕಾಲಕ್ಕೆ ಸಂಚಾರಯೋಗ್ಯವೆನಿಸಿದರೂ ರಸ್ತೆಯ ಇಕ್ಕೆಲಗಳ ಚರಂಡಿ ಸರಿಪಡಿಸದಿದ್ದರೆ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲು ಸಾಧ್ಯವಿಲ್ಲ. ಮಳೆ ನೀರು ಕೂಡಾ ರಸ್ತೆಯಲ್ಲೇ ಹರಿಯುತ್ತಿರುವುದಾಗಿದೆ. ಆದ್ದರಿಂದ ಪಂಚಾಯತ್ ಆಡಳಿತ ಈ ನಿಟ್ಟಿನಲ್ಲಿ ಗಮನಹರಿಸಬೇಕಿರುವುದು ಆವಶ್ಯವಾಗಿದೆ.

Leave a Reply

error: Content is protected !!