ಭಾರೀ ಮಳೆ ರಸ್ತೆಗೆ ಉರುಳಿ ಬಿದ್ದ ಬೃಹತ್ ಗಾತ್ರದ ಮರ ➤ಟ್ರಾನ್ಸ್ ಫಾರ್ಮರ್ ಸಹಿತ 7 ಕಂಬಗಳಿಗೆ ಹಾನಿ ➤ ತಕ್ಷಣ ಸ್ಪಂದಿಸಿ ಮರ ತೆರವು ಗೊಳಿಸಿದ ಲಾಯಿಲ ಗ್ರಾಮ ಪಂಚಾಯತ್

ಶೇರ್ ಮಾಡಿ

ನೇಸರ ಜು.14: ಬೆಳ್ತಂಗಡಿ ತಾಲೂಕಿನಾದ್ಯಂತ ಭಾರೀ ಮಳೆಯಾಗುತಿದ್ದು ಲಾಯಿಲ ಹಾಗೂ ನಡ ಗ್ರಾಮದ ಗಡಿ ಪ್ರದೇಶದ ಅಗಳಿ ಎಂಬಲ್ಲಿ ಬೃಹತ್ ಗಾತ್ರದ ಮರವೊಂದು ಬಿದ್ದ ಪರಿಣಾಮ ರಸ್ತೆ ತಡೆಯಾಗಿದ್ದಲ್ಲದೇ ಟ್ರಾನ್ಸ್ ಫಾರ್ಮರ್ ಸಹಿತ ಸುಮಾರು 7 ಕ್ಕಿಂತಲೂ ಅಧಿಕ ವಿದ್ಯುತ್ ಕಂಬಗಳಿಗೆ ಹಾನಿ ಸಂಭವಿಸಿದೆ.

ಈ ಬಗ್ಗೆ ಮಾಹಿತಿ ಪಡೆದ ಗ್ರಾಮ ಪಂಚಾಯತ್ ಅಧ್ಯಕ್ಷೆ ಆಶಾ ಸಲ್ದಾನ, ಉಪಾಧ್ಯಕ್ಷ ಗಣೇಶ್ ಆರ್. ಸದಸ್ಯರಾದ ಪ್ರಸಾದ್ ಶೆಟ್ಟಿ ಎಣಿಂಜೆ, ಜಯಂತಿ ಅನ್ನಡ್ಕ ಸ್ಥಳಕ್ಕೆ ಭೇಟಿ ನೀಡಿದರು. ಅರಣ್ಯ ಇಲಾಖೆಯ ಸಿಬ್ಬಂದಿಗಳು ಆಗಮಿಸಿ ದೊಡ್ಡ ಗಾತ್ರದ ಮರವಾದ್ದರಿಂದ ಯಂತ್ರದ ಮೂಲಕ ತೆರವುಗೊಳಿಸುವ ಬಗ್ಗೆ ತಿಳಿಸಿದ್ದು, ತಕ್ಷಣ ಸ್ಪಂದಿಸಿದ ಲಾಯಿಲ ಗ್ರಾಮ ಪಂಚಾಯತ್ ತೆರವಿಗೆ ಕ್ರಮ ಕೈಗೊಂಡು ಜೆಸಿಬಿಯ ಮೂಲಕ ಮರವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದರು.
ಮರ ತೆರವು ಸಂದರ್ಭ ಅರಣ್ಯ ಇಲಾಖೆಯ ಸಿಬ್ಬಂದಿಗಳು, ಉಪಾಧ್ಯಕ್ಷ ಗಣೇಶ್ ಆರ್. ಸದಸ್ಯ ಪ್ರಸಾದ್ ಶೆಟ್ಟಿ ಎಣಿಂಜೆ ಸ್ಥಳದಲ್ಲಿದ್ದರು. ಮೆಸ್ಕಾಂ ಇಲಾಖೆಯ ಸಿಬ್ಬಂದಿಗಳು ಪರಿಶೀಲಿಸಿ ಹಾನಿಗೊಳಗಾದ ವಿದ್ಯುತ್ ಕಂಬಗಳ ದುರಸ್ತಿಗೆ ಕ್ರಮ ಕೈಗೊಂಡಿದ್ದಾರೆ. ಭಾರೀ ಮಳೆ ಬರುತಿದ್ದರೂ ತಕ್ಷಣ ಸ್ಪಂದಿಸಿ ಮರ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟ ಗ್ರಾಮ ಪಂಚಾಯಿತಿ ಲಾಯಿಲ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave a Reply

error: Content is protected !!