ಉಜಿರೆ ಎಸ್‌.ಡಿ.ಎಂ.ಪಾಲಿಟೆಕ್ನಿಕ್ ಕಾಲೇಜು ಯಂತ್ರೋಪಕರಣಗಳ ಪ್ರದರ್ಶನ

ಶೇರ್ ಮಾಡಿ

ಹೊಸತನದ ಅನ್ವೇಷಣೆಗಳು ಅಗತ್ಯ – ತಹಸೀಲ್ದಾರ್ ಪೃಥ್ವಿ ಸಾನಿಕಮ್

ಸಾಧಕರ ಮಾರ್ಗದರ್ಶನ ಹೆಚ್ಚಿನ ಪ್ರೇರೇಪಣೆ ನೀಡುತ್ತದೆ – ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್

ನೇಸರ ಜು.19: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಏಕಾಗ್ರತೆಯ ಸಾಧನೆಗಳು ಮೂಡಬೇಕು. ಸಾರ್ವಜನಿಕ ಅಗತ್ಯತೆ ಅರಿತು ನಾಗರಿಕರಿಗೆ ಪ್ರಯೋಜನ ನೀಡುವ ಹೊಸತನದ ಅನ್ವೇಷಣೆಗಳು ಮೂಡಿಬರಲಿ ಎಂದು ಬೆಳ್ತಂಗಡಿ ತಹಸೀಲ್ದಾರ್ ಪೃಥ್ವಿ ಸಾನಿಕಮ್ ಹೇಳಿದರು.
ಅವರು ಮಂಗಳವಾರ ಉಜಿರೆ ಎಸ್.ಡಿ.ಎಂ. ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಯಂತ್ರೋಪಕರಣಗಳ ಪ್ರದರ್ಶನ ಕಾರ್ಯಕ್ರಮ ‘ಯಂತ್ರ 2ಕೆ22’ ವನ್ನು ಉದ್ಘಾಟಿಸಿ ಮಾತನಾಡಿದರು.

ನಮ್ಮ ಮೇಲೆ ನಮಗೆ ವಿಶ್ವಾಸ ಮುಖ್ಯ, ಬದುಕು ಇರುವವರೆಗೂ ಭವಿಷ್ಯವಿದೆ. ವರ್ತಮಾನದಲ್ಲಿ ಮಾಡುವ ಕೆಲಸಗಳು ಭವಿಷ್ಯದ ಅಡಿಪಾಯ, ಸೋಲು ಗೆಲುವು ಬದುಕಲ್ಲಿ ಸಹಜ ಈ ಬಗ್ಗೆ ಯೋಚಿಸದೆ ಮುಂದುವರಿಯಬೇಕು ಎಂದರು.

ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್. ಮಾತನಾಡಿ ಬಾಹ್ಯ ಸಂಪರ್ಕವಿಲ್ಲದ ಯಾವುದೇ ಸಾಧನೆಗಳು ಭವಿಷ್ಯ ರೂಪಿಸುವುದಿಲ್ಲ. ಸಾಧಕರ ಮಾರ್ಗದರ್ಶನ ಹೆಚ್ಚಿನ ಪ್ರೇರೇಪಣೆಯನ್ನು ನೀಡುತ್ತದೆ. ರಚನಾತ್ಮಕ ಚಿಂತನೆಗಳು ಸಮಾಜಕ್ಕೆ ಬಳಕೆಯಾದರೆ ಕಾರ್ಯ ಸಾಧನೆಯ ತೃಪ್ತಿ ದೊರೆಯುತ್ತದೆ ಎಂದರು.

ಪ್ರಿನ್ಸಿಪಾಲ್ ಅಶೋಕ್ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಧ.ಮಂ.ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿ ಸೋಮಶೇಖರ ಶೆಟ್ಟಿ, ವಿಜೇತ್ ಜೈನ್, ಪ್ರಾಧ್ಯಾಪಕರಾದ ಗಿರೀಶ್ ಕುಮಾರ್, ಶಿವಕುಮಾರ್, ಮಿಥುನ್ ಕುಮಾರ್, ಕಚೇರಿ ಪ್ರಬಂಧಕ ಚಂದ್ರನಾಥ ಜೈನ್ ಇತರರು ಉಪಸ್ಥಿತರಿದ್ದರು.
ಪ್ರಾಧ್ಯಾಪಕ ಧನರಾಜ್ ಸ್ವಾಗತಿಸಿದರು. ಶಿವಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ವಿಭಾಗ ಮುಖ್ಯಸ್ಥ ಶ್ರೇಯಾಂಕ್ ವಂದಿಸಿದರು.

ಕಾಲೇಜಿನ ಆವರಣದಲ್ಲಿ ಸುಮಾರು 40 ಯಂತ್ರ ಮಾದರಿಗಳ ಪ್ರದರ್ಶನ ನಡೆಯಿತು. ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆ, ವಾಹನ ಪ್ರದರ್ಶನ ಮತ್ತಿತರ ಕಾರ್ಯಕ್ರಮಗಳು ಜರಗಿದವು.

Leave a Reply

error: Content is protected !!