ನೆಲ್ಯಾಡಿಯ ನಾಡೋಳಿ ಡಯಾಗ್ನಿಸ್ಟಿಕ್ ಸೆಂಟರ್ ನಲ್ಲಿ ಉಚಿತ ಮಧುಮೇಹ, ರಕ್ತದೊತ್ತಡ ಹಾಗೂ ಹಿಮೋಗ್ಲೋಬಿನ್ ತಪಾಸಣೆ

ಶೇರ್ ಮಾಡಿ

ನೇಸರ ಜು.19: ಕಡಬದಲ್ಲಿ ಹಲವು ವರ್ಷಗಳಿಂದ ಕಾರ್ಯಚರಿಸುತ್ತಿದ್ದ ಅತ್ಯುತ್ತಮ ಡಯಾಗ್ನಿಸ್ಟಿಕ್ ಸೆಂಟರ್ ಎಂದು ಹೆಸರು ಪಡೆದ ನಾಡೋಳಿ ಡಯಾಗ್ನಿಸ್ಟಿಕ್ ಸೆಂಟರ್, ನೆಲ್ಯಾಡಿಯ ಅವನಿ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಶಾಖೆಯನ್ನು ಆರಂಭಿಸಿದ್ದು.
ನೆಲ್ಯಾಡಿ ಸೀನಿಯರ್ ಚೇಂಬರ್, ಜೆಸಿಐ ನೆಲ್ಯಾಡಿ ಇವರ ಸಹಭಾಗಿತ್ವದಲ್ಲಿ ಸಾರ್ವಜನಿಕರಿಗಾಗಿ ಜುಲೈ 19 ರಿಂದ 21ರವರೆಗೆ ಉಚಿತ ಮಧುಮೇಹ, ರಕ್ತದೊತ್ತಡ ಹಾಗೂ ಹಿಮೊಗ್ಲೋಬಿನ್ ತಪಾಸಣೆ ಶಿಬಿರವನ್ನು ನಾಡೋಳಿ ರಕ್ತ ತಪಾಸಣಾ ಕೇಂದ್ರ ಅವನಿ ಕಾಂಪ್ಲೆಕ್ಸ್ ನೆಲ್ಲಾಡಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಜುಲೈ 19ರ ಬೆಳಗ್ಗೆ ಕಾರ್ಯಕ್ರಮದ ಉದ್ಘಾಟನೆಯನ್ನು ದೀಪ ಬೆಳಗಿಸುವ ಮೂಲಕ ಶ್ರೀ ಸಿದ್ಧಿ ವಿನಾಯಕ ಹೋಮಿಯೋ ಕ್ಲಿನಿಕ್ಕಿನ ಡಾ.ಪ್ರಸಾದ್ ನೆರವೇರಿಸಿ ಕಾರ್ಯಕ್ರಮದ ಯಶಸ್ವಿಗೆ ಶುಭ ಕೋರಿದರು.


ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನೆಲ್ಯಾಡಿ ಸೀನಿಯರ್ ಚೇಂಬರ್ ಅಧ್ಯಕ್ಷ ವೆಂಕಟ್ರಮಣ ಆರ್ ಮತ್ತು ಜೂನಿಯರ್ ಚೇಂಬರ್ ಅದ್ಯಕ್ಷೆ
ಜಯಂತಿ ಬಿ.ಎಂ ಶುಭ ಹಾರೈಸಿದರು. ಸಂಸ್ಥೆಯ ಮಾಲಕ ಕಾಶೀನಾಥ್ ಗೋಗಟೆ ಆರಂಭದಲ್ಲಿ ಎಲ್ಲರಿಗೂ ಸ್ವಾಗತಿಸಿ, ಕೊನೆಗೆ ವಂದನಾರ್ಪಣೆಗೈದರು

ನೆಲ್ಯಾಡಿಯ ಅವನೀ ಕಾಂಪ್ಲೆಕ್ಸ್ ನ ನಾಡೋಳಿ ಡಯಾಗ್ನಿಸ್ಟಿಕ್ ಸೆಂಟರ್ ನಲ್ಲಿ ಉಚಿತ ಮಧುಮೇಹ, ರಕ್ತದೊತ್ತಡ ಹಾಗೂ ಹಿಮೋಗ್ಲೋಬಿನ್ ತಪಾಸಣೆ ಜುಲೈ 19 ರಿಂದ 21ರವರೆಗೆ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಇದರ ಸದ್ದುಪಯೋಗ ಪಡೆದುಕೊಳ್ಳುವಂತೆ ಸಂಸ್ಥೆಯ ಮಾಲಕ ಕಾಶೀನಾಥ್ ಗೋಗಟೆ ತಿಳಿಸಿದರು.

Leave a Reply

error: Content is protected !!