ಸರಸ್ವತಿ ವಿದ್ಯಾಲಯ ವಿದ್ಯಾನಗರ ಕಡಬದಲ್ಲಿ ➤ “ವೈಜ್ಞಾನಿಕ ಪ್ರಾಜೆಕ್ಟ್ : ಒಂದು ಒಳನೋಟ, ವಿಜ್ಞಾನದೆಡೆಗೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು” ಕಾರ್ಯಾಗಾರ

ಶೇರ್ ಮಾಡಿ

ನೇಸರ ಜು.20: ಜೆಸಿಐ ಕಡಬ ಕದಂಬ, ಸರಸ್ವತಿ ವಿದ್ಯಾಲಯ ವಿದ್ಯಾನಗರ ಕಡಬ, ಸಾರ್ವಜನಿಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪುತ್ತೂರು, ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯ ಮೂಡಬಿದಿರೆ ಇವರ ಸಹಯೋಗದೊಂದಿಗೆ “ವೈಜ್ಞಾನಿಕ ಪ್ರಾಜೆಕ್ಟ್ : ಒಂದು ಒಳನೋಟ ವಿಜ್ಞಾನದೆಡೆಗೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು” ಕಾರ್ಯಾಗಾರ ದಿನಾಂಕ 23.07.2022ನೇ ಶನಿವಾರ ಅಪರಾಹ್ನ ಒಂದು ಗಂಟೆಯಿಂದ ಸರಸ್ವತಿ ವಿದ್ಯಾಲಯ ವಿದ್ಯಾನಗರ ಕಡಬದಲ್ಲಿ ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು JFM.ಕಾಶಿನಾಥ್ ಗೋಗಟೆ, ಅಧ್ಯಕ್ಷರು ಜೆಸಿಐ ಕಡಬ ಕದಂಬ, ಕಾರ್ಯಕ್ರಮದ ಉದ್ಘಾಟಕರಾಗಿ ಸತೀಶ್ ಬಿಳಿನೆಲೆ, ಮುಖ್ಯ ಶಿಕ್ಷಕರು ಶ್ರೀ ರಾಮಕುಂಜೇಶ್ವರ ಪ್ರೌಢಶಾಲೆ ರಾಮಕುಂಜ, ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಅಜಿತ್ ಹೆಬ್ಬಾರ್, ಪ್ರೊಫೆಸರ್, ವಿಭಾಗ ಮುಖ್ಯಸ್ಥರು ಸಿವಿಲ್ ಇಂಜಿನಿಯರಿಂಗ್ ವಿಭಾಗ ಮತ್ತು ಅಂತರಾಷ್ಟ್ರೀಯ ಮಟ್ಟದ ವಿಜ್ಞಾನ ಪ್ರಾಜೆಕ್ಟ್ ಗಳ ತರಬೇತುದಾರರು, ಮುಖ್ಯ ಅತಿಥಿಗಳಾಗಿ ಲೋಕೇಶ್ ಸಿ, ಕ್ಷೇತ್ರ ಶಿಕ್ಷಣಾಧಿಕಾರಿ ಶಿಕ್ಷಣ ಇಲಾಖೆ ಪುತ್ತೂರು, ರವಿರಾಜ್ ಶೆಟ್ಟಿ ಅಧ್ಯಕ್ಷರು, ಸರಸ್ವತಿ ವಿದ್ಯಾಲಯ ವಿದ್ಯಾನಗರ, ವೆಂಕಟರಮಣ ರಾವ್ ಮಂಕುಡೆ, ಸಂಚಾಲಕರು ಸರಸ್ವತಿ ವಿದ್ಯಾಲಯ ವಿದ್ಯಾನಗರ, JFM.ನಾಗರಾಜ್ ಎನ್ ಕೆ, ಅಧ್ಯಕ್ಷರು ಜೆಸಿಐ ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್ (ರಿ.), ಕುಮಾರ್ ಕೆ ಜೆ, ಸಮೂಹ ಸಂಪನ್ಮೂಲ ವ್ಯಕ್ತಿ ಕಡಬ ವಲಯ. ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಜೆಸಿಐ ಕಡಬ ಕದಂಬದ ಅಧ್ಯಕ್ಷರಾದ JFM. ಕಾಶೀನಾಥ್ ಗೋಗಟೆ ತಿಳಿಸಿದರು.

Leave a Reply

error: Content is protected !!