ನೇಸರ ಜು.20: ಮಕ್ಕಳು ವಿದ್ಯಾರ್ಥಿ ದಿಸೆಯಲ್ಲಿ ಕಷ್ಟ ಪಟ್ಟು ಶಿಕ್ಷಣ ಪಡೆದರೆ ಭವಿಷ್ಯದಲ್ಲಿ ಶ್ರೇಷ್ಟ ವ್ಯಕ್ತಿಗಳಾಗಲು ಸಾದ್ಯ, ಅದಕ್ಕಾಗಿ ರತ್ನಮಾನ ವಿದ್ಯಾಕೇಂದ್ರ ಪ್ರಾರಂಭಿಸಿದ್ದು ಇಲ್ಲಿ ಕಲಿತ ವಿದ್ಯಾರ್ಥಿಗಳು ಅತ್ಯುನ್ನತ ಹುದ್ದೆಯಲ್ಲಿದ್ದಾರೆ. ನೀವು ಇಲ್ಲಿನ ಶಿಕ್ಷಣ ವ್ಯವಸ್ಥೆಯನ್ನು ಸವಾಲಾಗಿ ಸ್ವೀಕರಿಸಿ ಸಾಧನೆ ಮಾಡಬೇಕು ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾದಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಮಂಗಳವಾರ ಉಜಿರೆ ರತ್ನಮಾನ ಕ್ಕೆ ಬೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿ ಹೊಸದಾಗಿ ಬಂದೆವು ಎನ್ನುವುದಕ್ಕಿಂತ ಹೊಸತನ ಅರಿತುಕೊಳ್ಳಲು ಅವಕಾಶ ಸಿಕ್ಕಿದೆ ಎಂದು ಅರಿತು ಕಲಿಯಬೇಕು ಆಗ ಸಾಧನೆಗೆ ಯಶಸ್ಸು ಸಿಗುತ್ತದೆ ಎಂದರು. ಈ ಸಂದರ್ಭದಲ್ಲಿ ಮಹಾವೀರ ಅಜ್ರಿ, ಡಾ ಹರೀಶ್, ರತ್ನಮಾನಸ ಮೇಲ್ವಿಚಾರಕರಾದ ಯತೀಶ್, ರವಿಚಂದ್ರ, ಉದಯರಾವ್ ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.