ಉಜಿರೆ: ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ ಮಹಾಸಭೆ

ಶೇರ್ ಮಾಡಿ

ನೇಸರ ಜು.25: ನಾವು ನಮ್ಮ ಕಟ್ಟುಪಾಡುಗಳನ್ನು ಮರೆತು ಆಧುನಿಕತೆಗೆ ಬದಲಾಗುತ್ತಿದ್ದೇವೆ. ನಮ್ಮ ಮುಂದಿನ ಪೀಳಿಗೆಗೆ ಪದ್ಧತಿ, ಸಂಸ್ಕೃತಿ, ಆಚಾರ, ವಿಚಾರ ರೀತಿ ರಿವಾಜುಗಳನ್ನು ತಿಳಿಸುವುದು ಅಗತ್ಯವಾಗಿದೆ. ಸಮಯ ಪ್ರಜ್ಞೆಯನ್ನು ಜೀವನದಲ್ಲಿ ರೂಢಿಸಿಕೊಂಡು ಮುನ್ನಡೆಯ ಬೇಕು ಎಂದು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ತಾಲೂಕು ಅಧ್ಯಕ್ಷ ಪೂವಾಜೆ ಕುಶಾಲಪ್ಪ ಗೌಡ ಹೇಳಿದರು.
ಅವರು ಉಜಿರೆಯ ಶಾರದಾ ಮಂಟಪದಲ್ಲಿ ಜರಗಿದ ಉಜಿರೆ ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ ಇದರ ಗ್ರಾಮ ಸಮಿತಿಯ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ತಾಲೂಕು ಸಂಘದ ಗೌರವಾಧ್ಯಕ್ಷ ಪದ್ಮ ಗೌಡ ಎಚ್. ಶುಭಹಾರೈಸಿದರು. ಉಜಿರೆ ಗ್ರಾಮ ಸಮಿತಿ ಅಧ್ಯಕ್ಷ ಪ್ರಕಾಶ ಗೌಡ ಅಧ್ಯಕ್ಷತೆ ವಹಿಸಿದ್ದರು.
ಉಪಾಧ್ಯಕ್ಷ ದೇವಪ್ಪಗೌಡ, ಯುವ ವೇದಿಕೆಯ ಅಧ್ಯಕ್ಷ ಯಶವಂತ ಗೌಡ, ಮಹಿಳಾ ವೇದಿಕೆಯ ಅಧ್ಯಕ್ಷೆ ಸುಭಾಷಿಣಿ ಗೌಡ, ಗ್ರಾಮ ಸಮಿತಿ ಉಸ್ತುವಾರಿ ಕೃಷ್ಣಪ್ಪಗೌಡ ದೇವಸ್ಯ, ಚೇತನಾ ಹರಿಶ್ಚಂದ್ರ ಗೌಡ, ಉಮೇಶಗೌಡ, ಶೈಲೇಶ್ ಧರಣಿ ಉಪಸ್ಥಿತರಿದ್ದರು.
ಶೇಖರಗೌಡ ಸ್ವಾಗತಿಸಿದರು. ರಮೇಶ್ ಪೈಲಾರ್ ಲೆಕ್ಕ ಪತ್ರ ಮಂಡಿಸಿದರು. ಧರಣಿ ದರ್ಣಪ್ಪ ಗೌಡ ವರದಿ ವಾಚಿಸಿದರು. ಉಪನ್ಯಾಸಕ ಆನಂದ ಗೌಡ, ಬಾಲಕೃಷ್ಣ ಕೊರಮೇರು ಮತ್ತು ಲಕ್ಷ್ಮಣಗೌಡ ಕಾರ್ಯಕ್ರಮ ನಿರೂಪಿಸಿದರು.

‘ಗೌರವ’ ಕೃತಿ ಬಿಡುಗಡೆ
ಜಿಲ್ಲಾ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಅಧ್ಯಕ್ಷ ಲೋಕಯ್ಯ ಗೌಡ ಅವರು ಉಜಿರೆ ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿಯವರು ಹೊರತಂದಿರುವ ಬಾಬಾ ಉಜಿರೆಯವರ ಕೃತಿ ‘ಗೌರವ’ ವನ್ನು ಬಿಡುಗಡೆಗೊಳಿಸಿದರು.
ಬಾಬಾ ಉಜಿರೆ, ಯೋಧ ಸೂರಪ್ಪ ಗೌಡ, ರುಕ್ಮಯ್ಯ ಗೌಡ, ಮೇಘ ಶಾಮ, ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಪ್ರತಿಮೆ ಅನಾವರಣ
1837ರ ಸಮಯ ಬ್ರಿಟಿಷರ ಆಳ್ವಿಕೆಯಲ್ಲಿ ರೈತರು ತೆರಿಗೆಯನ್ನು ಹಣದ ರೂಪದಲ್ಲಿ ನೀಡಬೇಕಿತ್ತು. ಈ ಪದ್ಧತಿಯ ವಿರುದ್ಧ ಸಿಡಿದೆದ್ದ ಕೆದಂಬಾಡಿ ರಾಮಯ್ಯ ಗೌಡರು ರೈತರನ್ನು ಒಗ್ಗೂಡಿಸಿ ಬ್ರಿಟಿಷರ ವಿರುದ್ಧ ಹೋರಾಡಿದವರು. ಈ ಸ್ವಾತಂತ್ರ್ಯ ಹೋರಾಟಗಾರನ ಸ್ಮರಣಾರ್ಥ ಈ ವರ್ಷ ಮಂಗಳೂರು ಬಾವುಟ ಗುಡ್ಡೆಯಲ್ಲಿ ಪ್ರತಿಮೆ ಅನಾವರಣಗೊಳಿಸುವ ಕುರಿತು ಸಭೆಯಲ್ಲಿ ಪ್ರಸ್ತಾಪಿಸಲಾಯಿತು.

Leave a Reply

error: Content is protected !!