ನೇಸರ ಜು.27: ಜೆಸಿಐ ಕಡಬ ಕದಂಬ, ಸರಸ್ವತಿ ವಿದ್ಯಾಲಯ, ವಿದ್ಯಾನಗರ ಕಡಬ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸಾಕ್ಷರತಾ ಇಲಾಖೆ, ಪುತ್ತೂರು ಹಾಗೂ ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯ ಮೂಡಬಿದ್ರೆ ಸಿವಿಲ್ ಇಂಜಿನಿಯರಿಂಗ್ ವಿಭಾಗ ಇದರ ಸಹಯೋಗಗಳೊಂದಿಗೆ ವಿಜ್ಞಾನ ಪ್ರಾಜೆಕ್ಟ್: ಒಂದು ಒಳನೋಟ, ವಿಜ್ಞಾನದ ಕಡೆಗೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಎಂಬ ವಿಷಯದ ಮೇಲೆ ಒಂದು ದಿನದ ಕಾರ್ಯಗಾರ ಸರಸ್ವತಿ ವಿದ್ಯಾಲಯ ವಿದ್ಯಾ ನಗರ ಕಡಬ ಇಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ರಾಮಕುಂಜೇಶ್ವರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಸತೀಶ್ ಬಿಳಿನೆಲೆಯವರು ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು ಶಿಕ್ಷಣ ಹಾಗೂ ಶಿಕ್ಷಕರು ಸಣ್ಣ ವಯಸ್ಸಿನಲ್ಲಿ ಮಕ್ಕಳಲ್ಲಿರುವ ವಿಜ್ಞಾನದ ಕೌತುಕವನ್ನು ತಿಳಿಸುವ ಕೆಲಸವನ್ನು ಮಾಡಬೇಕು ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಕಡೆಗೆ ಆಸಕ್ತಿ ಬರುವಂತೆ ಅವರಲ್ಲಿ ಸಂಶೋಧನೆ ಹಾಗೂ ಅಧ್ಯಯನ ಮಾಡುವಂತೆ ಪ್ರೇರೇಪಿಸಿದರೆ ವಿದ್ಯಾರ್ಥಿಗಳು ವಿಜ್ಞಾನದೆಡೆಗೆ ಸುಲಭವಾಗಿ ಆಸಕ್ತಿ ಹೊಂದುತ್ತಾರೆ. ಆದುದರಿಂದ ಇಂತಹ ಕಾರ್ಯಕ್ರಮಗಳು ಶಿಕ್ಷಕರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಆಸಕ್ತಿಯನ್ನು ಮೂಡಿಸುವಲ್ಲಿ ಸಹಕಾರಿಯಾಗಲಿವೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮವನ್ನು ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯ ಮೂಡಬಿದ್ರೆ ಸಿವಿಲ್ ಇಂಜಿನಿಯರಿಂಗ್ ವಿಭಾಗ ಇದರ ಮುಖ್ಯಸ್ಥರಾದ ಡಾ.ಅಜಿತ್ ಹೆಬ್ಬಾರ್ ಸಂಪನ್ಮೂಲ ವ್ಯಕ್ತಿಯಾಗಿ ನಡೆಸಿಕೊಟ್ಟರು. ವಿಜ್ಞಾನದ ಪ್ರಾಜೆಕ್ಟ್ ಗಳನ್ನು ಆಯ್ಕೆ ಮಾಡುವ ಬಗೆ ಹಾಗೂ ಅದನ್ನು ಪ್ರಸ್ತುತಪಡಿಸುವ ರೀತಿಯನ್ನು ಎಲ್ಲಾ ಶಿಕ್ಷಕರು ಅರ್ಥೈಸುವಂತೆ ಕಾರ್ಯಗಾರವನ್ನು ನಡೆಸಿಕೊಟ್ಟರು.
ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಜೆಸಿಐ ಕಡಬ ಕದಂಬ ಇದರ ಅಧ್ಯಕ್ಷರಾದ ಜೆಎಫ್ಎಂ ಕಾಶಿನಾಥ್ ಗೋಗಟೆ ಇವರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಕುಮಾರ್ ಎಸ್ಆರ್ ಸಮೂಹ ಸಂಪನ್ಮೂಲ ವ್ಯಕ್ತಿ, ಜೆಎಫ್ಎಂ ನಾಗರಾಜ ಎನ್ ಕೆ ಜೆಸಿಐ ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರು, ಶಿವಪ್ರಸಾದ್ ಮೈಲೇರಿ ಸರಸ್ವತಿ ವಿದ್ಯಾಲಯ ಕಡಬ ಇದರ ನಿರ್ದೇಶಕರು , ಮಾಧವ ಗೌಡ ಕೋಲ್ಪೆ ಮುಖ್ಯ ಶಿಕ್ಷಕರು ಶ್ರೀ ಸರಸ್ವತಿ ವಿದ್ಯಾಲಯ, ಜೂನಿಯರ್ ಜೆಸಿ ವಿಭಾಗದ ಅಧ್ಯಕ್ಷರಾದ ಜೀವಿತ್ ಉಪಸ್ಥಿತರಿದ್ದರು. ಜೆಸಿಐ ಕಡಬ ಕದಂಬ ಇದರ ಸದಸ್ಯರಾದ ಅಭಿಷೇಕ್ ಇವರು ವೇದಿಕೆಗೆ ಆಹ್ವಾನಿಸಿ ಜೆಎಫ್ಎಂ ನಾಗರಾಜ್ ಎನ್ ಕೆ ಇವರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನು ಆಡಿದರು ಜೆಎಫ್ಎಂ ರಾಮ್ ಪ್ರಕಾಶ್ ಸಂಪನ್ಮೂಲ ವ್ಯಕ್ತಿಯ ಪರಿಚಯ ನಡೆಸಿಕೊಟ್ಟರು. ಮಾಧವ ಗೌಡ ಕೋಲ್ಪೆ ಮುಖ್ಯ ಶಿಕ್ಷಕರು ವಂದಿಸಿದರು. ಕಡಬ ತಾಲೂಕಿನ ಸುಮಾರು ಹತ್ತಕ್ಕೂ ಹೆಚ್ಚಿನ ಪ್ರೌಢಶಾಲೆ ಹಾಗೂ ಕಾಲೇಜಿನ ವಿಜ್ಞಾನ ಉಪನ್ಯಾಸಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.