ನೇಸರ ಜು.29: ಅಕ್ರಮವಾಗಿ ಪಡಿತರ ಅಕ್ಕಿ ದಾಸ್ತಾನು ಮಾಡಿ ವಾಹನದಲ್ಲಿ ಸಾಗಿಸಲು ಯತ್ನಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಬೆಳ್ತಂಗಡಿ ತಹಶೀಲ್ದಾರ್ ಮತ್ತು ಆಹಾರ ನಿರೀಕ್ಷಕರು ಜಂಟಿಯಾಗಿ ಸಿಬಂದಿಗಳ ಜತೆ ದಾಳಿ ಮಾಡಿ ವಶಪಡಿಸಿಕೊಂಡ ಘಟನೆ ಪಣಕಜೆಯಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಸೋಣಂದೂರು ಗ್ರಾಮದ ಪಣಕಜೆ ಸಮೀಪ ಗೋಡೌನ್ ಮೇಲೆ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಮ್ ಮತ್ತು ಆಹಾರ ನಿರೀಕ್ಷಕ ವಿಶ್ವ.ಕೆ ಹಾಗೂ ಸಿಬಂದಿಗಳು ಇಂದು ಮಧ್ಯಾಹ್ನ ದಾಳಿ ಮಾಡಿದ್ದಾರೆ. ದಾಳಿ ವೇಳೆ ಗೋಡೌನ್ ನಲ್ಲಿ 14.5 ಕ್ವಿಂಟಾಲ್ ಪಡಿತರ ಅಕ್ಕಿ ಮತ್ತು ಅಶೋಕ್ ಲೆಲೈಂಡ್ ಗೂಡ್ಸ್ ವಾಹನದಲ್ಲಿ ತುಂಬಿಸಿಟ್ಟ 23 ಕ್ವಿಂಟಾಲ್ ಅಕ್ಕಿ, ತೂಕದ ಯಂತ್ರ ಪತ್ತೆಯಾಗಿದ್ದು ಅಧಿಕಾರಿಗಳು ವಶಪಡಿಸಿ ಕೊಂಡಿದ್ದಾರೆ. ಗೂಡ್ಸ್ ವಾಹನ ಚಾಲಕ ಹಾಗೂ ಮಾಲಕ ಹಾಸನ ಜಿಲ್ಲೆಯ ಲಕ್ಷ್ಮೀಪೂರ ನಿವಾಸಿ ನಂದೀಶ್ (24) ಬಂಧಿಸಲಾಗಿದೆ.
ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ಆಹಾರ ನಿರೀಕ್ಷಕ ವಿಶ್ವ.ಕೆ ದೂರು ನೀಡಿದ್ದಾರೆ.
ದಾಳಿಯಲ್ಲಿ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಮ್, ಆಹಾರ ನಿರೀಕ್ಷಕ ವಿಶ್ವ ಕೆ., ಕಂದಾಯ ನಿರೀಕ್ಷಕ ಪ್ರತೀಷ್, ಗ್ರಾಮಸಹಾಯಕ ಗುಣಾಕರ ಹೆಗ್ಡೆ, ಅಭಿಲಾಷ್ , ಚಾಲಕ ಸಂತೋಷ್ ಕುಮಾರ್, ಪುಂಜಾಲಕಟ್ಟೆ ಪಿಎಸ್ಐ ಮತ್ತು ಸಿಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.