ಯುವಕರು ಜೇಸಿ ಸಂಸ್ಥೆಗೆ ಸೇರುವುದರಿಂದ ದೇಶಕ್ಕೆ ಒಬ್ಬ ಉತ್ತಮ ಸಂಪನ್ಮೂಲ ವ್ಯಕ್ತಿಯಾಗಿ ರೂಪುಕೊಳ್ಳಲು ಸಾಧ್ಯ ➤ ಸೆನೆಟರ್ ರೋಯನ್ ಉದಯ ಕ್ರಾಸ್ತಾ

ಶೇರ್ ಮಾಡಿ

ನೇಸರ ಜು.29: ಯುವ ಪಡೆಯನ್ನು ಉತ್ತಮವಾದ ನಾಯಕರನ್ನಾಗಿ ರೂಪಿಸುವ ಕೆಲಸವನ್ನು ಜೆಸಿಐ ಸಂಸ್ಥೆಯಲ್ಲಿ ನಡೆಯುವ ತರಬೇತಿಯು ಸಹಕಾರಿಯಾಗಲಿದೆ. 18ರಿಂದ 40 ವರುಷದ ಒಳಗಿನ ಯುವಕರು ಅಂತರಾಷ್ಟ್ರೀಯ ಜೇಸಿ ಸಂಸ್ಥೆಗೆ ಸೇರುವುದರಿಂದ ದೇಶಕ್ಕೆ ಒಬ್ಬ ಉತ್ತಮ ಸಂಪನ್ಮೂಲ ವ್ಯಕ್ತಿಯಾಗಿ ರೂಪುಕೊಳ್ಳಲು ಸಾಧ್ಯ ಎಂದು ಜೆಸಿಐ ವಲಯ 15ರ ವಲಯ್ಯಾಧ್ಯಕ್ಷ ಸೆನೆಟರ್ ರೋಯನ್ ಉದಯ ಕ್ರಾಸ್ತಾ ಹೇಳಿದರು.
ಜೇಸಿಐ ಕೊಕ್ಕಡ ಕಪಿಲಾ ದ ವತಿಯಿಂದ ಸಂತ ಜಾನರ ಶಾಲಾ ಸಭಾಭವನದಲ್ಲಿ ನಡೆದ ವಲಯ್ಯಾಧ್ಯಕ್ಷರ ಅಧಿಕೃತ ಭೇಟಿ “ಹೆಜ್ಜೆ” ಕಾರ್ಯಕ್ರಮದ ಸಂದರ್ಭದಲ್ಲಿ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಜೇಸಿಐ ಕೊಕ್ಕಡ ಕಪಿಲ ಕ್ಕೆ ಹೊಸದಾಗಿ ಸೇರ್ಪಡೆಗೊಂಡ ನಾಲ್ಕು ಸದಸ್ಯರಿಗೆ ವಲಯ್ಯಾಧ್ಯಕ್ಷರು ಪ್ರಮಾಣವಚನವನ್ನು ಬೋಧಿಸಿ ಹೂ ನೀಡಿ ಸ್ವಾಗತಿಸಿದರು.

ಎಸ್ ಎಸ್ ಎಲ್ ಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ನಿಶ್ಚಿತಾ ಅರಸಿನಮಕ್ಕಿ ಹಾಗೂ ಕೃಷಿಯಲ್ಲಿ ಸಾಧನೆ ಮಾಡಿದ ರಘುಚಂದ್ರ ಪೂಜಾರಿ ಶಾಲೆತ್ತಡ್ಕ, ಜೇಸಿ ಶಶಿಧರ ನೆಕ್ಕಿಲಾಡಿ ಯವರನ್ನು ಸನ್ಮಾನಿಸಲಾಯಿತು.

ಜೇಸಿ ಪ್ರತಿಭಾ ಪುರಸ್ಕಾರ – 2022
ಕೊಕ್ಕಡ ಪರಿಸರದ ಆಯ್ದ ಬಡ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಜೇಸಿಐ ಕೊಕ್ಕಡ ಕಪಿಲ ದ ವತಿಯಿಂದ ಜೆಸಿಐ ವಲಯ 15ರ ವಲಯ್ಯಾಧ್ಯಕ್ಷ ಸೆನೆಟರ್ ರೋಯನ್ ಉದಯ ಕ್ರಾಸ್ತಾ ದಂಪತಿಗಳನ್ನು, ವಲಯ ಉಪಾಧ್ಯಕ್ಷ ರವಿಚಂದ್ರ ಪಾಟಾಳಿ, ವಲಯಾಧ್ಯಕ್ಷರ ಆಪ್ತ ಕಾರ್ಯದರ್ಶಿ ಮೋಹನ್ ನೆಕ್ರೆ ಇವರುಗಳನ್ನು ಗೌರವಿಸಿ ಸನ್ಮಾನಿಸ ಲಾಯಿತು.

ಐ ಐ ಸಿ ಟಿ ಸಂಗೀತ ಕಲಾ ಕೇಂದ್ರ ನೆಲ್ಯಾಡಿ ಇವರಿಂದ ಸರಿಗಮ ಸಂಗೀತ ಸಂಜೆ ಕಾರ್ಯಕ್ರಮ ನಡೆಯಿತು.

ಜೇಸಿಐ ಕೊಕ್ಕಡ ಕಪಿಲ ಅಧ್ಯಕ್ಷರಾದ ಜೇಸಿ.ಶ್ರೀಧರ್ ರಾವ್ ಕೆ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ವಲಯ ಅಧಿಕಾರಿ ಜೇಸಿ.ಪ್ರಶಾಂತ್ ಸಿ ಎಚ್, ನಿಕಟಪೂರ್ವ ಅಧ್ಯಕ್ಷ ಜೇಸಿ.ಗಣೇಶ್ ಕೆ., ಯೋಜನಾ ನಿರ್ದೇಶಕ JFP. ಜಸ್ವಂತ್ ಪಿರೇರಾ, ಕಾರ್ಯದರ್ಶಿ ಜೇಸಿ.ನರಸಿಂಹ ನಾಯಕ್.ಯು ಉಪಸ್ಥಿತರಿದ್ದರು.
ಜೇಸಿ.ಎಚ್‍ಜಿಎಫ್.ಜೋಸೆಫ್ ಪಿರೇರಾ ಪ್ರಾಸ್ತಾವಿಕ ಮಾತುಗಳೊಂದಿಗೆ ಗಣ್ಯರನ್ನು ವೇದಿಕೆಗೆ ಆಹ್ವಾನಿಸಿದರು, ಜೇಸಿ.ಶ್ರೀಧರ್ ರಾವ್ ಕೆ., ಸ್ವಾಗತಿಸಿದರು. ಜೇಸಿ.ನರಸಿಂಹ ನಾಯಕ್.ಯು ವಂದಿಸಿದರು.

Leave a Reply

error: Content is protected !!