ನೇಸರ ಜು.31: ನಮ್ಮ ಪೂರ್ವಜರ ಹಲವು ಆಚಾರ ವಿಚಾರಗಳು ಉತ್ತಮ ಆರೋಗ್ಯಕ್ಕೆ ಮೂಲವಾಗಿವೆ. ಆಯಾಯ ಕಾಲಗಳಿಗೆ ತಕ್ಕಂತೆ ಅವರು ನೀಡಿರುವ ಆಹಾರ ಸೂತ್ರ ನಮ್ಮ ದೇಹದ ಆರೋಗ್ಯವನ್ನು ಕಾಪಾಡಲು ಪೂರಕವಾಗಿದೆ ಎಂದು ಶ್ರೀ ಧ.ಮಂ.ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಬಿ.ಸೋಮಶೇಖರ ಶೆಟ್ಟಿ ಹೇಳಿದರು.
ಅವರು ಉಜಿರೆಯ ಎಸ್ ಡಿ ಎಂ ಕಾಲೇಜಿನಲ್ಲಿ ತುಳುವೆರೆ ಆಟಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕಾಲೇಜಿನ ಇತಿಹಾಸ ವಿಭಾಗ ಹಾಗೂ ತುಳು ಸಂಘದ ಆಶ್ರಯದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಉಪ ಪ್ರಿನ್ಸಿಪಾಲ್ ಜಯಕುಮಾರ ಶೆಟ್ಟಿ ಮಾತನಾಡಿ ಆಟಿ ತಿಂಗಳು, ನಮ್ಮ ಸಂಸ್ಕೃತಿಯನ್ನು ಪರಿಚಯಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಮನೆಯಲ್ಲೇ ಬಳಸಿದ ಆಹಾರ ವಸ್ತುಗಳ ಸೇವನೆ ಉತ್ತಮ ಎಂದು ಹೇಳಿದರು.
ವಿಭಾಗ ಪ್ರಾಧ್ಯಾಪಕ ಡಾ.ಸನ್ಮತಿ ಕುಮಾರ್, ಅಭಿಜ್ಞಾ ಹಾಗೂ ನಿವೇದಿತಾ ಉಪಸ್ಥಿತರಿದ್ದರು. ಮನೋಜ್ ಸ್ವಾಗತಿಸಿದರು. ಹೇಮಂತ್ ಕಾರ್ಯಕ್ರಮ ನಿರೂಪಿಸಿದರು. ಗೀತಾ ವಂದಿಸಿದರು. ಆಟಿಕಳೆಂಜ ಸೇರಿದಂತೆ ತುಳು ಸಂಸ್ಕೃತಿಯನ್ನು ಬಿಂಬಿಸುವ ಪ್ರದರ್ಶನಗಳು, ಹಳೆ ವಸ್ತುಗಳ ಪ್ರದರ್ಶನ ನಡೆಯಿತು.