ಕಡಬ:ಧರ್ಮಸ್ಥಳ ಯೋಜನೆಯಿಂದ ಶೃಧ್ಧಾ ಕೇಂದ್ರಗಳಲ್ಲಿ ಸ್ವಚ್ಚತೆ ಸಪ್ತಾಹ

ಶೇರ್ ಮಾಡಿ

ನೇಸರ ಆ.09: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಡಬ ವಲಯದಲ್ಲಿ ಆಗಸ್ಟ್ 15ರ ಮೊದಲು ಹದಿಮೂರು ಕಾರ್ಯಕ್ಷೇತ್ರಗಳ ಒಕ್ಕೂಟದ ವ್ಶಾಪ್ತಿಯ ಶ್ರದ್ಧಾ ಕೇಂದ್ರ ಕೇಂದ್ರಗಳ ಸ್ವಚ್ಚತೆ ಕಾರ್ಯಕ್ರಮವನ್ನು ನಡೆಸಿ ಸ್ವಾತಂತ್ರ್ಶ ದಿನಾಚರಣೆಗೆ ಸಿದ್ದತೆ ನಡೆಯಲಿದೆ.

ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಶ ವೀರೇಂದ್ರ ಹೆಗ್ಗಡೆಯವ ಆಶಯ ಹಾಗೂ ಮಾರ್ಗದರ್ಶನದೊಂದಿಗೆ ರಾಜ್ಶಾದ್ಶಂತ ಸ್ವಾತಂತ್ರ್ಶ ದಿನಾಚರಣೆಯ ಪೂರ್ವದಲ್ಲಿ ಶ್ರದ್ಧಾ ಕೇಂದ್ರಗಳ ಸ್ವಚ್ಚತೆ ಕಾರ್ಯಕ್ರಮವನ್ನು ನಡೆಸುತ್ತಿದ್ದು ಕಡಬ ತಾಲೂಕಿನ ಕಡಬ ವಲಯದ ಹದಿಮೂರು ಕಾರ್ಯಕ್ಷೇತ್ರಗಳಲ್ಲಿ ಒಕ್ಕೂಟದ ಸಹಭಾಗಿತ್ವದೊಂದಿಗೆ ಸ್ಥಳೀಯ ಸಂಘ ಸಂಸ್ಥೆಗಳು,ˌಊರಿನ ಪ್ರಮುಖರು ಹಾಗೂ ಶೃಧ್ಧಾಕೇಂದ್ರದ ಆಡಳಿತ ವರ್ಗದವರ ಸಹಕಾರದಲ್ಲಿ ಸ್ವಚ್ಚತಾ ಸಪ್ತಾಹವನ್ನು ಆಗಸ್ಟ್ 04ರಿಂದ 12ರವರೆಗೆ ನಡೆಸಲು ತಿರ್ಮಾನಿಸಿದ್ದು. ಈ ಅವಧಿಯಲ್ಲಿ ನೂಜಿಬಾಳ್ತಿಲ ಒಂರ್ಬಾಲು ಶ್ರೀ ಉಮಾಮಹೇಶ್ವರ ದೇವಸ್ಥಾನˌಮಾಲೇಶ್ವರ ಶ್ರೀ ವೀರಬದ್ರ ಹಾಗೂ ಶ್ರೀ ಮಾಲೇಶ್ವರ ದೇವಸ್ಥಾನˌ ಇಚಿಲಂಪಾಡಿ ಬೀಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ. ಬಲ್ಶ ಶ್ರೀ ಉಮಾಮಹೇಶ್ವರಿ ದೇವಸ್ಥಾನ,ˌದೇರಾಜೆ ಕುದ್ರಡ್ಕ ಶ್ರೀ ರಾಜನ್ ಧೈವಸ್ಥಾನ,ˌಕುಟ್ರುಪ್ಪಾಡಿ ವಿಮಲಗಿರಿ ಚರ್ಚ್,ˌದೊಡ್ಡಕೊಪ್ಪ ಶ್ರೀ ಸಿದ್ದಿವಿನಾಯಕ ಭಜನಾಮಂದಿರ,ˌಶ್ರೀ ಶ್ರೀಕಂಠೇಶ್ವರ ಮಹಾಗಣಪತಿ ದೇವಸ್ಥಾನ ಕಡಬ,ˌಕಡಬ ಕೃಷ್ಟ್ಣನಗರ ಭಜನಾಮಂದಿರˌಗೋಳಿಯಡ್ಕ, ಶ್ರೀ ಅಯ್ಶಪ್ಪ ಸ್ವಾಮಿ ಭಜನಾಮಂದಿರ,ˌರಾಮನಗರ ಶ್ರೀ ಅಯ್ಶಪ್ಪಸ್ವಾಮಿ ಭಜನಾಮಂದಿರ, ಪಿಜಕಳ ಶ್ರೀ ಮಹಾವಿಷ್ಣು ದೇವಸ್ಥಾನ ಹಾಗೂ ವಾಳ್ಶ ಅಯ್ಶಪ್ಪ ಭಜನಾಮಂದಿರದ ಹೊರಾಂಗಣ ಹಾಗೂ ಒಳಾಂಗಣ ಸ್ವಚ್ಚತೆಯನ್ನು ಮಾಡಲಾಗುತ್ತದೆ.
ವಲಯದಲ್ಲಿ ನಡೆಯಲಿರುವ ಸ್ವಚ್ಚತಾ ಕಾರ್ಯಕ್ರಮವನ್ನು ವಲಯ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ ಸಂಘಟಿಸಿ ಸ್ವಚ್ಚತಾ ಕಾರ್ಯಕ್ರಮಗಳನ್ನು ನಡೆಸುವ ಬಗ್ಗೆ ಮಾರ್ಗದರ್ಶನ ನೀಡಿದರು.

ವಲಯದ ಸೇವಾಪ್ರತಿನಿಧಿಗಳಾದ ಸುಗುಣˌಪುಪ್ಪಾಲತಾ, ವೇದಾವತಿ, ಅಪರ್ಣˌˌ ದುರ್ಗಾವತಿ, ನಳಿನಿ, ಸೌಮ್ಶ, ಸಂದ್ಶಾ, ರೇಷ್ಮಾ, ಜಯಲಕ್ಷ್ಮೀ, ಸವಿತಾ, ಸರಿತಾ ಹಾಗೂ ಗೀತಾ ಕಾರ್ಯಕ್ರಮದ ಸಂಘಟನೆಗೆ ಸಹಕಾರ ನೀಡಿದರು.
ವಲಯದ ಒಕ್ಕೂಟದ ಅಧ್ಶಕ್ಷರುಗಳು,ˌಒಕ್ಕೂಟದ ಪಧಾದಿಕಾರಿಗಳು,ˌನವಜೀವನ ಸಮಿತಿ ಸದಸ್ಶರುಗಳು,ˌವಲಯದ ಸಂಘ ಸಂಸ್ಥೆಯ ಪ್ರತಿನಿಧಿಗಳು,ˌದೇವಾಸ್ಥಾನ, ದೈವಸ್ಥಾನ ಹಾಗೂ ಚರ್ಚ್ ಆಡಳಿತ ಕಮಿಟಿ ಪಧಾಧಿಕಾರಿಗಳು, ಸ್ವಸಹಾಯ ಸಂಘಗಳ ಸದಸ್ಶರುಗಳು ಸ್ವಚ್ಚತಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ
.

Leave a Reply

error: Content is protected !!