ನೇಸರ ಆ14: ಸಾಫಿನ್ಸಿಯ ಬೆಥನಿ ಪ್ರಥಮ ದರ್ಜೆ ಕಾಲೇಜು ನೆಲ್ಯಾಡಿ ಇಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಸಮೂಹ ದೇಶ ಭಕ್ತಿ ಗೀತೆ ಮತ್ತು ನೃತ್ಯ ಸ್ಪರ್ಧೆ ನಡೆಯಿತು.
ಸ್ಪರ್ಧೆಯನ್ನು ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ.ಮೆಲ್ವಿನ್ ಮ್ಯಾಥ್ಯೂ ರವರು ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು “ಸ್ವಾತಂತ್ರ್ಯದ 75ನೇ ವರ್ಷದ ಆಚರಣೆಯನ್ನು ಸಂಭ್ರಮಿಸುತ್ತಿದ್ದೇವೆ. ಎಲ್ಲಾ ವರ್ಷಗಳಿಗಿಂತ ಭಿನ್ನವಾಗಿ ಈ ವರ್ಷ ಮೂರು ದಿನ ಸ್ವಾತಂತ್ರ್ಯದ ಸಂಭ್ರಮ ನಮ್ಮದಾಗಿದೆ. ಈ ದಿನಗಳಿಗೆ ಆಚರಣೆ ಸೀಮಿತವಾಗಿರದೆ ಪ್ರತಿ ದಿನ ನಮ್ಮ ಹೃದಯದಲ್ಲಿ ದೇಶ ಪ್ರೇಮ ನೆಲೆಸಿರಬೇಕು” ಎಂದು ಹೇಳಿದರು.
ವೇದಿಕೆಯಲ್ಲಿ ಉಪ ಪ್ರಾಂಶುಪಾಲರಾದ ಫಾ.ಜಿಜನ್ ಅಬ್ರಹಾಂ, ಕಾಲೇಜಿನ ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿಗಳಾದ ವಿಶ್ವನಾಥ್ ಎಸ್., ವಿದ್ಯಾರ್ಥಿ ನಾಯಕಿ ಕು.ದೀಕ್ಷಾ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಗೆ ದೇಶ ಭಕ್ತಿ ಗೀತೆ ಮತ್ತು ನೃತ್ಯ ಸ್ಪರ್ಧೆ ನಡೆಯಿತು. ತೀರ್ಪುಗಾರರಾಗಿ ಜ್ಞಾನೋದಯ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿಯರಾದ ಶ್ರೀಮತಿ ಶೈನಿ ಮತ್ತು ಶ್ರೀಮತಿ ಜಸ್ವಿoತಾ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ಉಪನ್ಯಾಸಕರು ಉಪಸ್ಥಿತರಿದ್ದರು.
ವಿದ್ಯಾರ್ಥಿ ಕು. ಹರ್ಷಿತ ಸ್ವಾಗತಿಸಿ ಕು. ಸ್ವಸ್ತಿ ಕೆ. ರೈ ಕಾರ್ಯಕ್ರಮ ನಿರೂಪಿಸಿದರು. ಕು. ಶಬ್ರತ್ ಎಲ್ಲರನ್ನು ವಂದಿಸಿದರು.
NESARA|| WhatsApp ||GROUPS |
---|