ಪರಿಶ್ರಮ, ಶಿಸ್ತಿನಿಂದ ಹಳ್ಳಿಯಿಂದಲೂ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗಲು ಸಾಧ್ಯ – ಮನೋಜ್ ಕೆ.ವಿ.

ಶೇರ್ ಮಾಡಿ

ನೇಸರ ಆ.15: ವಿಶ್ವ ವಿದ್ಯಾಲಯ ಕಾಲೇಜು ನೆಲ್ಯಾಡಿಯಲ್ಲಿ ವಾರ್ಷಿಕ ಕ್ರೀಡಾಕೂಟವು ಆನಂದ ಕೆ, ದೈಹಿಕ ಶಿಕ್ಷಣ ನಿರ್ದೇಶಕರು ಇವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನೆರವೇರಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಸೀತಾರಾಮ ಪಿ. ಸಹ ಸಂಯೋಜಕ ವಿ.ವಿ. ಕಾಲೇಜು ನೆಲ್ಯಾಡಿ ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಮಟ್ಟದ ವಾಲಿಬಾಲ್ ಆಟಗಾರ ಮತ್ತು ತರಬೇತುದಾರರಾದ ಮನೋಜ್ ಕೆ.ವಿ. ಭಾಗವಹಿಸಿದರು. ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ತಮ್ಮ ಅನುಭವಗಳನ್ನು ತೆರೆದಿಡುತ್ತಾ, “ಪರಿಶ್ರಮ ಶಿಸ್ತಿನಿಂದ ಹಳ್ಳಿಯಿಂದಲೂ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗಲು ಸಾಧ್ಯ. ಇದಕ್ಕಾಗಿ ಅವಕಾಶಗಳನ್ನು ಬಳಸಿಕೊಳ್ಳಬೇಕು” ಎಂದರು. ಇದರೊಂದಿಗೆ ವಿದ್ಯಾರ್ಥಿಗಳು ಕಡಿಮೆ ಅವಧಿಯಲ್ಲಿ ಮಳೆಯ ತೊಂದರೆಯ ನಡುವೆ ಪಥಸಂಚಲನಕ್ಕೆ ತಯಾರಿಯಾದ ರೀತಿಯನ್ನು ಪ್ರಶಂಸಿದರು.

NESARA|| WhatsApp ||GROUPS

   
                          

 

  
                                                     

 

ಕಾರ್ಯಕ್ರಮದಲ್ಲಿ ಶ್ರೀಮತಿ ಉಷಾ ಅಂಚನ್, ಅಧ್ಯಕ್ಷರು, ಅನುಷ್ಠಾನ ಸಮಿತಿ, ವಿ.ವಿ. ಕಾಲೇಜು ನೆಲ್ಯಾಡಿ ಇವರು, ಪ್ರತಿಭೆಗಳು ಅವಕಾಶಗಳನ್ನು ಬಳಸಿಕೊಳ್ಳುವುದರೊಂದಿಗೆ ಬೆಳೆಯಲಿ, ಗುರುತಿಸಿಕೊಳ್ಳುವಂತಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳು ಪ್ರಾರ್ಥನೆಯ ಮುಖಾಂತರ ಚಾಲನೆ ನೀಡಿದರು. ಶ್ರೀಮತಿ ವೆರೋನಿಕಾ ಪ್ರಭಾ ವಿ. ಪಿ. ಎಲ್ಲರನ್ನೂ ಸ್ವಾಗತಿಸಿದರು. ಮುಖ್ಯ ಅತಿಥಿಗಳಾದ ಮನೋಜ್ ಕೆ.ವಿ. ಇವರ ಪರಿಚಯವನ್ನು ಆನಂದ ಕೆ. ದೈಹಿಕ ನಿರ್ದೇಶಕರು ಮಾಡಿದರು. ಡಾ.ನೂರಂದಪ್ಪ, ಮುಖ್ಯಸ್ಥರು, ಕನ್ನಡ ವಿಭಾಗ,ಧನ್ಯವಾದ ಸಮರ್ಪಿಸಿದರು. ನಿರೂಪಣೆಯನ್ನು ಶ್ರೀಮತಿ ದಿವ್ಯಶ್ರೀ ಜಿ, ವಾಣಿಜ್ಯ ವಿಭಾಗ, ಡೀನಾ ಪಿ. ರಾಜಕೀಯ ಶಾಸ್ತ್ರ ಉಪನ್ಯಾಸಕಿಯರು ನಿರ್ವಹಿಸಿದರು. ವಿದ್ಯಾರ್ಥಿ ನಾಯಕ ಮೊಹಮ್ಮದ್ ಲುಕ್ಮಾನ್, ಕ್ರೀಡಾ ಕಾರ್ಯದರ್ಶಿ ಗುರುಪ್ರದೀಪ್ ಉಪಸ್ಥಿತರಿದ್ದರು. ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Reply

error: Content is protected !!