ಸ್ವಾತಂತ್ರ್ಯದ ಮೂಲಕ ಪ್ರಜೆಯ ಜವಾಬ್ದಾರಿಯು ಜಾಸ್ತಿಯಾಗಿದೆ – ಬಾಲಕೃಷ್ಣ ಕೊಯಿಲ

ಶೇರ್ ಮಾಡಿ

ನೇಸರ ಆ.16: ಶ್ರೀ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಸ್ವಾತಂತ್ರ್ಯ ದಿನಾಚರಣೆಯು ನಡೆಯಿತು. ಹಿರಿಯ ಪತ್ರಕರ್ತ ಬಾಲಕೃಷ್ಣ ಕೊಯಿಲರವರು ಧ್ವಜಾರೋಹಣವನ್ನು ನೆರವೇರಿಸಿ ಕೊಟ್ಟರು. ಬಳಿಕ ಮಾತನಾಡುತ್ತಾ ಅವರು “ಸ್ವಾತಂತ್ರ್ಯವು ಬಹಳ ವಿಸ್ತಾರವಾದ ಅರ್ಥವನ್ನು ಹೊಂದಿದೆ. ಸ್ವಾತಂತ್ರ್ಯದ ಮೂಲಕ ಪ್ರಜೆಯ ಜವಾಬ್ದಾರಿಯು ಜಾಸ್ತಿಯಾಗಿದೆ. ಹಾಗಾಗಿ ಭವಿಷ್ಯದ ಪ್ರಜೆಗಳಾದ ನೀವು ಸ್ವಾತಂತ್ರ್ಯದ ಮಹತ್ವವನ್ನು ತಿಳಿದುಕೊಂಡು ಜವಾಬ್ದಾರಿಯುತವಾಗಿ ದೇಶವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸಬೇಕು” ಎಂದು ಕರೆ ಕೊಟ್ಟರು.

ಈ ಧ್ವಜಾರೋಹಣದ ಕಾರ್ಯಕ್ರಮವು ನಡೆದ ಆಜಾದಿ ಕಾ ಅಮೃತ ಮಹೋತ್ಸವ” ಪ್ರಯುಕ್ತ ವಿದ್ಯಾರ್ಥಿಗಳ ಜಾಥಾವು ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರದ ವರೆಗೆ ನಡೆಯಿತು.
ನಂತರದ ಸಭಾ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣವನ್ನು ಮಾಡಿದ ಖ್ಯಾತ ವಿದ್ವಾಂಸರಾದ ಅರವಿಂದ ಚೊಕ್ಕಾಡಿಯವರು ಮಾತನಾಡುತ್ತಾ “ವಿದ್ಯಾರ್ಥಿಗಳು ನಮ್ಮ ದೇಶದ ಸ್ವಾತಂತ್ರ್ಯಕ್ಕೆ ಕಾರಣರಾದ ಸರ್ವ ಮಹನೀಯರನ್ನೂ ಸ್ಮರಿಸಬೇಕು, ಸದಾ ನೆನಪಿನಲ್ಲಿರಿಸಬೇಕು. ಅವರು ನಮ್ಮ ಒಳಿತಿಗಾಗಿ ಸರ್ವಸ್ವವನ್ನೂ ಸಮರ್ಪಣೆ ಮಾಡಿದ್ದಾರೆ. ಯಾವ ಜನಾಂಗ ತನ್ನ ಇತಿಹಾಸವನ್ನು ತಿಳಿದಿರುತ್ತದೆಯೋ, ಅದಕ್ಕೆ ಉಜ್ವಲ ಭವಿಷ್ಯ ಖಂಡಿತವಾಗಿಯೂ ಇರುತ್ತದೆ” ಎಂದು ಹೇಳಿದರು. ಅವರು ತಮ್ಮ ಭಾಷಣದಲ್ಲಿ ಭಾರತದ ಸ್ವಾತಂತ್ರ್ಯದ ಸನ್ನಿವೇಶವನ್ನು ವಿವರಿಸಿದರು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಭಾರತೀಯ ಸೇನೆಯ ಸುಧಾಕರನ್‌ರವರು ಮಾತನಾಡುತ್ತಾ ಭಾರತದ ಸೈನ್ಯ, ಅದರ ವೈಶಿಷ್ಟತೆ, ಸೇನೆಯಲ್ಲಿರುವ ಅವಕಾಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಿದರು. ಅವರ ಈ ಮಾತುಗಳಿಂದ ವಿದ್ಯಾರ್ಥಿಗಳು ಹರ್ಷಗೊಂಡು ಉತ್ತೇಜಿತಗೊಂಡರು. ಕಾರ್ಯಕ್ರಮದ ಇನ್ನೋರ್ವ ಅತಿಥಿ ನೋಣಯ್ಯ ಪೂಜಾರಿ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯದ ಶುಭ ಹಾರೈಕೆಗಳನ್ನು ತಿಳಿಸಿದರು. ಸ್ವಾತಂತ್ರ್ಯದ ಪ್ರಯುಕ್ತ ನಡೆಸಲಾದ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಬಹುಮಾನ ವಿತರಣೆಯನ್ನು ಈ ಸಂದರ್ಭದಲ್ಲಿ ಸಭೆಯಲ್ಲಿದ್ದ ಗಣ್ಯರು ಮಾಡಿದರು.

ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿ ಶ್ರೀ ರಾಧಾಕೃಷ್ಣ ಕೆ ಎಸ್ ಅಧ್ಯಕ್ಷೀಯ ಮಾತುಗಳನ್ನಾಡಿದರು.ಶ್ರೀ ರಾಮಕುಂಜೇಶ್ವರ ಪ್ರೌಢಶಾಲೆಯ ಹಿರಿಯ ಅಧ್ಯಾಪಕರಾದ ಶ್ರೀ ವೆಂಕಟೇಶ ದಾಮ್ಲೆಯವರು ಸ್ವಾಗತ ಭಾಷಣವನ್ನು ಮಾಡಿದರು.ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಚಂದ್ರಶೇಖರ ಕೆ ಇವರು ವಂದಿಸಿದರು. ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕ ಚೇತನ್ ಎಂ ಕಾರ್ಯಕ್ರಮದ ನಿರ್ವಹಣೆಯನ್ನು ಮಾಡಿದರು. .ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಗುರುಗಳಾದ ಸತೀಶ್ ಭಟ್ ಮತ್ತು ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಸದಸ್ಯರಾದ ಲಕ್ಷ್ಮಿನಾರಾಯಣ ಆತೂರು ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ರಕ್ಷಕ ಶಿಕ್ಷಕ ಸಂಘದ ಮಹಾ ಸಭೆ ನಡೆಯಿತು.

NESARA|| WhatsApp ||GROUPS

   
                          

 

  
                                                     

 

Leave a Reply

error: Content is protected !!