ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಪಡುಬೆಟ್ಟು: ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮ

ಶೇರ್ ಮಾಡಿ

ನೇಸರ ಆ.16: ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಪಡುಬೆಟ್ಟು ಇಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ನಡೆಯಿತು.
ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಶಿವ ಪ್ರಸಾದ್ ಧ್ವಜಾರೋಹಣ ನೆರವೇರಿಸಿದರು. ಬಳಿಕ ವಿದ್ಯಾರ್ಥಿಗಳು ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ಹೊರಟರು. ಈ ವೇಳೆ ಸ್ವಾತಂತ್ರ್ಯ ಹೋರಾಟಗಾರರ ಛದ್ಮವೇಷ ಧರಿಸಿದ ವಿದ್ಯಾರ್ಥಿಗಳು ವಿಶೇಷ ಗಮನ ಸೆಳೆದರು. ಶಿಕ್ಷಕರು, ಪೋಷಕರು, ಊರವರು ಜೊತೆ ಸಾಗುತ್ತಾ ಸಹಕಾರ ನೀಡಿದರು.

ಭಾಗ್ಯದಾತೆ ಭಾರತ ಮಾತೆ

ಭಾಗ್ಯದಾತೆ ಭಾರತ ಮಾತೆ
ನೀನೆಂದು ಪರಮ ಪುನೀತೆ
ಭಾರತೀಯರ ಜನುಮದಾತೆ
ಅಜರಾಮರ ನಿನ್ನಯ ಚರಿತೆ

ನಮ್ಮನ್ನೆಲ್ಲ ಸಲಹುವ ದಾತೆ
ಹಸಿರು ವರ್ಣದಿ ಶೋಭಿತೆ
ಸರ್ವರಿಗೂ ಆಶ್ರಯ ದಾತೆ
ನೆಲೆಸಿದೆ ಇಲ್ಲಿ ಸೋದರತೆ

ನಾವೆಲ್ಲರೂ ನಿನ್ನ ಮಕ್ಕಳು
ಒಂದೇ ಬಳ್ಳಿಯ ಹೂಗಳು
ತಾಯಿ ನಿನ್ನಯ ಮಡಿಲಿನಲಿ
ಆಡಿ ನಲಿವ ಕಂದಮ್ಮಗಳು

          – ನ್ಯಾನ್ಸಿ ನೆಲ್ಯಾಡಿ

ಬಳಿಕ ಶಾಲೆಯ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ನೆರವೇರಿತು. ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಶಿವ ಪ್ರಸಾದ್ ಅಧ್ಯಕ್ಷತೆ ವಹಿಸಿ ಸ್ವಾತಂತ್ರ್ಯ ದಿನದ ಶುಭಾಶಯ ತಿಳಿಸಿದರು. ಸಹಶಿಕ್ಷಕಿಯಾದ ಶ್ರೀಮತಿ ಸಜಿನ ಕೆ ಎರೋಡಿ ಅತಿಥಿಗಳನ್ನು ಸ್ವಾಗತಿಸಿದರು. ಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ಜೆಸ್ಸಿ ಕೆ.ಎ. ಇವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಹಶಿಕ್ಷಕಿ ಶ್ರೀಮತಿ ಕಮಲಾಕ್ಷಿ ಕೆ ಇವರು ಸ್ವಾತಂತ್ರ್ಯ ಹೋರಾಟಗಾರರ ಕುರಿತು ಮನಮುಟ್ಟುವಂತೆ ಮಾಹಿತಿ ನೀಡಿದರು.

NESARA|| WhatsApp ||GROUPS

   
                          

 

  
                                                     

 

ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಬಹುಮಾನವನ್ನು ವೇದಿಕೆಯಲ್ಲಿ ಇದ್ದ ಗಣ್ಯರಿಂದ ವಿತರಿಸಲಾಯಿತು. ಬಹುಮಾನ ಪಡೆದ ವಿದ್ಯಾರ್ಥಿಗಳ ಪಟ್ಟಿಯನ್ನು ಸಹ ಶಿಕ್ಷಕಿ ಶ್ರೀಮತಿ ಕವಿತಾ ಡಿ ವಾಚಿಸಿದರು. ದೈಹಿಕ ಶಿಕ್ಷಣ ಶಿಕ್ಷಕಿಯಾದ ಶ್ರೀಮತಿ ಲೀಲಾವತಿ ಎಂ ಇವರು ಧನ್ಯವಾದ ತಿಳಿಸಿದರು. ಸಭಾ ಕಾರ್ಯಕ್ರಮವನ್ಬು ಸಹಶಿಕ್ಷಕಿ ಮಮತ ಸಿ.ಹೆಚ್. ನಿರೂಪಿಸಿದರು. ಗ್ರಾಮ ಪಂಚಾಯತ್ ಸದಸ್ಯರಾದ ರವಿ ಪ್ರಸಾದ್ ಶೆಟ್ಟಿ, ಸಲಾಂ ಬಿಲಾಲ್, ಶ್ರೀಮತಿ ಜಯಲಕ್ಷ್ಮಿ ಪ್ರಸಾದ್, ಶ್ರೀಮತಿ ಪುಷ್ಪಾ ಸ್ವಾತಂತ್ರ್ಯದ ಶುಭಾಶಯ ತಿಳಿಸಿದರು.
ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು. ಈ ಕಾರ್ಯಕ್ರಮವನ್ನು ಸಹ ಶಿಕ್ಷಕಿಯಾದ ಕಮಲಾಕ್ಷಿ ಕೆ ಇವರು ನಿರೂಪಿಸಿದರು. ಎಸ್.ಡಿ.ಎಂ.ಸಿ. ಉಪಾಧ್ಯಕ್ಷೆ ಚಿತ್ರಾ ಕೆ. ಹಾಗೂ ಸರ್ವ ಸದಸ್ಯರು ಹಾಜರಿದ್ದು ಸಹಕರಿಸಿದರು. ಅತಿಥಿ ಶಿಕ್ಷಕಿಯರಾದ ನ್ಯಾನ್ಸಿ ಲಿಝಿ, ರಂಜಿನಿ ಕುಂದರ್, ತೀರ್ಥ ಪಿ.ವಿ‌. ಸಹಕಾರ ನೀಡಿದರು. ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಸಿಹಿತಿಂಡಿ ವಿತರಿಸಲಾಯಿತು. ಆಗಮಿಸಿದ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿತ್ತು.

Leave a Reply

error: Content is protected !!