ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ ಮತ್ತು ಮಾಜಿ ಸೈನಿಕರಿಗೆ ಸನ್ಮಾನ

ಶೇರ್ ಮಾಡಿ

ನೇಸರ ಆ.16:ಜೇಸಿಐ ಬಂಟ್ವಾಳ ಹಾಗೂ ಗ್ರಾಮಾಭಿೃದ್ಧಿ ಸಂಘ ಕಳ್ಳಿಗೆ ಇದರ ವತಿಯಿಂದ ನಡೆದ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ ಮತ್ತು ಮಾಜಿ ಸೈನಿಕರಿಗೆ ಸನ್ಮಾನ ಕಾರ್ಯಕ್ರಮ ಪಂಬದಬೆಟ್ಟುವಿನಲ್ಲಿ ನಡೆಯಿತು,
ಕನಪಾಡಿತ್ತಾಯ ದೈವಸ್ಥಾನ ಕಳ್ಳಿಗೆ ಇದರ ಮಾಜಿ ಮೊಕ್ತೇಸರರಾದ ಬಿ.ರಾಜಶೇಖರ್ ರೈ ಯವರು ದ್ವಜರೋಹಣ ಮಾಡಿ ಮಾತನಾಡಿ ಸೌಹಾರ್ದದ ಬಲಿಷ್ಠ ಭಾರತ ನಿರ್ಮಾಣ ಹಾಗೂ ಅಮಲು ಪದಾರ್ಥ ಸೇವನೆ ಮಾಡದಂತೆ ಶಪಥ ಮಾಡಲು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಾಜಿ ಸಚಿವರುಬಿ.ರಮಾನಾಥ ರೈ ಯವರು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಸ್ವಾತಂತ್ರ್ಯ ಹೋರಾಟಗಾರರ ಬಲಿದಾನವನ್ನು ಸ್ಮರಿಸಿ ನೆನಪಿಸಿದರು.

NESARA|| WhatsApp ||GROUPS

                             

 

                                                       

 

ಈ ಸುಸಂದರ್ಭದಲ್ಲಿ ಭಾರತೀಯ ಸೇನೆಯ ಮಾಜಿ ಯೋಧ ಡಿಕೇಶ್ ಇವರನ್ನು ಸನ್ಮಾನಿಸಲಾಯಿತು.
ಜೇಸಿಐ ಬಂಟ್ವಾಳದ ಪೂರ್ವ ಅಧ್ಯಕ್ಷರು, ಸದಸ್ಯರು, ಪದಾಧಿಕಾರಿಗಳು, ಲೇಡಿಜೇಸಿಗಳು, ಊರಿನ ಹಿರಿಯರು, ಗಣ್ಯರು, ಮಕ್ಕಳು, ಮಹಿಳೆಯರು ಈ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.
ಗಣ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ದಿವಾಕರ ಪಂಬದಬೆಟ್ಟು, ಸಂತೋಷ್ ಜೈನ್, ಹಸನಬ್ಬ ಪಾದೆ, ರವಿರಾಜ್ ಜೈನ್, ಶ್ರೀಮತಿ ರತ್ನ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕುಮಾರಿ ಪೂಜಾ ಮತ್ತು ಕುಮಾರಿ ಧೃತಿ ಇವರು ದ್ವಜಗೀತೆ ಹಾಡಿದರು, ಗ್ರಾಮಾಭಿವದ್ಧಿ ಸಂಘದ ಅಧ್ಯಕ್ಷ ಮಧುಸೂದನ ಶೆಣೈ ಸ್ವಾಗತಿಸಿ, ಜೇಸಿಐ ಬಂಟ್ವಾಳ ದ ಅಧ್ಯಕ್ಷ ಜೇಸಿ HGF ರೋಶನ್ ರೈ ಧನ್ಯವಾದ ಸಮರ್ಪಿಸಿದರು, ಮನೋಜ್ ಕ ಕಾರ್ಯಕ್ರಮ ನಿರೂಪಿಸಿದರು.

See also  ಮೈರೋಳ್ತಡ್ಕ:ಪ್ರಬುದ್ಧ ಜ್ಞಾನ ವಿಕಾಸ ಕೇಂದ್ರದ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ

Leave a Reply

Your email address will not be published. Required fields are marked *

error: Content is protected !!