ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ವಿದ್ಯಾಭಾರತಿ ಈಜು ಸ್ಪರ್ಧೆಯಲ್ಲಿ ಕ್ಷೇತ್ರಿಯ ಮಟ್ಟಕ್ಕೆ ಆಯ್ಕೆ

ಶೇರ್ ಮಾಡಿ

ನೇಸರ ಆ.17: ವಿದ್ಯಾಭಾರತಿ ಜಿಲ್ಲಾ ಮಟ್ಟದ ಈಜು ಮಟ್ಟದ ಸ್ಪರ್ಧೆಯು ಶಕ್ತಿ ವಸತಿಯುತ ಶಾಲೆ ಮಂಗಳೂರು ಇಲ್ಲಿ ನಡೆಯಿತು. ಈ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನಗಳನ್ನು ಪಡೆದು ಕ್ಷೇತ್ರಿಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
10ನೇ ವಿದ್ಯಾರ್ಥಿ ಧನ್ವಿತ್.ಕೆ ಇವರು (ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ದರ್ಬೆ ಶಾಖೆಯ ಮ್ಯಾನೇಜರ್ಕೇಶವ ಹಾಗೂ ಮೀನಾಕ್ಷಿ ದಂಪತಿಗಳ ಪುತ್ರ): 200ಮೀ ಫ್ರೀ ಸ್ಟೈಲ್, 100ಮೀ ಫ್ರೀ ಸ್ಟೈಲ್, ಮತ್ತು 50ಮೀ ಫ್ರೀ ಸ್ಟೈಲ್ ನಲ್ಲಿ ಪ್ರಥಮ ಸ್ಥಾನದೊಂದಿಗೆ ಹುಡುಗರ ವಿಭಾಗದ ವೈಯಕ್ತಿಕ ಚಾಂಪಿಯನ್‌ಶಿಪ್ ಪಡೆದುಕೊಂಡಿದ್ದಾನೆ. 9ನೇ ವಿದ್ಯಾರ್ಥಿನಿ ಪ್ರತೀಕ್ಷ ಆಳ್ವ(ಇಂಜಿನಿಯರ್ ಪಡುಮಲೆ ಶ್ರೀ ಚಂದ್ರಶೇಖರ್ ಆಳ್ವ ಮತ್ತು ಉಷಾ.ಸಿ.ಆಳ್ವರ ಪುತ್ರಿ) 50ಮೀ ಫ್ರೀ ಸ್ಟೈಲ್, 100ಮೀ ಫ್ರೀ ಸ್ಟೈಲ್ ಮತ್ತು 50ಮೀ ಬಾಕ್ ಸ್ಟ್ರೇಕ್-ಪ್ರಥಮ ಸ್ಥಾನದೊಂದಿಗೆ ಹುಡುಗಿಯರ ವೈಯಕ್ತಿಕ ಚಾಂಪಿಯನ್‌ಶಿಪ್ ಪಡೆದುಕೊಂಡಿದ್ದಾಳೆ.
10ನೇ ವಿದ್ಯಾರ್ಥಿನಿ ಶ್ರದ್ಧಾಲಕ್ಷ್ಮೀ(ರವಿಶಂಕರ್.ಡಿ ಮತ್ತು ಅನುಪಮ ಇವರ ಪುತ್ರಿ): 100ಮೀ ಬಾಕ್ ಸ್ಟ್ರೇಕ್ -ಪ್ರಥಮ ಸ್ಥಾನ, 50ಮೀ ಬಾಕ್ ಸ್ಟ್ರೇಕ್ -ದ್ವಿತೀಯ ಸ್ಥಾನ ಮತ್ತು 50ಮೀ ಫ್ರೀ ಸ್ಟೈಲ್ ನಲ್ಲಿ ದ್ವಿತೀಯ ಸ್ಥಾನ, 6ನೇ ತರಗತಿ ವಿದ್ಯಾರ್ಥಿ ನಮನ್ ನಾಯ್ಕ (ಸಂದೀಪ್ ನಾಯ್ಕ ಮತ್ತು ನಮಿತಾನಾಯ್ಕ ಇವರ ಪುತ್ರ) 100ಮೀ ಬ್ರೆಸ್ಟ್ ಸ್ಟ್ರೋಕ್ -ಪ್ರಥಮ ಸ್ಥಾನ, 9ನೇ ವಿದ್ಯಾರ್ಥಿ ವೇದ್‌ವೃತ್ ಭಂಡಾರಿ(ಚಿಲ್ಮೆತ್ತಾರು ಸಂತೋಷ್ ಭಂಡಾರಿ ಮತ್ತು ಮೀನಾಕ್ಷಿ ಭಂಡಾರಿ ಇವರ ಪುತ್ರ): 50ಮೀ ಬ್ರೆಸ್ಟ್ ಸ್ಟ್ರೋಕ್ -ದ್ವಿತೀಯ, 100ಮೀ ಬ್ರೆಸ್ಟ್ ಸ್ಟ್ರೋಕ್ -ದ್ವಿತೀಯ ಮತ್ತು 100ಮೀ ಬಾಕ್ ಸ್ಟ್ರೇಕ್ –ತೃತೀಯ ಸ್ಥಾನ ಮತ್ತು 7ನೇ ತರಗತಿ ವಿದ್ಯಾರ್ಥಿ ಮಹಿನ್.ಪಿ.ಆರ್(ಪರ್ಲಡ್ಕ ಶ್ರೀ ರಾಕೇಶ್ ಕುಮಾರ್ ಮತ್ತು ಜ್ಯೋತಿ.ಎನ್.ಎಸ್ ಇವರ ಪುತ್ರ): 100ಮೀ ಫ್ರೀ ಸ್ಟೈಲ್ – ತೃತೀಯ ಸ್ಥಾನ ಪಡೆದಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿದರು.

NESARA|| WhatsApp ||GROUPS

   
                          

 

  
                                                     

 

Leave a Reply

error: Content is protected !!