ಅರಂತೋಡು: ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ ಹಲವಾರು ಕಾರ್ಯಕ್ರಮಗಳಿಗೆ ಸಾಕ್ಷಿಯಾದ ಅರಂತೋಡು ಕಾಲೇಜು

ಶೇರ್ ಮಾಡಿ

ನೇಸರ ಆ.17: ಅರಂತೋಡು ನೆಹರು ಸ್ಮಾರಕ ಪದವಿಪೂರ್ವ ಕಾಲೇಜಿನಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ ಅಂಗವಾಗಿ ಶಿಸ್ತುಬದ್ಧ ಧ್ವಜಾರೋಹಣ, ಅಕ್ಷರ ದಾಸೋಹ ಭೋಜನ ಶಾಲೆಯ ಉದ್ಘಾಟನೆ, ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಪಡೆದ ಹದಿನಾರು ವೀರ ಸೇನಾನಿಗಳಿಗೆ ಸನ್ಮಾನ, ವಾರ್ಷಿಕ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ 50 ಸಾವಿರ ರೂಪಾಯಿಗಳ ಒಳಗೊಂಡ ನಗದು ಪುರಸ್ಕಾರ, ಅರಂತೋಡು ಗ್ರಾಮ ಪಂಚಾಯತ್ ಸಾರ್ವಜನಿಕ ಸ್ವಾತಂತ್ರ್ಯೋತ್ಸವದಲ್ಲಿ ವಿದ್ಯಾರ್ಥಿಗಳ ಅದ್ದೂರಿ ಮೆರವಣಿಗೆ ಮತ್ತು ವಿದ್ಯಾರ್ಥಿಗಳ ದೇಶ ಪ್ರೇಮದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು. ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ದಿವಾಕರ ರೈ ಧ್ವಜಾರೋಹಣವನ್ನು ನೇರವೇರಿಸಿದರು.

ನಂತರ ಅರಂತೋಡು ಗ್ರಾಮ ಪಂಚಾಯತ್ ನೇತೃತ್ವದಲ್ಲಿ ನಡೆದ ಸಾರ್ವಜನಿಕ ಸ್ವಾತಂತ್ರ್ಯೋತ್ಸವದ ಮೆರವಣಿಗೆ ಮತ್ತು ಧ್ವಜಾರೋಹಣ ಕಾರ್ಯಕ್ರಮದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಆಡಳಿತ ಮಂಡಳಿಯ ಸ್ಥಾಪಕಾಧ್ಯಕ್ಷ ದಿವಂಗತ ಅಳಿಕೆ ಕೃಷ್ಣಪ್ಪಗೌಡ ಸ್ಮರಣಾರ್ಥ ಅವರ ಧರ್ಮಪತ್ನಿ ಶ್ರೀಮತಿ ಚಂದ್ರಾವತಿ ಅಳಿಕೆ ಮತ್ತು ಮಕ್ಕಳ ಕೊಡುಗೆಯಾದ ಸುಮಾರು ಎರಡೂವರೆ ಲಕ್ಷ ರೂಪಾಯಿಗಳ ಅಕ್ಷರ ದಾಸೋಹ ಭೋಜನ ಶಾಲೆಯ ಉದ್ಘಾಟನೆ ಕಾರ್ಯಕ್ರಮ ನಡೆಯಿತು. ಶ್ರೀಮತಿ ಚಂದ್ರಾವತಿ ಅಳಿಕೆ ಉದ್ಘಾಟಿಸಿದರು.

NESARA|| WhatsApp ||GROUPS

   
                          

 

  
                                                     

 

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಭಾ ಕಾರ್ಯಕ್ರಮಕ್ಕೆ ಭಾರತೀಯ ವಾಯುದಳದ ನಿವೃತ್ತ ಸೇನಾಧಿಕಾರಿ ಡಿ.ಎಸ್.ಗಣೇಶ್ ಭಟ್ ದೀಪ ಬೆಳಗಿಸಿ ಉದ್ಘಾಟಿಸಿ, ಶುಭಹಾರೈಸಿದರು. ಕಾಲೇಜಿನ ಸಂಚಾಲಕ ಕೆ ಆರ್ ಗಂಗಾಧರ್ ಅಮೃತ ಮಹೋತ್ಸವ ಆಚರಣೆಯ ಮಹತ್ವ ಕುರಿತು ಮಾತನಾಡಿದರು. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಣ ಸಂಸ್ಥೆಯ ಹದಿನಾರು ಹಿರಿಯ ವಿದ್ಯಾರ್ಥಿಗಳಾದ ಸಾರ್ಜೆಂಟ್ ಗಣೇಶ್ ಡಿ.ಎಸ್. ಭಟ್, ನಾಯಕ್ ಹರಿಶ್ಚಂದ್ರ ಅಳಿಕೆ, ಹೆಡ್ ಕಾನ್ಸ್ಟೇಬಲ್ ಜನಾರ್ದನ ಇರ್ಣೆ., ಹವಾಲ್ದಾರ್ ಮೋನಪ್ಪ ಬಿ.ಕೆ, ಹವಾಲ್ದಾರ್ ಲಿಂಗಪ್ಪ ಎಂ.ಎ. ಮೇಲಡ್ತಲೆ, ಹವಾಲ್ದಾರ್ ಯಶೋಧರ ಪಾರೆ ಮಜಲು, ಹವಾಲ್ದಾರ್ ಪದ್ಮನಾಭ ಬಿಳಿಯಾರು, ಹವಾಲ್ದಾರ್ ಲಕ್ಷ್ಮೀನಾರಾಯಣ ಪೇರಡ್ಕ, ಕಾನ್ಸ್ಟೇಬಲ್ ನೇಮಿರಾಜ್ ಅಮೆಚೂರ್ ಪಾರೆ, ಸುಬೇದಾರ್ ರಾಜಾರಾಮ್ ಬಿಳಿಯಾರು, ಕಾನ್ಸ್ಟೇಬಲ್ ಪಸಿಲು ಅರಂತೋಡು, ಹೆಡ್ ಕಾನ್ಸ್ಟೇಬಲ್ ಚಂದ್ರಶೇಖರ ನೆಲ್ಲಿಂಬಾಡಿ, ರಾಜೇಶ್ ಕರೀಂಬಿ, ಮಹೇಶ್ ಡಿ.ಸಿ, ಬಿಳಿಯಾರು, ಹವಾಲ್ದಾರ್ ನವೀನ್ ಕೆ.ಜಿ ಗೂನಡ್ಕ ಬೈಲೆ, ಹವಾಲ್ದಾರ್ ನವೀನ್ ಪಿಂಡಿಮನೆ ಗೌರವ ಸನ್ಮಾನ ಸ್ವೀಕರಿಸಿದರು. ವೇದಿಕೆಯಲ್ಲಿ ಆಡಳಿತ ಮಂಡಳಿ ಕಾರ್ಯದರ್ಶಿ ಕೆ.ಆರ್.ಪದ್ಮನಾಭ ಉಪಸ್ಥಿತರಿದ್ದರು. ಅಧ್ಯಕ್ಷರಾದ ಪಿ.ಬಿ.ದಿವಾಕರ ರೈ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ರಮೇಶ್ ಸ್ವಾಗತಿಸಿ, ಮುಖ್ಯೋಪಾಧ್ಯಾಯ ಸೀತಾರಾಮ ಎಂ.ಕೆ ಧನ್ಯವಾದ ಸಲ್ಲಿಸಿದರು. ಶಿಕ್ಷಕ ಕಿಶೋರ್ ಕಿರ್ಲಾಯ ಕಾರ್ಯಕ್ರಮ ನಿರೂಪಿಸಿದರು. ಮೋಹನ್ ಚಂದ್ರ, ಪದ್ಮಕುಮಾರ್, ಮನೋಜ್, ಸಂದೇಶ್ ಕುಮಾರ್, ಸೋಮಶೇಖರ್, ಸುರೇಶ್ ವಾಗ್ಲೆ, ಗೌರಿಶಂಕರ, ಜಯರಾಮ್, ಅಶ್ವಿನಿ,ಶಾಂತಿ, ಧನ್ಯರಾಜ್, ಸಹಕರಿಸಿದರು. ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Leave a Reply

error: Content is protected !!