ಕಾಂಚನ: ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯ ರಜತ ಮಹೋತ್ಸವ ಕಾರ್ಯಕ್ರಮ

ಶೇರ್ ಮಾಡಿ

ನೇಸರ ಆ.17: ವಿಕ್ರಂ ಯುವಕ ಮಂಡಲ (ರಿ) ಕಾಂಚನ ಇದರ 25ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯ ‘ರಜತ ಮಹೋತ್ಸವ’ ಕಾರ್ಯಕ್ರಮ ಕಾಂಚನ ವೆಂಕಟ ಸುಬ್ರಹ್ಮಣ್ಯಂ ಸ್ಮಾರಕ ಪ್ರೌಢಶಾಲೆಯಲ್ಲಿ ನಡೆಯಲಿದೆ.ಬೆಳಿಗ್ಗೆ ಗಂಟೆ 8: ರಿಂದ 8:30ರ ತನಕ ಭಜನಾ ಕಾರ್ಯಕ್ರಮ.ನಂತರ ಪುಟಾಣಿ ಮಕ್ಕಳಿಗೆ ಕೃಷ್ಣ ವೇಷ ಸ್ಪರ್ಧೆ, ವಿವಿಧ ವಯೋಮಾನದ ಬಾಲಕ ಮತ್ತು ಬಾಲಕಿಯರಿಗೆ,ಪುರುಷರಿಗೆ ಮತ್ತು ಮಹಿಳೆಯರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯುತ್ತವೆ.ಸಂಜೆ 6:00ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ.

ಉದ್ಘಾಟಕರು ಸುಬ್ರಹ್ಮಣ್ಯ ಪ್ರಸಾದ್ ಅಗರ್ತಿಮಾರು, ಸಭಾ ಅಧ್ಯಕ್ಷತೆ ಡೆನ್ನಿಸ್ ಪಿಂಟೊ ಪುಯಿಲ, ಮಾಜಿ ಅಧ್ಯಕ್ಷರು, ವಿಕ್ರಂ ಯುವಕ ಮಂಡಲ ಕಾಂಚನ, ಮುಖ್ಯ ಅತಿಥಿಗಳು ಶ್ರೀಮತಿ ಸ್ಮಿತಾ ಧನಂಜಯ ಪುಯಿಲ, ಉಪಾಧ್ಯಕ್ಷರು, ಗ್ರಾಮ ಪಂಚಾಯತ್ ಬಜತ್ತೂರು, ರವೀಂದ್ರ ಭಟ್ ಕಲ್ಲಕಟ್ಟ, ಸೂರ್ಯ ಪ್ರಕಾಶ ಉಡುಪ ಮುದ್ಯ, ಮುಖ್ಯ ಗುರುಗಳು ಕಾಂಚನ ವೆಂಕಟ ಸುಬ್ರಹ್ಮಣ್ಯಂ ಸ್ಮಾರಕ ಪ್ರೌಢಶಾಲೆ, ಲಕ್ಷಣ್ ಗೌಡ, ಮುಖ್ಯ ಗುರುಗಳು ಲಕ್ಷ್ಮೀ ನಾರಾಯಣ ಹಿರಿಯ ಪ್ರಾಥಮಿಕ ಶಾಲೆ ಕಾಂಚನ, ಗೌರವ ಉಪಸ್ಥಿತಿ ಮುಕುಂದ ಗೌಡ ನಡ್ಪ ಮಾಜಿ ಸದಸ್ಯರು ತಾಲೂಕು ಪಂಚಾಯತ್ ಪುತ್ತೂರು, ಉಮೇಶ್ ನೆಕ್ಕರೆ, ಗೌರವಾಧ್ಯಕ್ಷರು ವಿಕ್ರಂ ಯುವಕ ಮಂಡಲ ಕಾಂಚನ, ಅನಿಲ್ ಪಿಂಟೊ ಪುಯಿಲ ಅಧ್ಯಕ್ಷರು, ವಿಕ್ರಮ ಯುವಕ ಮಂಡಲ ಕಾಂಚನ. ಸ್ಥಳೀಯ ಕಾಂಚನ ವಿದ್ಯಾ ಸಂಸ್ಥೆಯ ನಿವೃತ್ತ ಮುಖ್ಯ ಗುರುಗಳಾದ ಸುಬ್ರಹ್ಮಣ್ಯ ಭಟ್, ಹರ್ಷ ಕುಮಾರ್, ನಿವೃತ್ತ ಶಿಕ್ಷಕರಾದ ಸುಬ್ರಹ್ಮಣ್ಯ ಉಪಾಧ್ಯಾಯ, ಕೃಷ್ಣಪ್ಪ ಗೌಡ ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ರಾತ್ರಿ ಗಂಟೆ 8:30 ರಿಂದ ವಿಠಲ್ ನಾಯಕ್ ಕಲ್ಲಡ್ಕ ಇವರಿಂದ ಗೀತಾ ಸಾಹಿತ್ಯ ಸಂಭ್ರಮ ನಡೆಯಲಿದೆ.

Leave a Reply

error: Content is protected !!