ಕರ್ನಾಟಕ ಸೀರೋಮಲಬಾರ್ ಕೆಥೋಲಿಕ್ ಅಸೋಸಿಯೇಶನ್ ನೂತನ ಪದಾಧಿಕಾರಿಗಳ ಆಯ್ಕೆ

ಶೇರ್ ಮಾಡಿ

NESARA|| WhatsApp ||GROUPS

   
                          

 

  
                                                     

 

ನೇಸರ ಆ.17: ಬೆಳ್ತಂಗಡಿಯ ಜ್ಞಾನನಿಲಯ ಕೇಂದ್ರ ಕಚೇರಿಯಲ್ಲಿ ನಡೆದ ಕರ್ನಾಟಕ ಸೀರೋಮಲಬಾರ್ ಕೆಥೋಲಿಕ್ ಅಸೋಸಿಯೇಶನ್ ನ ಕಾರ್ಯಕಾರಿ ಸಮಿತಿಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಕೆ ಎಸ್ ಎಂ ಸಿ ಎ ಎಂಬ ಹೆಸರಿನಲ್ಲಿ ಸಿರೋಮಲಬಾರ್ ಕ್ರೈಸ್ತರ ಸಾಮಾಜಿಕ ಸಂಘಟನೆಯಾಗಿರುವ ಇದು ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಗೆ ಸೇರಿದ ಸಿರೋಮಲಬಾರ್ ಕ್ರೈಸ್ತರು ಇದರ ಸದಸ್ಯರಾಗಿದ್ದು ಮೂರು ಹಂತದ ಆಡಳಿತ ವ್ಯವಸ್ಥೆ ಈ ಸಂಘಟನೆ ಹೊಂದಿದೆ.
2022-24ನೇ ಸಾಲಿನ ಅಧ್ಯಕ್ಷರಾಗಿ ಗುತ್ತಿಗಾರಿನ ಬಿಟ್ಟಿ ನೆಡುನಿಲಮ್, ಉಪಾಧ್ಯಕ್ಷರುಗಳಾಗಿ ಮುದೂರಿನ ಬೆನ್ನಿ ಕೋಲಾಂಚೇರಿ, ಮೂರ್ನಾಡಿನ ಮ್ಯಾಥ್ಯೂ, ಕಾರ್ಯದರ್ಶಿಯಾಗಿ ಗಂಡಿಬಾಗಿಲಿನ ಸೆಬಾಸ್ಟಿನ್ ಎಂ.ಜೆ, ಕೋಶಾಧಿಕಾರಿಯಾಗಿ ಅಡ್ಡಹೊಳೆಯ ಜಿಮ್ಮಿ,
ಜತೆ ಕಾರ್ಯದರ್ಶಿಯಾಗಿ ಬೆಳ್ತಂಗಡಿಯ ಅಲ್ಪೊನ್ಸ್ ಪುತ್ತೆನ್ ಕುಡಿ, ಕಾರ್ಯಕಾರಿ ಸದಸ್ಯರುಗಳಾಗಿ ಜಾರ್ಜ್ ಟಿ.ವಿ. ಮಂಗಳೂರು, ಸೆಬಾಸ್ಟಿನ್ ಪೊಕ್ಕಂತಾಡಿ ಮುಂಡಾಜೆ, ರೀನಾ ಶಿಬಿ ಧರ್ಮಸ್ಥಳ ಆಯ್ಕೆಯಾದರು.
ಚುನಾವಣೆಯನ್ನು ಫಾ.ತೋಮಸ್ ನಡೆಸಿ ಕೊಟ್ಟರು. ಧರ್ಮಪ್ರಾಂತಿಯ ನಿರ್ದೇಶಕರಾದ ಷಾಜಿ ಮ್ಯಾಥ್ಯೂ ನಿಕಟಪೂರ್ವ ಅಧ್ಯಕ್ಷ ಸಬಾಸ್ಟಿನ್ ಕೆ.ಕೆ, ಜೋರ್ಜ್ ವಡಕ್ಕೆಲ್, ಪ್ರದೀಪ್ ಕೆ.ಸಿ. ಸಹಕರಿಸಿದರು. ಆಯ್ಕೆಯ ಬಳಿಕ ಪದಾಧಿಕಾರಿಗಳು ಬಿಷಪ್ ಲಾರೆನ್ಸ್ ಮುಕ್ಕುಯಿ ಅವರಿಂದ ಆಶೀರ್ವಾದ ಪಡೆದರು.

Leave a Reply

error: Content is protected !!