
ನೇಸರ ಆ.17: ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆಯ 15,000 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಇದೀಗ ಫಲಿತಾಂಶ ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ತಮ್ಮ ವೈಯಕ್ತಿಕ ಅಂಕಗಳನ್ನು ಚೆಕ್ ಮಾಡಲು ಅವಕಾಶ ನೀಡಲಾಗಿದೆ. ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಲಾದ ಲಿಂಕ್ ಕ್ಲಿಕ್ ಮಾಡಿ, ಲಾಗಿನ್ ಆಗುವ ಮೂಲಕ ಚೆಕ್ ಮಾಡಬಹುದಾಗಿದೆ.
ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಫಲಿತಾಂಶ ಚೆಕ್ ಮಾಡಲು ಭೇಟಿ ನೀಡಬೇಕಾದ ವೆಬ್‌ಸೈಟ್ ವಿಳಾಸ :
https://www.schooleducation.kar.nic.in/index.html
ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆಯು 2022 ರ ಮಾರ್ಚ್ /ಏಪ್ರಿಲ್ ತಿಂಗಳಲ್ಲಿ ಅರ್ಜಿ ಸ್ವೀಕಾರ ಮಾಡಿತ್ತು. ಹಾಗೂ ಮೇ 21, 22 ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಸಿತ್ತು. ಇದೀಗ ಈ ನೇಮಕ ಪ್ರಕ್ರಿಯೆಯ ಗಣಕೀಕೃತ ಮೌಲ್ಯಮಾಪನ ಕಾರ್ಯ ಮುಗಿಸಿದ್ದು ಫಲಿತಾಂಶ ಬಿಡುಗಡೆ ಮಾಡಿದೆ.
ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯ ಸಿಇಟಿ ಅಂಕಗಳನ್ನು ಮತ್ತು ಮೀಸಲಾತಿ ವಿವರಗಳನ್ನು ಹೊರತುಪಡಿಸಿ, ಆನ್‌ಲೈನ್ ಅರ್ಜಿಯಲ್ಲಿನ ವೈಯಕ್ತಿಕ ವಿವರಗಳಾದ ಅಭ್ಯರ್ಥಿಯ ಹೆಸರು, ಅಭ್ಯರ್ಥಿಯ ತಂದೆ ಮತ್ತು ತಾಯಿಯ ಹೆಸರು, ಜನ್ಮ ದಿನಾಂಕ, ಪದವಿ, ಬಿ.ಇಡಿ/ ಡಿ.ಎಲ್.ಇಡಿ ಮತ್ತು ಸಿಟಿಇಟಿ / ಟಿಇಟಿ ಅಂಕಗಳಿಗೆ ಸಂಬಂಧಿಸಿದಂತೆ ಮಾತ್ರ ತಿದ್ದುಪಡಿಗೆ ದಿನಾಂಕ 18-08-2022 ರಿಂದ 24-08-2022 ಅವಕಾಶ ಕಲ್ಪಿಸಲಾಗಿದೆ. ಅಭ್ಯರ್ಥಿಗಳು ತಿದ್ದುಪಡಿ ಅಗತ್ಯವಿರುವ ಮಾಹಿತಿಗಳನ್ನು ಮಾತ್ರ ತಮ್ಮ ಮನವಿಯನ್ನು ಅಗತ್ಯ ದೃಢೀಕೃತ ಪ್ರಮಾಣ ಪತ್ರಗಳೊಂದಿಗೆ, ವಿಶೇಷಾಧಿಕಾರಿ, ಕೇಂದ್ರೀಕೃತ ದಾಖಲಾತಿ ಘಟಕ, ಕೆ.ಜಿ ರಸ್ತೆ, ಬೆಂಗಳೂರು ಇವರಿಗೆ ಖುದ್ದಾಗಿ ಸಲ್ಲಿಸಲು ಸೂಚಿಸಲಾಗಿದೆ.
ದಿನಾಂಕ 24-08-2022 ರ ನಂತರ ಯಾವುದೇ ಮನವಿಗಳನ್ನು ಪರಿಗಣಿಸಲಾಗುವುದಿಲ್ಲ.
ಶಿಕ್ಷಕರ ನೇಮಕಾತಿಯ ಸಿಇಟಿ ವೈಯಕ್ತಿಕ ಅಂಕಗಳನ್ನು ಚೆಕ್ ಮಾಡುವುದು ಹೇಗೆ?
- ವೆಬ್ ವಿಳಾಸ http://sts.karnataka.gov.in/GPSTRNHK/Relogin.aspx ಗೆ ಭೇಟಿ ನೀಡಿ.
- ಓಪನ್ ಆದ ಪೇಜ್‌ನಲ್ಲಿ ಅಪ್ಲಿಕೇಶನ್ ನಂಬರ್, ಜನ್ಮ ದಿನಾಂಕ ಮಾಹಿತಿ ನೀಡಿ.
- ‘SUBMIT’ ಎಂದಿರುವಲ್ಲಿ ಕ್ಲಿಕ್ ಮಾಡಿ.
- ನಂತರ ಓಪನ್ ಆಗುವ ಪೇಜ್‌ನಲ್ಲಿ ಸಿಇಟಿ ಅಂಕಗಳು ಪ್ರದರ್ಶಿತವಾಗುತ್ತವೆ.
- ಚೆಕ್ ಮಾಡಿಕೊಳ್ಳಬಹುದು.


